ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ ಐದು ಕೋಟಿ, ಪತ್ನಿಗೆ ಉದ್ಯೋಗ ಘೋಷಿಸಿದ ತೆಲಂಗಾಣ ಸರಕಾರ

0
463

ಸನ್ಮಾರ್ಗ ವಾರ್ತೆ

ಹೈದರಾಬಾದ್,ಜೂ.20: ಗಲ್ವಾನ್ ವ್ಯಾಲಿಯಲ್ಲಿ ಚೀನಾದ ಸೇನೆಯೊಂದಿಗೆ ಘರ್ಷಣೆಯಲ್ಲಿ ಹುತಾತ್ಮರಾಗಿರುವ ಕರ್ನಲ್ ಸಂತೋಷ್ ಬಾಬುರ ಕುಟುಂಬಕ್ಕೆ ತೆಲಂಗಾಣ ಸರಕಾರ ಐದು ಕೋಟಿ ರೂಪಾಯಿ ನೀಡಲಿದೆ ಎಂದು ಮುಖ್ಯಮಂತ್ರಿ ಕೆ.ಪಿ. ಚಂದ್ರ ಶೇಖರ ರಾವ್ ಘೋಷಿಸಿದೆ. ಕುಟುಂಬಕ್ಕೆ ಮನೆ ಕಟ್ಟಲು ಜಮೀನು ಮತ್ತು ಸಂತೋಷ್‍ರ ಪತ್ನಿಗೆ ಕೆಲಸವನ್ನೂ ನೀಡಲಾಗುವುದು. ಸಂತೋಷ್‍ರ ಮನೆಗೆ ಹೋಗಿ ಸಂಬಂಧಿಕರನ್ನು ಸಂದರ್ಶಿಸುವೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕರ್ನಲ್ ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟ್ ನಿವಾಸಿಯಾಗಿದ್ದಾರೆ.

ಊರಿಗೆ ತಂದ ಮೃತದೇಹವನ್ನು ಗುರುವಾರ ಪೂರ್ಣ ಸೈನಿಕ ಗೌರವದೊಂದಿಗೆ ಸಂಸ್ಕರಿಸಲಾಯಿತು. ಸಚಿವರು, ಸಂಸದರು, ಶಾಸಕರು, ರಾಜಕೀಯ ನಾಯಕರು ಮೃತದೇಹ ಸಂಸ್ಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸೈನಿಕರ ಕುಟುಂಬವನ್ನು ಸಂರಕ್ಷಿಸಲು ಮುಂದೆ ಬರಬೇಕು ಮತ್ತು ಸೈನಿಕರ ಕುಟುಂಬಗಳಿಗೆ ತಮಗೆ ಬೆಂಬಲವಿದೆ ಎಂಬ ಅನಿಸಿಕೆ ಮೂಡುತ್ತದೆ ಎಂದು ಅವರು ಹೇಳಿದರು. ಘರ್ಷಣೆಯಲ್ಲಿ ಸಂತೋಷ್ ಬಾಬು ಜೊತೆ ಮೃತಪಟ್ಟಿರುವ 19 ಸೈನಿಕರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂಪಾಯಿಯನ್ನು ತೆಲಂಗಾಣ ಸರಕಾರ ಘೋಷಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.