ಧರ್ಮ ಸೌಹಾರ್ದ: ಲಿಂಗಾಯತ ಮಠದ ದಸರಾ ಉದ್ಘಾಟಿಸಿದ ಮುಸ್ಲಿಂ ನಾಯಕ

0
647

ಸನ್ಮಾರ್ಗ ವಾರ್ತೆ

ಬೆಂಗಳೂರು,ಅ.20: ಧಾರ್ಮಿಕ ಸೌಹಾರ್ದ ಸಂದೇಶದೊಂದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಲಿಂಗಾಯತ ಮಠದ ದಸರಾ ಹಬ್ಬವನ್ನು ಮುಸ್ಲಿಂ ನಾಯಕರೊಬ್ಬರು ಉದ್ಘಾಟಿಸಿದ್ದಾರೆ. 300ವರ್ಷಕ್ಕೂ ಹೆಚ್ಚು ಕಾಲದ ಪರಂಪರೆಯನ್ನು ಹೊಂದಿದ ಹಿರೇಮಠ ಮಠದಲ್ಲಿ ಕರ್ನಾಕಟ ಅಲ್ಪಸಂಖ್ಯಾತ ಅಭಿವೃದ್ಧಿ ಕಾರ್ಪೊರೇಷನ್ ಅಧ್ಯಕ್ಷ ಮುಕ್ತಾರ್ ಪಠಾಣ್ ಹತ್ತು ದಿವಸಗಳ ದಸರಾ ಹಬ್ಬಕ್ಕೆ ದೀಪ ಉರಿಸಿ ಚಾಲನೆ ನೀಡಿದರು.

ಧರ್ಮಮೈತ್ರಿ ಸಂದೇಶದೊಂದಿಗೆ ಹೊರಬಂದ ಜುವೆಲ್ಲರಿಯ ಜಾಹೀರಾತು ವಿರುದ್ಧ ಹಿಂದುತ್ವವಾದಿಗಳ ದಾಳಿಯ ಬಳಿಕ ಉತ್ತರ ಕರ್ನಾಟಕದ ಸಾಮುದಾಯಿಕ ಒಗ್ಗಟ್ಟನ್ನು ಪ್ರದರ್ಶಿಸುವ ಅಂಗವಾಗಿ ಮಠದ ದಸರಾ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮುಕ್ತಾರ್ ಪಠಾಣ್‍ರನ್ನು ಕರೆದಿರುವುದು ಗಮನಾರ್ಹವಾಗಿದೆ.

ಟೋಪಿ ಧರಿಸಿ ದೀಪ ಹಚ್ಚಿದ ಮುಕ್ತಾರ್ ಪಠಾಣ್ ದಸರಾ ಉದ್ಘಾಟಿಸಿದರು. ಮಠಾಧಿಪತಿ ಚಂದ್ರಶೇಖರ ಮಹಾಸ್ವಾಮಿಯವರ ಆಹ್ವಾನವನ್ನು ಸ್ವೀಕರಿಸಿ ಮುಕ್ತಾರ್ ಪಠಾಣ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಮೊದಲ ಬಾರಿ ಇಂತಹ ಬೇರೆ ಧರ್ಮದ ವ್ಯಕ್ತಿಯಿಂದ ದಸರಾ ಉದ್ಘಾಟಿಸಲಾಗಿದೆ.

ಹತ್ತು ದಿವಸದ ಸರಳ ದಸರಾ ಉತ್ಸವದಲ್ಲಿ ಹಿಂದೂ-ಮುಸ್ಲಿಮರು ಜೊತೆಯಾಗಿ ಕೊರೋನ ತೊಲಗಲು ಪ್ರಾರ್ಥಿಸಲಿದ್ದಾರೆ ಎಂದು ಮಠಾಧೀಶ ಚಂದ್ರಶೇಖರ ಮಹಾಸ್ವಾಮಿ ಹೇಳಿದ್ದಾರೆ. ಉತ್ತರ ಭಾರತದಲ್ಲಿ ಧಾರ್ಮಿಕ ಒಗ್ಗಟ್ಟಿಗಾಗಿ ದಶಕಗಳಿಂದ ಮಠ ಶ್ರಮಿಸುತ್ತಿದೆ.