ಮುಸ್ಲಿಮರಿಗೆ ಜಾಗ ಖರೀದಿಸಲು ಹರಿದ್ವಾರದಲ್ಲಿ ನಿಷೇಧ…!

0
310

ಸನ್ಮಾರ್ಗ ವಾರ್ತೆ

ಹರಿದ್ವಾರ: ತೀರ್ಥಯಾತ್ರಿಕರು ಪ್ರವಾಸಿಗಳು ತುಂಬಿಕೊಳ್ಳುವ ಹರಿದ್ವಾರ ನಗರದಲ್ಲಿ ಮುಸ್ಲಿಮರಿಗೆ ಆಸ್ತಿ ಖರೀದಿಗೆ ನಿಷೇಧವಿದೆ ಎಂದು ವರದಿಯಾಗಿದೆ. ತೀರ್ಥ ಯಾತ್ರಿಕರು ಸೇರುವ ಕನ್‍ಖಾಲ್, ಮಾಯಾಪುರಗಳಿಗೆ ಮಸ್ಲಿಮರಿಗೆ ಪ್ರವೇಶ ನಿಷೇಧವಿದೆ. ಈ ವಿಷಯವನ್ನು ಹರಿದ್ವಾರದ ಮೇಯರ್ ಅನಿತಾ ಶರ್ಮ ಅವರ ಪತಿ ಕಾಂಗ್ರೆಸ್ ನಾಯಕ ಅಶೋಕ್ ಶರ್ಮಾ ಇಂಡಿಯಾ ಟುಡೆ ವೆಬ್‍ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಹಿಂದೂ ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿರುವ ಹರಿದ್ವಾರದಲ್ಲಿ ಕೆಲವು ಹಿಂದೂ ನಾಯಕರು ವಿಷ ಹಿಂಡಲು ಶ್ರಮಿಸುತ್ತಿದ್ದಾರೆ ಎಂದು ಅಶೋಕ್ ಶರ್ಮಾ ಆರೋಪಿಸಿದ್ದಾರೆ. ಇತ್ತೀಚೆಗೆ ಮುಸ್ಲಿಮರ ಸಾಮೂಹಿಕ ಹತ್ಯೆಗೆ ಯತಿ ನರಸಿಂಹಾನಂದ ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸದ್ ನಲ್ಲಿ ಕರೆ ನೀಡಿದ್ದರು.

ಆದರೆ ತೀರ್ಥಯಾತ್ರಿಕರ ಕೂದಲು ಬೋಳಿಸುವ ಕ್ಷೌರಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ನಂತರ ಭಕ್ತರು ಗಂಗಾಜಲ ಸಂಗ್ರಹಿಸಿ ಕೊಂಡು ಹೋಗುತ್ತಾರೆ. ಹರಿದ್ವಾರಕ್ಕೆ ಸಮೀಪದಲ್ಲಿ ಬಿಜನೊರ, ಜ್ವಾಲಪುರ ಇದೆ ಇದೆ. ಗಂಗಾಜಲ ಸಂಗ್ರಹಿಸುವ ಕನ್‍ವರ್ ಗಳನ್ನು ಇವರು ತಯಾರಿಸುತ್ತಾರೆ. ಪ್ಲಂಬಿಂಗ್ ವಯರಿಂಗ್ ಕೆಲಸ ಮಾಡುವ ಹಲವು ಮುಸ್ಲಿಮರು ಹರಿದ್ವಾರದಲ್ಲಿದ್ದಾರೆ. ಹಿಂದೂಗಳ ಮಾಲಿಕತ್ವದ ಅಂಗಡಿಗಳಲ್ಲಿ ಹೆಚ್ಚು ಮುಸ್ಲಿಮರು ಕೆಲಸ ಮಾಡುತ್ತಿದ್ದಾರೆ.