ಮಂಗಳೂರು ಹಳೆ ವಿಮಾನ ನಿಲ್ದಾಣದ ಬಳಿ ಅಪರಿಚಿತನಿಂದ ಓಡಾಟ: ಅಕ್ರಮ ಪ್ರವೇಶದಡಿ ದೂರು ದಾಖಲು

0
427

ಸನ್ಮಾರ್ಗ ವಾರ್ತೆ

ಮಂಗಳೂರು: ಹಳೆ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅಕ್ರಮ ಪ್ರವೇಶದಡಿ ದೂರು ದಾಖಲಿಸಿಕೊಳ್ಳಲಾಗಿದೆ.

ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ದಾರಿ ತಪ್ಪಿ ಬಂದಿರುವುದಾಗಿ ಹೇಳಿದ್ದಾನೆ. ಸೋಮವಾರ ರಾತ್ರಿ 11 ಗಂಟೆ ಸಮಯಕ್ಕೆ ಸಿಐಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಹಳೇಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ‌ ರನ್ ವೇ ಕಾಮಗಾರಿ ನಡೆಯುತ್ತಿದ್ದು ಆ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಕಂಡು ಬಂದಿದ್ದು ಆತನನ್ನು ಹಿಡಿದು ವಿಚಾರಿಸಿದಾಗ ಹೆಸರು ರಾಕೇಶ್ ಎಂದು ಹೇಳಿದ್ದಾನೆ. ತಾನು ಬಧುಹಾ ಗ್ರಾಮ ಮುರ್ಸಿದಾಬಾದ ಪಶ್ಚಿಮ ಬಂಗಾಲದವನೆಂದು ತಿಳಿಸಿದ್ದು ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು ಇಲ್ಲೇ ಸಮೀಪದಲ್ಲಿ ಲಾರಿ ಡ್ರೈವರ್ ತನ್ನನ್ನು ಸಂಬಳ ನೀಡದೆ ಬಿಟ್ಟು ಹೋಗಿದ್ದು ದಾರಿ ಕಾಣದೇ ವಿಮಾನ ನಿಲ್ದಾಣ ಎಂದು ತಿಳಿಯದೇ ಈ ಭಾಗಕ್ಕೆ ಬಂದಿರುತ್ತೇನೆ ಎಂದು ತಿಳಿಸಿದ್ದಾನೆ.

ನಂತರ ಸಿಐಎಸ್ಎಫ್ ನವರು ದೂರು ನೀಡಿದಂತೆ ನಿ಼ಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿರುತ್ತಾನೆ ಎಂಬ ದೂರಿನನ್ವಯ ಬಜಪೆ ಠಾಣಾ ಅ.ಕ್ರ 129/2021 ಕಲಂ:448 ಐಪಿಸಿ ಮತ್ತು 3A(b) THE SUPPRESSION OF UNLAWFUL AGAINST SAFETY OF CIVIL AVIATION ACT 1982 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.