54 ವರ್ಷದ ಮಹಿಳೆಯನ್ನು ಜೀವಂತ ನುಗ್ಗಿದ ಹೆಬ್ಬಾವು

0
312

ಸನ್ಮಾರ್ಗ ವಾರ್ತೆ

ಜಕಾರ್ತ: ಇಂಡೊನೇಷ್ಯದಲ್ಲಿ 54 ವರ್ಷದ ಮಹಿಳೆಯನ್ನು ಬೃಹತ್ ಹೆಬ್ಬಾವೊಂದು ಜೀವಂತವಾಗಿ ನುಂಗಿ ಹಾಕಿದ ಘಟನೆ ಬಂತಾರ ಜಂಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ರಬ್ಬರ್ ಸಂಗ್ರಹಿಸಲು ಮಹಿಳೆ ಕಾಡಿಗೆ ಹೋಗಿದ್ದರು ಎಂಬುದಾಗಿ ವರದಿಯಾಗಿದ್ದು, ಜಹ್ರಾ ಎಂಬ ಮಹಿಳೆ ಹೆಬ್ಬಾವಿನ ಬಾಯಿಗೆ ಆಹಾರವಾದ ದುರ್ದೈವಿ.

ಕಾಡಿಗೆ ಹೋದ ಜಹ್ರಾ ಶುಕ್ರವಾರದಿಂದ ಕಾಣೆಯಾಗಿದ್ದರು. ನಂತರ ಸ್ಥಳೀಯರು ಅವರನ್ನು ಹುಡುಕ ತೊಡಗಿದರು. ಆಗ ಹೊಟ್ಟೆ ಉಬ್ಬಿದ ಮತ್ತು ತೆವಳಲು ಕಷ್ಟಪಡುತ್ತಿದ್ದ 22 ಅಡಿ ಉದ್ದದ ದೊಡ್ಡ ಹೆಬ್ಬಾವು ಅವರಿಗೆ ಕಾಣಸಿಕ್ಕಿತು. ಸಂದೇಹಗೊಂಡ ಊರವರು ಹೆಬ್ಬಾವಿನ ಹೊಟ್ಟೆ ಸೀಳಿ ನೋಡಿದಾಗ ಜಹ್ರಾರ ದೇಹದ ಅವಶೇಷಗಳು ಪತ್ತೆಯಾಗಿವೆ. ಆದರೆ ಕಾಡಿನಲ್ಲಿ ಇಂತಹ ಇನ್ನಷ್ಟು ಹೆಬ್ಬಾವುಗಳು ಇವೆಯೇ ಎಂಬುದು ಇಲ್ಲಿನ ನಿವಾಸಿಗಳನ್ನು ಆತಂಕಕ್ಕೆ ತಳ್ಳಿದೆ.