ಜಿದ್ದ, ಜು. 1: ಮುಸ್ಲಿಂ ವರ್ಲ್ಡ್ ಲೀಗ್ನ ಅಧಿಕೃತ ಪತ್ರಿಕೆ ಅಲ್ ರಾಬಿತಾದ ಶ್ರೇಷ್ಠ ಲೇಖನದ ಪ್ರಶಸ್ತಿ ಕೇರಳದ ಯುವ ವಿದ್ವಾ೦ಸ ಮನ್ಸೂರ್ ಹುದವಿಗೆ ಲಭಿಸಿದೆ. ಮಲೆಯಾಳಂನ ಕವಿ ಕಮಲಾ ಸುರಯ್ಯರ ಯಾ ಅಲ್ಲಾಹ್ ಎಂಬ ರಚನೆಯ ಕುರಿತ ಪ್ರಬಂಧವು ಪ್ರಶಸ್ತಿಗೆ ಭಾಜನವಾಗಿದೆ. ರಚನೆಯ ವೈವಿಧ್ಯತೆ, ಭಾಷಾ ನೈಪುಣ್ಯ ಸಹಿತ ಹಲವು ಮೌಲ್ಯಗಳ ಆಧಾರದಲ್ಲಿ ಪ್ರಶಸ್ತಿಯನ್ನು ಜೂರಿಗಳು ಘೋಷಿಸಿದರು.
ಪ್ರಶಸ್ತಿ ಪತ್ರ, ಜೊತೆಗೆ ಒಂದು ವರ್ಷದ ಹಜ್ ನಿರ್ವಣೆಯ ಅವಕಾಶ ಪ್ರಶಸ್ತಿ ಹೊಂದಿದೆ. ದೋಹದ ಬಿರ್ಲ ಸ್ಕೂಲ್ನಲ್ಲಿ ಅರಬಿಕ್ ವಿಭಾಗದಲ್ಲಿ ಮನ್ಸೂರ್ ಹುದವಿ ಕೆಲಸ ಮಾಡುತ್ತಿದ್ದಾರೆ. ಮಲಪ್ಪುರಂ ಮಂಜೇರಿಯ ಮೀರಾನ್ ಫೈಝಿ, ಟಿಪಿ ನಫೀಸಾ ದಂಪತಿಯ ಪುತ್ರರಾಗಿರುವ ಹುದವಿ ಚೆಮ್ಮನಾಡ್ ದಾರುಲ್ ಹುದ ಇಸ್ಲಾಮಿಕ್ ಯುನಿವರ್ಸಿಯಿಂದ ಹುದವಿ ಪದವಿ ಪಡೆದಿದ್ದಾರೆ.












