ಸನ್ಮಾರ್ಗ ವಾರ್ತೆ
ಮುಂಬೈ: ನಹ್ವಾ ಶೇವ ಬಂದರಿನಲ್ಲಿ 25 ಕಿಲೊ ಗ್ರಾಂ ಹೆರಾಯಿನ್ ಡಿಆರ್‌ಇ (ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜೆಂಟ್) ವಶಪಡಿಸಿಕೊಂಡಿದ್ದು ಉದ್ಯಮಿ ಜಯೇಶ್ ಶಾಗ್ವಿ(62) ಎಂಬಾತನನ್ನು ಬಂಧಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 150 ಕೋಟಿ ರೂಪಾಯಿ ಆಗಿದೆ.
ಕಡಲೆಯೆಣ್ಣೆಯೊಂದಿಗೆ ಇರಾನಿನಿಂದ ಬಂದ ಕಂಟೈನರ್‌ನಲ್ಲಿ ಹೆರಾಯಿನ್ ಇಟ್ಟು ಕಳುಹಿಸಲಾಗಿದೆ. ಅಕ್ಟೋಬರ್ 4ಕ್ಕೆ ಬಂದರಿಗೆ ಬಂದ ಕಂಟೈನರ್ ಡಿಆರ್‍ಐ ತಡೆಹಿಡಿದಿತ್ತು. ತಪಾಸಣೆ ನಡೆಸಿದಾಗ ಹೆರಾಯಿನ್ ಪತ್ತೆಯಾಗಿದೆ.
ಬಂದರುಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಮಾದಕವಸ್ತು ಈ ಹಿಂದೆಯೂ ವಶಪಡಿಸಿಕೊಳ್ಳಲಾಗಿತ್ತು. ಅದಾನಿಯ ನಿಯಂತ್ರಣದಲ್ಲಿರುವ ಗುಜರಾತಿನ ಮುಂದ್ರ ಬಂದರಿನಲ್ಲಿ 20,000 ಕೋಟಿ ರೂಪಾಯಿಯ ಮಾದಕವಸ್ತು ಕಳೆದ ತಿಂಗಳು ಪತ್ತೆಯಾಗಿತ್ತು. ಟಾಲ್ಕಂ ಪೌಡರ್ ಎಂದು ಅಫ್ಘಾನಿಸ್ತಾನದಿಂದ ಮಾದಕವಸ್ತು ಕಳ್ಳಸಾಗಾಟಕ್ಕೆ ಯತ್ನಿಸಲಾಗಿತ್ತು.
25 ಕೋಟಿ ರೂಪಾಯಿಯ ಐದು ಕಿಲೊ ಹೆರಾಯಿನ್‍ನೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಮ್ಮ ಮಗನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ದಕ್ಷಿಣಾಫ್ರಿಕದ ಜೊಹಾನ್ಸ್ ಬರ್ಗ್‍ನಿಂದ ಇವರು ಆಗಮಿಸಿದ್ದರು.












