ಜೆಎನ್ ಯು ಸೇರಲು ಕೇರಳದಲ್ಲಿ ಮಾರ್ಕ್ ಜಿಹಾದ್ ಮಾಡಲಾಗುತ್ತಿದೆ: ಆರೆಸ್ಸೆಸ್ ನೊಂದಿಗೆ ಸಂಪರ್ಕವಿರುವ ಪ್ರೊಫೆಸರ್ ನಿಂದ ಆರೋಪ

0
828

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇರಳ ವಿದ್ಯಾರ್ಥಿಗಳ ವಿರುದ್ಧ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆರೋಪ ಹೊರಿಸಿದ್ದು, ಕಿರೊರಿ ಕಾಲೇಜಿನ ಫಿಝಿಕ್ಸ್ ಪ್ರೊಫೆಸರ್ ರಾಕೇಶ್ ಕುಮಾರ ಪಾಂಡೆ, ಜೆಎನ್ ಯು ಸೇರಲಿಕ್ಕಾಗಿ ಕೇರಳದಲ್ಲಿ ಮಾರ್ಕ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಇವರು ಆರೆಸ್ಸೆಸ್‍ನೊಂದಿಗೆ ಸಂಬಂಧವಿರುವ ಅಧ್ಯಾಪಕರ ಸಂಘಟನೆಯಾದ ನ್ಯಾಶನಲ್ ಡೆಮಾಕ್ರಾಟಿಕ್ ಟೀಚರ್ಸ್ ಫ್ರಂಟ್‍ನ ಮಾಜಿ ಅಧ್ಯಕ್ಷ ಕೂಡ ಆಗಿದ್ದಾರೆ.

ಕೇರಳದಲ್ಲಿ ಲವ್ ಜಿಹಾದ್‍ನಂತೆ ಮಾರ್ಕ್ ಜಿಹಾದ್ ಕೂಡ ಇದೆ. ಇಷ್ಟು ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರವೇಶ ತೆಗೆದುಕೊಂಡಿರುವುದು ಬಹುದೊಡ್ಡ ವಿಭಾಗದ ಸಂಚು ಆಗಿದೆ ಎಂದು ಈತ ಫೇಸ್‍ಬುಕ್‍ನಲ್ಲಿ ಪೋಸ್ಟ್‌ ನಲ್ಲಿ ಬರೆದಿದ್ದು, ಅದಕ್ಕೆ ಮಾರ್ಕ್ ಜಿಹಾದ್ ಹೆಸರು ಕೊಟ್ಟಿದ್ದಾರೆ.

ಕೇರಳದಿಂದ ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಹೆಚ್ಚು ಅರ್ಜಿಗಳು ಬಂದಿದೆ. ಎಡಪಕ್ಷ ಜೆಎನ್ ಯು ನಲ್ಲಿ ತಂದ ಮಾನದಂಡ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿಯೂ ಜಾರಿಗೊಳಿಸಲಾಗುತ್ತಿದೆ. ಆನ್‍ಲೈನ್ ಪರೀಕ್ಷೆಯಾದ್ದರಿಂದ ಕಳೆದ ಲಾಕ್ ಡೌನ್ ಸಮಯದಲ್ಲಿ ಶೇ.100 ಮಾರ್ಕ್ ಸಿಕ್ಕಿದ್ದರಲ್ಲಿ ಆಶ್ಚರ್ಯವಿಲ್ಲ. ಅದಕ್ಕಿಂತ ಮುಂಚಿನ ಪರಿಸ್ಥಿತಿಯಲ್ಲಿ ಕೇರಳದ ವಿದ್ಯಾರ್ಥಿಗಳು ಶೇ. 100 ಅಂಕ ಪಡೆದುಕೊಂಡಿದ್ದಾರೆ. ಇದು ಇಂತಹ ಸಂಚಿನ ಭಾಗವಾಗಿದೆ. ಈ ವಿದ್ಯಾರ್ಥಿಗಳಿಗೆ ಹಿಂದಿ , ಇಂಗ್ಲಿಷ್‍ಗಳಲ್ಲಿ ಮಾತಾಡಲು ಬರುವುದಿಲ್ಲ ಎಂದು ಪಾಂಡೆ ಹೇಳಿದ್ದಾರೆ.

ಕೇರಳ ಎಡಪಕ್ಷದ ಹಬ್ ಆಗಿದೆ. ಜೆಎನ್‍ಯು ಅವರ ನಿಯಂತ್ರಣದಲ್ಲಿದೆ. ಆದರೆ ದಿಲ್ಲಿ ಯೂನಿವರ್ಸಿಟಿಯನ್ನು ಅವರು ವಶಪಡಿಸಲು ಬಿಡುವುದಿಲ್ಲ. ವಿದ್ಯಾರ್ಥಿಗಳಿಗೆ ಶೇ. 100 ಅಂಕ ಸಿಕ್ಕಿದರೆ ದಿಲ್ಲಿ ಯುನಿವರ್ಸಿಟಿಗೆ ಪ್ರವೇಶ ಸಿಗುತ್ತದೆ ಎಂದು ಅವರಿಗೆ ಗೊತ್ತಿದೆ. ಅದಕ್ಕಾಗಿ ಅವರು ಅದನ್ನು ಮಾಡುತ್ತಿದ್ದಾರೆ ಎಂದು ರಾಕೇಶ್ ಪಾಂಡೆ ಆರೋಪಿಸಿದ್ದಾರೆ.