ಗಾಂಧಿನಗರ, ಜು. 1: ಗುಜರಾತ್ನ ನರ್ಮದಾ ನದಿಯ ಬದಿಯಲ್ಲಿ ಸ್ಥಾಪಿಸಲಾಗಿರುವ ಸ್ಟ್ಯಾಚು ಆಫ್ ಯನಿಟಿ ಪ್ರತಿಮೆಯಿರುವಲ್ಲಿ ಮಳೆನೀರು ಸೋರಿಕೆಯಾಗುತ್ತಿದೆ. ಸೋರಿಕೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೀಲಿಂಗ್ನಲ್ಲಿ ಸೋರಿಕೆಯಾಗಿ ಗ್ಯಾಲರಿಯೊಳಗೆ ನೀರು ಬೀಳುತ್ತಿದೆ. ಗುಜರಾತಿನಲ್ಲಿ ಕಳೆದ ದಿವಸದಿಂದ ಭಾರೀ ಮಳೆಯಾಗುತ್ತಿದೆ. 200 ಮಂದಿ ಸ್ಥಳಾವಕಾಶದ ಗ್ಯಾಲರಿಯೊಳಗೆ ನೀರು ಬೀಳುತ್ತಿದೆ. 2989 ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಪ್ರತಿಮೆಯಾಗಿದ್ದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದರು.












