ನ್ಯೂಯಾರ್ಕ್‌ಗೆ ಮೋದಿ ಭೇಟಿ ಕೊಡುವುದಕ್ಕಿಂತ ಮೊದಲು ಉಮರ್ ಖಾಲಿದ್ ಜೈಲಿನ ಪತ್ರವನ್ನು ಸಭೆಯಲ್ಲಿ ವಾಚಿಸಿದ್ದ ಮಮ್ದಾನಿ

0
936

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್ ಮೇಯರ್ ಮಮ್ದಾನಿ ಅವರ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಗಿಂತ ಮೊದಲು ನ್ಯೂಯಾರ್ಕ್ ನಲ್ಲಿ ನಡೆದ ಸಭೆಯಲ್ಲಿ ಅವರ ಆಡಿದ ಮಾತಿನ ವಿಡಿಯೋ ಇದಾಗಿದೆ. ಉಮರ ಖಾಲಿದ್ ಅವರು ಜೈಲಿನ ಅನುಭವಗಳ ಕುರಿತಂತೆ ಬರೆದ ಬರಹವನ್ನು ಅವರು ವೇದಿಕೆಯಲ್ಲಿ ಹಂಚಿಕೊಂಡ ವಿಡಿಯೋ ಇದು.

ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕಾಲರ್ ಮತ್ತು ವಿದ್ಯಾರ್ಥಿ ಆಕ್ಟಿವಿಸ್ ಆಗಿರುವ ಉಮರ್ ಖಾಲಿದ್ ಅವರ ಒಂದು ಪತ್ರವನ್ನು ನಾನಿವತ್ತು ಓದುತ್ತಿದ್ದೇನೆ. ಯುಎಪಿಎ ಪ್ರಕರಣ ದಡಿ ಇವರು ಸಾವಿರ ದಿನಗಳಿಗಿಂತಲೂ ಅಧಿಕ ಸಮಯವನ್ನು ಜೈಲಲ್ಲಿ ಕಳೆಯುತ್ತಿದ್ದಾರೆ. ಇವರ ಜಾಮೀನು ಕೋರಿಕೆಯನ್ನು ನಿರಂತರ ನಿರಾಕರಿಸಲಾಗುತ್ತಿದೆ. ಈವರೆಗೆ ಇವರ ವಿಚಾರಣೆಯೇ ನಡೆದಿಲ್ಲ. ಗುಂಪು ಥಳಿತ ಮತ್ತು ದ್ವೇಷ ಭಾಷಣಗಳ ವಿರುದ್ಧ ಇವರು ಅಭಿಯಾನ ನಡೆಸಿದ್ದಾರೆ ಎಂಬ ಟಿಪ್ಪಣಿಯೊಂದಿಗೆ ಮಮ್ದಾನಿ ಈ ಪತ್ರವನ್ನು ಓದಿದ್ದರು.

ಜೈಲಿನ ಒಳಗಿನ ಅನುಭವವನ್ನು ಉಮರ್ ಖಾಲಿದ್ ಪತ್ರದಲ್ಲಿ ವಿವರಿಸಿದ್ದರು. ತಿಹಾರ್ ಜೈಲಿನ ಒಳಗಿನ ಸ್ಥಿತಿಯನ್ನು ವಿವರಿಸಿದ್ದರು . ಮೊದಲ ಬಾರಿ ಜೈಲಿನಿಂದ ನ್ಯಾಯಾಲಯಕ್ಕೆ ಬರುತ್ತಿರುವ ಸಂದರ್ಭದಲ್ಲಿ ಮೊಟ್ಟಮೊದಲಬಾರಿ ಸೂರ್ಯನನ್ನು ನೋಡಿದ ಅನುಭವವಾದಂತೆ ಅದರಲ್ಲಿ ಹೇಳಿಕೊಂಡಿದ್ದರು. ಆಗ ರೈತ ಪ್ರತಿಭಟನೆಯ ಸಮಯವಾಗಿತ್ತು ರೈತರನ್ನು ದಾಟಿ ಪೊಲೀಸ್ ವಾಹನದಲ್ಲಿ ಮುಂದೆ ಹೋಗಿರುವುದನ್ನು ಅವರು ಹೇಳಿಕೊಂಡಿದ್ದರು.

ಈ ಧೀರ್ಘ ಪತ್ರವನ್ನು ಮಮ್ದಾನಿ ಆ ಸಭೆಯಲ್ಲಿ ಓದಿದ್ದರು.