ಸನ್ಮಾರ್ಗ ವಾರ್ತೆ
ಲಕ್ನೊ: ಉತ್ತರ ಪ್ರದೇಶ ಮಸೀದಿಯಲ್ಲಿ ಪ್ರಾತಃಕಾಲದ ನಮಾಝ್ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಸಿದ್ಧಾರ್ಥ ನಗರದ ಚಿಲಿಯ ಪ್ರದೇಶದ ಕೊಲುವಾ ಗ್ರಾಮದಲ್ಲಿ ಘಟನೆ ನಡೆದಿದ್ದು 55 ವರ್ಷದ ಖಮರುಝ್ಝಮಾನ್ ನಮಾಝ್ನ ವೇಳೆ ಗುಂಡಿಗೆ ಬಲಿಯಾಗಿದ್ದಾರೆ. ಬೆಳಗ್ಗೆ ಐದು ಗಂಟೆಗೆ ಈ ದುರ್ಘಟನೆ ನಡೆದಿದೆ.
ಬೆಳಗ್ಗಿನ ಅದಾನ್ನ ನಂತರ ಖಮರುಝ್ಝಮಾನ್ ಪವಿತ್ರ ಕುರ್ಆನ್ ಪಾರಾಯಣ ಮಾಡುತ್ತಿದ್ದರು. ಹಿಂದಿನಿಂದ ಬಂದ ಅಜ್ಞಾತ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತಿಸಲಾಗಿಲ್ಲ ಎಂದು ಹೆಚ್ಚುವರಿ ಎಸ್ಪಿ ಸುರೇಶ್ ಚಂದ್ ಹೇಳಿದ್ದಾರೆ. ಪೊಲೀಸರು ಬಂದು ಮೃತದೇಹವವನ್ನು ಪೋಸ್ಟ್ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಘಟನೆಯಲ್ಲಿ ತನಿಖೆ ನಡೆಯುತ್ತಿದೆ.












