ಏಪ್ರಿಲ್ 13ರ ಒಳಗೆ ಸೌದಿಯಲ್ಲಿರುವ ಬಿಸಿನೆಸ್ ಟೂರಿಸ್ಟ್ ವಿಸಿಟಿಂಗ್ ವೀಸಾದಲ್ಲಿರುವವರು ಭಾರತಕ್ಕೆ ಮರಳಬೇಕೇ? ಫ್ಯಾಕ್ಟ್ ಚೆಕ್

0
691

ಸನ್ಮಾರ್ಗ ವಾರ್ತೆ

ಬಿಸ್ನೆಸ್ ಟೂರಿಸ್ಟ್ ಮತ್ತು ವಿಸಿಟಿಂಗ್ ವಿಸಾದಲ್ಲಿ ಸೌದಿಗೆ ತಲುಪಿರುವ ಎಲ್ಲರೂ ಏಪ್ರಿಲ್ 13ರ ಒಳಗೆ ಸ್ವದೇಶಕ್ಕೆ ಮರಳಬೇಕು ಎಂಬ ಸುದ್ದಿಯನ್ನು ಸೌದಿ ಪಾಸ್ಪೋರ್ಟ್ ವಿಭಾಗ ನಿರಾಕರಿಸಿದೆ. ಭಾರತ ಸಹಿತ 14 ರಾಷ್ಟ್ರಗಳಿಂದ ಬಂದಿರುವ ಎಲ್ಲರೂ ಏಪ್ರಿಲ್ 13ರ ಒಳಗೆ ತಮ್ಮೂರಿಗೆ ಮರಳಬೇಕು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಇಲ್ಲದಿದ್ದರೆ ಐದು ವರ್ಷಗಳವರೆಗೆ ಸೌದಿ ಪ್ರವೇಶಕ್ಕೆ ನಿಷೇಧವನ್ನು ಹೇರಲಾಗುವುದು ಎಂಬ ಸುದ್ದಿಯೂ ಹರಡಿತ್ತು. ಈ ನೆಲೆಯಲ್ಲಿ ಸೌದಿ ವಿದೇಶಾಂಗ ಮತ್ತು ಗೃಹ ಸಚಿವಾಲಯವು ಎಕ್ಸ್ ಖಾತೆಯಲ್ಲಿ ಸ್ಪಷ್ಟೀಕರಣವನ್ನು ನೀಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಯಾವ ಸುದ್ದಿಯನ್ನು ಹರಡಲಾಗುತ್ತಿದೆಯೋ ಅದನ್ನು ನಂಬಬೇಡಿ. ಯಾವುದೇ ಸುದ್ದಿಗೂ ಅಧಿಕೃತ ವೇದಿಕೆಗಳನ್ನೇ ಅವಲಂಬಿಸಿ ಎಂದು ಹೇಳಿದೆ.

ಕಳೆದ ತಿಂಗಳಿನಿಂದಲೇ ಭಾರತೀಯರಿಗೂ ಸಹಿತ ಹಲವು ರಾಷ್ಟ್ರದ ಮಂದಿಗೆ ವೀಸಾ ಸಂಬಂಧಿಸಿ ನಿಯಂತ್ರಣಗಳಿವೆ ಹಜ್ ಗೆ ಮುಂಚಿತವಾಗಿ ಈ ನಿಯಂತ್ರಣವನ್ನು ಹೇರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ ಈಗಾಗಲೇ ಅನುಮತಿಸಿರುವ ಕೆಲವು ವೀಸಾಗಳ ಕೊನೆಯ ಅವಧಿ ಏಪ್ರಿಲ್ 13 ಆಗಿರುವುದು ಇಂತಹ ಸುದ್ದಿಗಳ ಪ್ರಸಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇವೆಲ್ಲ ಈ ಮೊದಲೇ ಇರುವ ನಿಯಮಗಳಾಗಿವೆ. ಮಲ್ಟಿಪಲ್ ಟೂರಿಸ್ಟ್ ವೀಸಾ ಹೊಂದಿರುವವರಿಗೆ ಒಂದು ವರ್ಷದಲ್ಲಿ 90 ದಿವಸಗಳು ಮಾತ್ರ ಸೌದಿಯಲ್ಲಿ ಇರುವುದಕ್ಕೆ ಅನುಮತಿ ಇದೆ. ಭಾರತೀಯರು ಸೇರಿದಂತೆ ಇತರ ರಾಷ್ಟ್ರಗಳ ಮಂದಿಗೆ ಸದ್ಯ ಜಾರಿಯಲ್ಲಿರುವ ವಿಸಿಟಿಂಗ್ ವಿಸಾದ ನಿಯಂತ್ರಣವು ಹಜ್ ನ ನಂತರ ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ.