ಮಮತಾರಿಗೆ ಕಾರಿನ ಡೋರ್ ಬಡಿದು ಗಾಯವಾಗಿದೆ: ಚುನಾವಣಾ ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ವರದಿ

0
601

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಕಾಲಿಗೆ ಕಾರಿನ ಡೋರ್ ಬಡಿದು ಗಾಯವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪ್ಪನ್ ಬಂದೋಪಾಧ್ಯಾಯ ಚುನಾವಣಾ ಆಯೋಗಕ್ಕೆ ಈ ರೀತಿ ವರದಿ ಸಲ್ಲಿಸಿದವರು. ಚುನಾವಣಾ ಆಯೋಗ ಅಧಿಕಾರಿಯ ವರದಿಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿತು.

ಮಮತಾ ಬ್ಯಾನರ್ಜಿಯವರು ಸದ್ಯ ಕೋಲ್ಕತ್ತಾದ ಎಸ್‍ಕೆಕೆಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾರಿನ ಡೋರ್ ಬಡಿದು ಅವರು ಗಾಯಗೊಂಡರು ಎಂದು ಹೇಳುವಾಗ ಅದು ಹೇಗೆ ಆಯಿತೆಂದು ವರದಿಯಲ್ಲಿ ಹೇಳಿಲ್ಲ. ಮಮತಾರನ್ನು ಗುರಿಯಿಟ್ಟು ಕೆಲವರು ಉದ್ದೇಶ ಪೂರ್ವಕವಾಗಿ ಕಾರಿನ ಡೋರ್ ಉಪಯೋಗಿಸಿ ಗಾಯಗೊಳಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಆದರೆ ಇದಕ್ಕೆ ಪೂರಕವಾದ ಯಾವುದೂ ವರದಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ವಿವರವುಳ್ಳ ವರದಿ ನೀಡುವಂತೆ ಕೋರಿದೆ.

ಮಾರ್ಚ್ 10ಕ್ಕೆ ಘಟನೆ ನಡೆದಾಗ ನಂದಿ ಗ್ರಾಮದಲ್ಲಿ ದೊಡ್ಡ ಜನಸಂದಣಿ ಇತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ವೇಳೆ ಹಿರಿಯ ಬಿಜೆಪಿ ಸಚಿವ ಪಿಯೂಷ್ ಗೋಯಲ್ , ಸಂಸದ ಭೂಪಿಂದರ್ ಯಾದವ್ ದಿಲ್ಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಮಮತಾ ಗಾಯಗೊಂಡಿರುವುದನ್ನು ಇಟ್ಟುಕೊಂಡು ನಾಟಕ ಆಡುತ್ತಿದೆ ಎಂದು ಅವರು ದೂರಿದ್ದಾರೆ.