✍️ ಎಂ.ಎನ್. ಸುಹೈಬ್
ಭಿನ್ನ, ವಿಶ್ಲೇಷನಾತ್ಮಕ ಬರಹ
ಆಗಸ್ಟ್ 12ಕ್ಕೆ ಇಸ್ರೇಲಿನ ಚಾನೆಲ್ ಐ24ರ ಪತ್ರಕರ್ತರ ತಂಡ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಸಂದರ್ಶನಕ್ಕಾಗಿ ಅವರ ಕಚೇರಿಗೆ ಹೋಯಿತು. ಆ ದೇಶದಲ್ಲಿ ಪ್ರಸಿದ್ಧನಾದ ಪತ್ರ ಕರ್ತ, ತೀವ್ರ ಬಲಪಂಥೀಯವಾದದ ವಕ್ತಾರನೂ ಆದ ಶಾರೋನ್ ಗಾಲ್ ಸಂದರ್ಶನ ನಡೆಸಿದರು. ಇಸ್ರೇಲಿ ಪಾರ್ಲಿಮೆಂಟ್ ನೆಸೆಟ್ನಲ್ಲಿ ಮಧ್ಯಂತರ ಸದಸ್ಯ ಆಗಿದ್ದ ಶಾರೋನ್ ಹಿಂದೆ ಒಂದು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪವನ್ನು ಎದುರಿಸಿದ್ದರು.
ಸಂದರ್ಶನ ಕೊನೆಗೊಂಡಾಗ ತಾನು ತಂದಿದ್ದ ಒಂದು ಮಂತ್ರ ತಗಡಿದ್ದ ಒಂದು ಸಣ್ಣ ಪೆಟ್ಟಿಗೆ ಯನ್ನು ಅವರು ಪ್ರಧಾನಿ ನೆತನ್ಯಾಹುಗೆ ಕೊಟ್ಟರು. ತಗಡಿನ ಚಿತ್ರವನ್ನು ಹೊರಗೆ ತೋರಿಸಿದರೂ ನಿಜವಾದ ವಾಗ್ದತ್ತ ಭೂಮಿಯ' ಭೂಪಟವನ್ನು ಶಾರೋನ್ ಗಾಲ್ ಕೊಟ್ಟಿದ್ದರು.ಇದು ಆಗಿದೆ ನನ್ನ ದರ್ಶನ’- ತಗಡು ಕೊಡುವಾಗ ಗಾಲ್ ಗುನುಗಿದರು. ಇದನ್ನು ನೆತನ್ಯಾಹು ತನ್ನ ಪತ್ನಿ ಸಾರಾರಿಗೆ ಕೊಡಬೇಕೆಂದು ಶಾರೋನ್ ಹೇಳಿ ದಾಗ ಅದಕ್ಕೊಪ್ಪಿದಂತೆ ನೆತನ್ಯಾಹು ಕೃತಜ್ಞತೆ ವ್ಯಕ್ತಪಡಿಸಿದರು.
ನಂತರ ಶೆರೋನ್ ಕೇಳಿದರು-
ಈ ದರ್ಶನವು ತಮಗೆ ಒಪ್ಪಿಗೆಯಿದೆಯೇ?
ನೆತನ್ಯಾಹು-
ಖಂಡಿತವಾಗಿಯೂ ಹೌದು.
ಶಾರೋನ್ ಗಾಲ್ ಹೇಳಿದರು-
“ನಿಜಕ್ಕೂ ಹೌದೇ?”
ನೆತನ್ಯಾಹು ಹೇಳಿದರು-
ಖಂಡಿತವಾಗಿಯೂ ಹೌದು.
ಇದು ಗ್ರೇಟರ್ ಇಸ್ರೇಲ್ ಆಗಿದೆ ಎಂದು ಶಾರೋನ್ ಒತ್ತಿ ಹೇಳಿದರು.
“ನೀವು ನನ್ನಲ್ಲಿ ಕೇಳುತ್ತೀರಿ ಎಂದಾದರೆ, ನಾವು ಈಗ ಇಲ್ಲಿದ್ದೇವೆ”- ನೆತನ್ಯಾಹು ಮಾತು ಮುಂದುವರಿಸಿದರು. ಸ್ವಲ್ಪ ನಿಲ್ಲಿಸಿ ಆಮೇಲೆ ಮಾತು ಶುರುಮಾಡಿದರು. “ನಾನು ಈಗಲೂ ನನ್ನ ತಂದೆಯನ್ನು ಉಲ್ಲೇಖಿಸುವುದು ನಿಮಗೆ ಗೊತ್ತಲ್ಲ. ಅವರ ತಲೆಮಾರು ಈ ದೇಶವನ್ನು ಸ್ಥಾಪಿಸಿದ್ದು. ನನ್ನ ತಲೆಮಾರು ಅದರ ಅಸ್ತಿತ್ವವನ್ನು ದೃಢಪಡಿಸುತ್ತಿದೆ. ಅದೊಂದು ಅತೀ ದೊಡ್ಡ ದೌತ್ಯವಾಗಿದೆ ಎಂದು ನಾನು ಅದನ್ನು ನೋಡುತ್ತೇನೆ.”
ನಾನು ಒಂದು ಐತಿಹಾಸಿಕ ಮತ್ತು ಆಧ್ಯಾತ್ಮಿಕ ದೌತ್ಯದಲ್ಲಿರುವೆನು ಮತ್ತು ವಾಗ್ದತ್ತ ಭೂಮಿ, ಗ್ರೇಟರ್ ಇಸ್ರೇಲ್ ಎಂಬ ಆಶಯದಲ್ಲಿ ಸಂಪೂರ್ಣ ಉತ್ಸುಕನಾಗಿರುವೆನು. ಆಮೇಲೆ ಅವರು ಪುನಃ ಹೇಳಿದರು- ಅದು ತಲೆಮಾರುಗಳ ದೌತ್ಯವಾಗಿದೆ. ಇಲ್ಲಿ ಈಗ ನನಗೆ ಕನಸ್ಸಿನಲ್ಲಿ ಬರುತ್ತಿದ್ದಾರೆ ಎಂದು ಕಂಡು ಬಂದ ಯಹೂದಿಗಳ ತಲೆಮಾರು. ನಮ್ಮ ಬಳಿಕ ಬರಲಿರುವ ಯಹೂದಿಗಳ ತಲೆಮಾರಿನ ಕನಸ್ಸು ಅದು. ಹಾಗಿರುವಾಗ ಅಂತಹದ್ದೊಂದು ದೌತ್ಯದ ಕುರಿತ ಚಿಂತನೆ ಇದೆಯೇ ಎಂದು ಕೇಳಿದರೆ ಹೌದು ಎಂಬ ಉತ್ತರವನ್ನೇ ಹೇಳುವೆನು- ನೆತನ್ಯಾಹು ಹೀಗೆ ವಿವರಿಸಿದರು.
ಪೂರ್ವ ಜೆರುಸಲೇಮ್ ಮತ್ತು ವೆಸ್ಟ್ ಬ್ಯಾಂಕ್ ಮತ್ತು ಗಾಝ, ಸಿನಾಯ್ ದ್ವೀಪ, ಗೋಲಾನ್ ಬೆಟ್ಟಗಳು ಮಾತ್ರವಲ್ಲ ಹತ್ತಿರದ ಅರಬ್ ದೇಶಗಳ ಗಡಿಗಳ ವರೆಗೆ ಉದ್ದ ವಿರುವ ಗ್ರೇಟರ್ ಇಸ್ರೇಲ್ ಸಂಕಲ್ಪವನ್ನು ನಾವು ಅರಿಯುವಾಗ ಮತ್ತು ಅವರ ಹತ್ತಿರ ಇದ್ದವರು ಬಿಬಿ ಎಂದು ಕರೆದಾಗ ನೆತನ್ಯಾಹುರ ಕನಸ್ಸಿನ ಸ್ಪಷ್ಟ ಬಣ್ಣ ಸ್ಪಷ್ಟವಾಗುತ್ತದೆ.
ಇಸ್ರೇಲಿನ ನಿಜವಾದ ಗುರಿ ಏನಾಗಿದೆ?:
ಹೊರಗಿನಿಂದ ನೋಡುವವರಿಗೆ ಗಾಝದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ನಿಜವಾದ ಗುರಿ ಏನೆಂದು ಗೊತ್ತಾಗದೆ ಆಶ್ಚರ್ಯ ಸೃಷ್ಟಿಸಿರಬಹುದು. ಜಗತ್ತಿನಲ್ಲಿ ಎಲ್ಲಿಯೂ ಯಾವ ಕಾಲದಲ್ಲಿಯೂ ಕಾಣದಂತಹ ಅತ್ಯಂತ ಭಯಾನಕ ಸಾವುಗಳು ನಡೆಯುತ್ತಿವೆ. ಎರಡು ಲಕ್ಷದಷ್ಟು ಜನರು ಸಾಯುವುದೋ ಕಾಣೆಯಾಗುವುದೋ ಗಂಭೀರವಾಗಿ ಗಾಯಗೊಳ್ಳುವುದೋ ನಡೆದಿದೆ ಎಂದು ಇಸ್ರೇಲಿನ ಕಡೆಯಿಂದಲೇ ಈಗ ದೃಢೀಕರಣ ಬಂದಿದೆ. ಇದುವರೆಗೆ ಹಮಾಸ್ನ ನಿಯಂತ್ರಣದ ಗಾಝದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹೊರ ಬಿಡುವ ಲೆಕ್ಕ ಎಂದು ಹೇಳಿ ಸಾವಿನ ದರವನ್ನು ಸಂದೇಹದಲ್ಲಿ ಇರಿಸಿದ ಪಾಶ್ಚಾತ್ಯ ಮಾಧ್ಯಮಗಳಿಗೆ ಇದರೊಂದಿಗೆ ಸೂರ್ಯ ಉದಿಸಿದ್ದಾನೆ. ಎರಡು ವರ್ಷದ ಬಳಿಕ ವಿಶ್ವಸಂಸ್ಥೆಗೂ ಅಲ್ಲಿ ವಂಶಹತ್ಯೆ ನಡೆಯುತ್ತಿದೆ ಎಂದು ಮನವರಿಕೆಯಾಗಿದೆ.
ಇದರ ಜೊತೆಗೆ ವೆಸ್ಟ್ ಬ್ಯಾಂಕಿನಲ್ಲಿ ಅಸಾಮಾನ್ಯ ದಾಳಿ ನಡೆಯುತ್ತಿದೆ. ಇನ್ನೊಂದು ಕಡೆ ಜನರ ಒತ್ತುವರಿಯು ಸೇನೆಯ ನೇತೃತ್ವದಲ್ಲಿ ನಡೆಯುತ್ತಿದೆ. ವಿವಿಧ ವಲಸಿಗ ಕೇಂದ್ರಗಳಿಗೆ ಅವಸರವಸರವಾಗಿ ಅಂಗೀಕಾರ ನೀಡಲಾಗುತ್ತಿದೆ. ಮಾತ್ರವಲ್ಲ ವೆಸ್ಟ್ ಬ್ಯಾಂಕನ್ನು ಸಂಪೂರ್ಣ ವಶಪಡಿಸಲು ಇಸ್ರೇಲ್ ಹೊರಟಿದೆ ಎಂಬ ವದಂತಿಗಳು ದಟ್ಟವಾಗಿ ಹಬ್ಬಿದೆ. ಲೆಬನಾನಿನಲ್ಲಿ ಸಿರಿಯಲ್ಲಿ ಇರಾನ್ ಯಮನ್ನಲ್ಲಿ ಕೊನೆಗೆ ಯಾವ ಸಂಬಂಧವೂ ಇಲ್ಲದ ಕತರಿಗೂ ಇಸ್ರೇಲ್ನ ದಾಳಿ ಮಾಡಿದೆ.
ಇಸ್ರೇಲಿನ ಪ್ರಧಾನಿ ನೆತನ್ಯಾಹು ಮತ್ತು ಸರಕಾರ ಮುಂದುವರಿಸುತ್ತಿರುವ ಹೀನ ಕೃತ್ಯಗಳ ಹಿಂದೆ ರಾಜಕೀಯ ಅಸ್ತಿತ್ವದ ಉಳಿಯುವಿಕೆ ಎಂಬುದು ಕೇವಲ ಯುಕ್ತಿ ಮಾತ್ರ ಆಗಿದೆಯೇ? ಅಥವಾ ಗ್ರೇಟರ್ ಇಸ್ರೇಲ್ ಯೋಜನೆಗಳನ್ನೇ ಜಾರಿಗೊಳಿಸಲಾಗುತ್ತಿದೆಯೇ? ತೀವ್ರ ಯಹೂದಿ ವಿಶ್ವಾಸ ಚಿಂತನೆ ಧಾರೆಗಳಿಗಾಗಿ ಇವಾಂಜಲಿಕಲ್ ಕ್ರೈಸ್ತ ಸಭೆಗಳಿಗೂ ಈ ಯುದ್ಧ ಆವೇಶ ನೀಡುವುದು ಯಾಕಿರಬಹುದು? ನೆತನ್ಯಾಹುರಲ್ಲಿ ಅವರು ಪವಿತ್ರ ಪುರುಷನನ್ನು ನೋಡುತ್ತಿದ್ದಾರೆಯೇ? ಧಾರ್ಮಿಕ ನಂಬಿಕೆ ಪುರಾಣಗಳು ಮತ್ತು ಕಟ್ಟುಕತೆಗಳು ಲೋಕಾವಸಾನದ ಸಿದ್ಧಾಂತ ಗಳಿಗೆ ಅಂಟಿ ಕೂತಿರುವುದು ಮಧ್ಯಪ್ರಾಚ್ಯದ ಕೆಲವು ವಿಶೇಷತೆಗಳು ಆಗಿವೆ…
ಹಬಾದ್ ಲುಬಾವಿಚ್ರ ಬೇರುಗಳು:
ಯುಕ್ರೇನಿನ ಕಪ್ಪು ಸಮುದ್ರದ ತೀರದಲ್ಲಿರುವ ನಗರ ಮೈಕಲೇವ್ನಲ್ಲಿ 1902ರಲ್ಲಿ ರಬ್ಬಿ ಮೆನೊಹಂ ಮೆಂಟೊಲ್ ಶಿನೀಸನ್ ಜನಿಸಿದರು. ಅವರಿಗೆ ಐದು ವರ್ಷ ವಯಸ್ಸಿನಲ್ಲಿ ಅವರ ಕುಟುಂಬ ಯುಕ್ರೇನಿನ ಇನ್ನೊಂದು ನಗರವಾದ ದಿನೋಪ್ರಗೆ ವಾಸ್ತವ್ಯವನ್ನು ಬದಲಿಸಿತು. ದಿನೋಪ್ರದಲ್ಲಿ ಮೆನೊಹಂ ಮೆಂಟೊಲ್ರ ಅಪ್ಪ ಹಿಸಾಕ್ ಶಿನರ್ಸನ್ ಚೀಫ್ ರಬ್ಬಿ ಆಗಿದ್ದರು. ಮಿಬೊಹಂ ಮೆಂಟೊಲ್ರ ಬಾಲ್ಯ ಕಾಲ ಹದಿಹರೆಯ ಮತ್ತು ಯೌವನವೆಲ್ಲವೂ ಸೋವಿಯತ್ ಸಾಮ್ರಾಜ್ಯದ ಆಡಳಿತದ ಅಧೀನದಲ್ಲಿದ್ದ ದಿನೊಪ್ರದಲ್ಲಿ ಸಾಗಿತ್ತು. ಆಗ ಯುರೋಪಿನಲ್ಲಿ ನಾಝಿಸಂ ಮತ್ತು ಫ್ಯಾಶಿಸಂನ ರಕ್ಕಸ ಆಳ್ವಿಕೆ ನಡೆಯುತ್ತಿತ್ತು. ಯಹೂದಿ ವಿರೋಧವು ಅದರ ಉತ್ತುಂಗಕ್ಕೇರಿದ ಸಮಯವೂ ಅದುವೇ. ಇದೇ ರೀತಿಯಲ್ಲಿ ಇಲ್ಲದಿದ್ದರೂ ಸೋವಿಯತ್ ಯೂನಿಯನ್ನಲ್ಲಿ ಕೂಡ ಯಹೂದಿಗಳ ಜೀವನವು ದೊಡ್ಡ ಮಟ್ಟದ ತೊಂದರೆಗೊಳಗಾಗಿತ್ತು. ಈ ಕಾಲಗಳಲ್ಲಿ ಯುರೋಪಿನ ಹಲವು ನಗರಗಳಲ್ಲಿ ಮೆನೊಹಂ ಮೆಂಟೋಲ್ ವಾಸ್ತವ್ಯ ಬದಲಿಸುತ್ತಾ ಜೀವನ ನಡೆಸಿದರು.
ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಏರುವ ಪ್ರವರ ಶುರು ಮಾಡುತ್ತಿದ್ದ ಘಟ್ಟದಲ್ಲಿ ಅವರು ಬರ್ಲಿನ್ನಲ್ಲಿದ್ದರು. 1933ರಲ್ಲಿ ನಾಝಿಗಳು ಅಧಿಕಾರಕ್ಕೆ ಬಂದ ಮೇಲೆ ಅವರು ಬರ್ಲಿನ್ ತೊರೆದು ಪ್ಯಾರಿಸ್ಗೆ ವಾಸ್ತವ್ಯ ಬದಲಿಸಿದರು. 1940ರಲ್ಲಿ ನಾಝಿಗಳು ಪ್ಯಾರಿಸ್ ವಶಪಡಿಸಿಕೊಳ್ಳುವುದಕ್ಕೆ ಮೂರು ದಿವಸ ಮೊದಲೇ ಆ ನಗರವನ್ನೂ ತೊರೆದರು. ತಿಂಗಳ ಬಳಿಕ ಪೋರ್ಚುಗಲ್ನ ಲಿಸ್ಬನ್ ಬಂದರಿನ ಮೂಲಕ ನ್ಯೂಯಾರ್ಕ್ಗೆ ಪಲಾಯನ ಮಾಡಿದರು. ಇಲ್ಲಿಂದ ಮೆನೊಹಂ ಮೆಂಟೋಲ್ರು ಹಬಾದ್ ಆಂದೋಲನದ ಮುಖ್ಯ ಸ್ಥಾನಕ್ಕೆ ಏರಿದರು. ಹಬಾದ್ ಇದು ಯಹೂದಿ ಧರ್ಮದ ಆಧ್ಯಾತ್ಮಿಕ ನವೋತ್ಥಾನ ಧಾರೆಯಾದ ಹಸಿದಿಸಂನ ಮುಂಚೂಣಿ ವ್ಯವಸ್ಥೆಗಳಲ್ಲಿ ಒಂದಾಗಿದೆ.
1700ರಲ್ಲಿ ಪೂರ್ವ ಯುರೋಪಿನಲ್ಲಿ ಇದು ಹುಟ್ಟಿಕೊಂಡಿತ್ತು. ಆಗಲೇ ಇತರ ಆರ್ಥೊಡೆಕ್ಸ್ ಯಹೂದಿ ವಿಭಾಗಳ ನಡುವೆ ಇರುವ ಪ್ರಧಾನ ವ್ಯತ್ಯಾಸ ಹಸಿದಿಸಂ ತೋರಿಸಿಕೊಟ್ಟಿತ್ತು. ಎಲ್ಲದ್ದರಲ್ಲಿ ಕೊನೆಯ ಮಾತು ಒಬ್ಬ ಆಧ್ಯಾತ್ಮಿಕ ಹೇಳುತ್ತಾನೆ ಎಂಬುದು ವ್ಯತ್ಯಾಸಗಳಲ್ಲಿ ಪ್ರಧಾನವಾದದ್ದಾಗಿದೆ. ಆಧ್ಯಾತ್ಮಿಕ ಗುರು ರೆಬ್ಬೆ ಎಂದು ಕರೆಯಲ್ಪಡುವುದು. ಸಾಮಾನ್ಯವಾಗಿ ಇತರ ಯಹೂದಿ ವಿಭಾಗಗಳ ಪುರೋಹಿತರಿಗೆ ರಬ್ಬಿ ಎಂಬ ಪದವನ್ನು ಬಳಸಲಾಗುತ್ತದೆ. ಇದೇ ಪದಕ್ಕೆ ಇದ್ದಿಷ್-ಜರ್ಮನ್ ಪದದಲ್ಲಿ ರೆಬ್ಬೆ ಎಂದಾಗುತ್ತದೆ.
ಇಂದು ಡಝನ್ ಗಟ್ಟಲೆ ಹಸಿದಕ್ ಆಂದೋಲನಗಳು ಇವೆಯಾದರೂ ಅದರಲ್ಲಿ ಅತೀ ಪ್ರಮುಖವಾದದ್ದು ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿರುವ ನ್ಯೂಯಾರ್ಕ್ನ ಬ್ರೂಕ್ಲಿನ್ ಕೇಂದ್ರವಾದ ಹಬಾದ್ ಆಗಿದೆ. 1775ರಲ್ಲಿ ಇಂದಿನ ಬೆಲಾರೂಸ್ನಲ್ಲಿ ಹಬಾದ್ ಸ್ಥಾಪನೆಯಾಗಿತ್ತು. ಸ್ಯೂನೂರ್ ಸಲ್ಮಾನ್ ಅದರ ಪ್ರಥಮ ರಬ್ಬಿ ಆಗಿದ್ದರು.
ಎರಡನೇ ಲೋಕ ಯುದ್ಧದ ಸಮಯದಲ್ಲಿ ಆರನೇಯ ರಬ್ಬಿ ನೇತೃತ್ವದಲ್ಲಿ ಇದರ ಕೇಂದ್ರವನ್ನು ಅಮೆರಿಕಕ್ಕೆ ಕೊಂಡು ಹೋಗಲಾಯಿತು. ಇದೇ ವೇಳೆ ಮೆನೊಹಂ ಮೆಂಟೋಲ್ ಕೂಡ ಅಮೆರಿಕ್ಕೆ ಬಂದರು. ಶ್ಯೂನ್ಯೂರ್ ಸಲ್ಮಾನ್ರ ಮಕ್ಕಳು ಮೊಮ್ಮಕ್ಕಳು, ಹತ್ತಿರದ ಸಂಬಂಧಿಕರೇ ಈವರೆಗಿನ ಇದರ ಏಳು ರಬ್ಬಿಗಳಾಗಿದ್ದಾರೆ. ಆರನೆಯ ರಬ್ಬಿ ಸತ್ತ ನಂತರ 1950ರಲ್ಲಿ ಮೆನೊಹಂ ಮೆಂಟೋಲ್ರಿಗೆ ರಬ್ಬಿಯ ಹೊಣೆಗಾರಿಕೆ ವಹಿಸಲ್ಪಟ್ಟಿತು.
ಇಸ್ರೇಲಿನ ಯಹೂದಿ ಜನರ ಉದ್ಧಾರಕ್ಕೆ ಆಧ್ಯಾತ್ಮಿಕ ಮೋಕ್ಷಕ್ಕೆ ಅವತರಿಸುವ ಮಿಶಿಹರ ಮೇಲೆ ಮೆನೊಹಂ ಮೆಂಟೋಲ್ರ ಅತೀ ತೀವ್ರವಾದ ನಂಬಿಕೆ ಹೊಂದಿದ್ದರು. ಮಿಶಿಹರ ಆಗಮನ ಕುರಿತು ವ್ಯಾಪಕವಾಗಿ ಬರೆದಿದ್ದರು. ಭಾಷಣ ಕಾರ್ಯಕ್ರಮ ನೀಡುತ್ತಿದ್ದರು. ಕೆಲವು ವಿಶ್ವಾಸಿ ಜನರು ಮೆನೊಹಂ ಮೆಂಟೊಲ್ರೇ ಜೀವಿಸಿರುವಾಗ ಸ್ವಯಂ ಮಿಶಿಹಾ ಆಗಿ ಪ್ರಕಟ ವಾಗುತ್ತಾರೆ ಎಂದು ನಿರೀಕ್ಷಿಸುತ್ತಿದ್ದರು. ಪ್ರತಿಯೊಂದು ತಲೆಮಾರಿನಲ್ಲಿ ಮಿಶಿಹಾಗೆ ಸಮಾನವಾದ ಆಧ್ಯಾತ್ಮಿಕ ಜ್ಞಾನಿಯಾದ ಒಬ್ಬ ಸಚ್ಚರಿತ ವ್ಯಕ್ತಿ ಉಂಟಾಗುತ್ತಾನೆ, ಲೋಕ ಮತ್ತು ಕಾಲವು ಮಿಶಿಹಾರಿಗಾಗಿ ಪಾಕಗೊಳ್ಳುವಾಗ ದೇವನು ಆತನನ್ನು ಅನಾವರಣಗೊಳಿಸುವನು ಎಂದೇ ಯಹೂದಿ ವಿಶ್ವಾಸ ಪ್ರಮಾಣಗಳಲ್ಲಿವೆ.
ಈ ತಲೆಮಾರಿನಲ್ಲಿ ಅಂತಹವರೊಬ್ಬರಿದ್ದರೆ ಅದು ಮೆನೊಹಂ ಮೆಂಟೋಲ್ ಆಗಿದ್ದಾರೆ ಎಂದು ಅನುಯಾಯಿಗಳ ವಿಶ್ವಾಸವಾಗಿತ್ತು. ಇಂಗ್ಲಿಷ್, ಹಿಬ್ರು, ಇಟಲಿಯನ್, ಫ್ರೆಂಚ್, ಜರ್ಮನಿ ಸಹಿತ ಹಲವು ಭಾಷೆಗಳನ್ನು ಅನಾ ಯಾಸವಾಗಿ ವ್ಯವಹಿಸುವ ತಾಕತ್ತು ಮೆನೊಹಂ ಮೆಂಟೋಲಿರಿಗಿದ್ದುದರಿಂದ ಅವರಿಗೆ ಲೋಕದುದ್ದಕ್ಕೂ ದೊಡ್ಡ ಭಕ್ತ ವೃಂದ ಇತ್ತು. ಅವರೆಲ್ಲರೂ ರಬ್ಬಿ ಎಂದು ಅವರನ್ನು ಕರೆಯುತ್ತಿದ್ದರು.
ಅಮೆರಿಕ ಮತ್ತು ಇತರ ದೇಶಗಳ ಪ್ರಮುಖ ನಾಯಕರು ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ಜಾನ್ ಎಫ್. ಕೆನಡಿ, ರಾಬರ್ಟ್ ಕೆನಡಿ, ಫ್ರಾಂಕ್ಲಿನ್ ರೂಸ್ವೆಲ್ಟ್, ರೊನಾಲ್ಡ್ ರೇಗನ್, ಜಿಮ್ಮಿ ಕಾರ್ಟರ್ ಅವರನ್ನು ಸಂದರ್ಶಿಸಿದ್ದಾರೆ. ಮೊನೊಹಂ ಮೆಂಟೋಲ್ ಒಮ್ಮೆಯೂ ಇಸ್ರೇಲಿಗೆ ಹೋಗಿಲ್ಲ. ಆದರೂ ಅವರ ಅನುಯಾಯಿಗಳಲ್ಲಿ ಯಹೂದಿ ದೇಶದ ಹಲವಾರು ಪ್ರಮಖರಿದ್ದರು.
ಏರಿಯಲ್ ಶೆರೊನ್ ಮತ್ತು ಮೆನೊಹಂ ಮೆಂಟೋಲ್ರೂ:
ಬೆಗಿನ್, ಏರಿಯಲ್ ಶಾರೊನ್, ಶಿಮೊನ್ ಪೆರಿಸ್ರು ಮೆನೊಹಂರನ್ನು ತಮ್ಮ ಆಧ್ಯಾತ್ಮಿಕ ಗುರುಗಳಾಗಿ ತಿಳಿದಿದ್ದರು. 1969ರಲ್ಲಿ ಐಡಿಎಫ್ (ಇಸ್ರೇಲ್ ಡಿಫೆನ್ಸ್ ಫೋರ್ಸ್) ಸದರ್ನ್ ಕಮಾಂಡ್ನ ಕಮಾಂಡರಾಗಿ ಏರಿಯಲ್ ಶೆರೊನ್ ನೇಮಕಗೊಳ್ಳುವ ಒಂದು ವರ್ಷ ಮುಂಚೆ ಮೊತ್ತ ಮೊದಲನೆಯ ಬಾರಿ ಮೆನೊಹಂ ಮೆಂಟೋಲ್ರನ್ನು ಭೇಟಿಯಾಗಿದ್ದರು. ಸಾಮಾನ್ಯವಾಗಿ ಗಂಟಿಕ್ಕಿಕೊಂಡಿದ್ದ ಮುಖಭಾವದ ಶಾರೋನ್ರ ಮುಖ ಈ ರಬ್ಬಿಯ ಕುರಿತು ಹೇಳಿದಾಗ ಅರಳುತ್ತಿತ್ತು. ಹಿಂದೆಂದೂ ಅವರಲ್ಲಿ ಕಾಣಲು ಸಿಗದಿದ್ದ ಬಾಯ್ತುಂಬ ನಗು ಕಂಡು ಬರುತ್ತಿತ್ತು. ತನ್ನ ಮಗ ಅನಿರೀಕ್ಷಿತ ಸತ್ತ ನೋವಿನಲ್ಲಿದ್ದಾಗ ಒಂದು ಪತ್ರದ ರೂಪದಲ್ಲಿ ಗುರು ಮೊತ್ತ ಮೊದಲನೆಯದಾಗಿ ಅವತಾರವೆತ್ತಿದರು ಎಂದು ಶರೋನ್ ಹೇಳುತ್ತಾರೆ. ನಂತರ ಹಲವು ಬಾರಿ ಇಬ್ಬರೂ ಮುಖಾಮುಖಿ ಭೇಟಿಯಾಗಿದ್ದಾರೆ.
ಇಸ್ರೇಲ್ ಸೈನಿಕ, ರಾಜಕೀಯ ನೀತಿಗಳಲ್ಲಿ ಮೆನೊಹಂ ಮೆಂಟೋಲ್ರ ಸಲಹೆ ನೀಡುತ್ತಿದ್ದರೆಂದು ಶಾರೋನ್ ಹೇಳುತ್ತಾರೆ. ಇಸ್ರೇಲಿನ ಯಹೂದಿಯರ ಸುರಕ್ಷೆ ಮಾತ್ರ ಮಾಡಬೇಕು ಎಂಬುದು ದೇಶದ ಏಕೈಕ ಗುರಿಯಾಗಿರಬೇಕು. ಈಗಿನ ಗಡಿಗಳು (1967ರಲ್ಲಿ ಇಸ್ರೇಲ್ ವಶಪಡಿಸಿದ ವೆಸ್ಟ್ ಬ್ಯಾಂಕ್ ಗಾಝ ಪ್ರದೇಶ) ದೇಶದ ಯಥಾರ್ಥ ಕಾನೂನು ರೀತಿಯ ಗಡಿಗಳು ಎಂದು ಪರಿಗಣಿಸಬೇಕೆಂದು ಇವರು ಹೇಳಿದ್ದರು. ಅಂದರೆ ನಂತರ ಕೆಲ ಕಾಲಗಳಲ್ಲಿ ಇಸ್ರೇಲ್ ನಾಯಕರು ರಹಸ್ಯವಾಗಿ ಮತ್ತು ಬಹಿರಂಗವಾಗಿ ಈ ಉದ್ದೇಶಕ್ಕೆ ವೆಸ್ಟ್ ಬ್ಯಾಂಕ್ ಅನಕ್ಸಸ್ ಎಂದು ಕರೆಯತೊಡಗಿದರು. ಇದಕ್ಕೆ ಮೆನೊಹಂ ಮೆಂಟೋಲ್ರೇ ಪ್ರೇರಕರಾಗಿದ್ದರು.
1967ರಲ್ಲಿ ಈಜಿಪ್ಟ್ನಿಂದ ವಶ ಪಡಿಸಿಕೊಂಡ ಸಿನಾಯ್ ಪ್ರದೇಶ ಸೈನಿಕವಾಗಿ ಇಸ್ರೇಲಿಗೆ ಸವಾಲು ಆಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು ಎಂದು ಶಾರೋನ್ ನಂತರದ ಕಾಲದಲ್ಲಿ ತಿಳಿಸಿದರು. ಮೂರು, ನಾಲ್ಕು ವರ್ಷಗಳ ನಂತರ ಯೋಂ ಕಿಪ್ಪೂರ್ ಯುದ್ಧದಲ್ಲಿ ಮೆನೊಹಂ ಮೆಂಟೋಲ್ರ ಸೂಕ್ಷ್ಮದರ್ಶಿತ್ವ ನಿಜವಾಗಿದೆ ಎಂದು ಶಾರೋನ್ ಹೇಳುತ್ತಾರೆ. “ನೀನು ಕಾಣುವ ಭೂಮಿಯನ್ನು ನಾನು ನಿನಗೂ ನಿನ್ನ ಸಂತತಿಗಳಿಗೂ ಶಾಶ್ವತ ವಾಗಿ ಕೊಡುವೆ” ಎಂಬ ಉತ್ಪತ್ತಿ ಕಾಂಡದ (13: 15).
ಅಬ್ರಾಹಾಂ ಪ್ರವಾದಿಗೆ ದೈವಿಕ ವಾಗ್ದತ್ತವು (ದೇವನು ಕೊಟ್ಟ ಮಾತು) 1967ರಲ್ಲಿ ನಿಜವಾಗಿದ್ದು ಎಂದು ಅವರು ಇಸ್ರೇಲಿನ ರಾಜಕೀಯ ನಾಯಕರಲ್ಲಿ ಹೇಳುತ್ತಿದ್ದರು. ಆದುದರಿಂದ ಆ ಗಡಿಗಳಲ್ಲಿ ಏನೇ ಬಂದರೂ ರಾಜೀ ಮಾಡಿಕೊಳ್ಳಬಾರದು. ಜೊತೆಗೆ ಇಸ್ರೇಲಿಗೆ ಪೂರಕವಾದ ಪರಿಸ್ಥಿತಿ ಸೃಷ್ಟಿಸಲು ರಾಜತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚು ಕಷ್ಟ ತೆಗೆದುಕೊಳ್ಳುವ ಬದಲು ಸೈನಿಕವಾಗಿ ಪೂರ್ವಭಾವಿಯಾಗಿ ದಾಳಿ ನಡೆಸಬೇಕಾಗಿದೆ ಎಂದು ಅವರು ಭಾವಿಸಿದ್ದರು. ಶಾಂತಿಗೆ ಬದಲಾಗಿ ಗಡಿಯಲ್ಲಿ ರಾಜಿಮಾಡಿಕೊಳ್ಳುವ ಸಲಹೆಗಳನ್ನು ಸ್ವೀಕರಿಸಬಾರದು. ಯಹೂದಿ ಜನರಿಗಾಗಿ ದೇವನ ಯೋಜನೆಗಳಲ್ಲಿ ಅತಿ ನಿರ್ಣಾಯಕ ಜಾಗ ಇಸ್ರೇಲ್ ಆಗಿದೆ ಎಂದು ಮೆನೊಹಂ ಮೆಂಟೋಲ್ರು ಬೋಧಿಸುತ್ತಿದ್ದರು.
ಹೀಗೆಲ್ಲ ಅವರು ಹೇಳಿದರೂ ಒಂದೇ ಒಂದ್ಸಲ ಇಸ್ರೇಲಿಗೆ ಭೇಟಿ ನೀಡಲು ಅವರು ಸಿದ್ಧರಾಗಲಿಲ್ಲ. ಇದನ್ನು ಕೇಳಿದಾಗ ಬೇರೆ ಬೇರೆ ಜವಾಬು ಹೇಳುತ್ತಿದ್ದರು. ಒಮ್ಮೆ ಇಸ್ರೇಲಿನ ಬಲಪಂಥೀಯ ಪಾರ್ಟಿಯ ಸದಸ್ಯ ಗ್ಯೂಲಾಹ್ ಕೋಹರ್ ಮೆನೊಹಂ ಮೆಂಟೋಲ್ರನ್ನು ಈ ಬಗ್ಗೆ ಕೇಳಿದರು.
“ಮಶೀಹ ಅವತರಿಸುವ ಒಂದು ನಿಮಿಷ ಮೊದಲು ನಾನಲ್ಲಿಗೆ ತಲುಪುವೆ” ಎಂದಿದ್ದರು. ಇಸ್ರೇಲಿನ ಕ್ಷೇಮವು ಅಮೆರಿಕದ ಹಿತಕ್ಕೆ ಬೇಕಾಗಿದೆ ಎಂದು ಮೆನೊಹಂ ಮೆಂಟೋಲರದ್ದೇ ಇನ್ನೊಂದು ನಿಲುವು ಆಗಿತ್ತು.
“ಅರಬರ ವಿರುದ್ಧ ಅಲ್ಲಿ ಮುಂಚೂಣಿಯಲ್ಲಿ ಇಸ್ರೇಲ್ ಇದೆ. ಅರಬರು ಅಮೆರಿಕದ ವಿರೋಧಿಗಳಾಗಿದ್ದಾರೆ. ಅಮೆರಿಕ ಸೋಲಬೇಕು ಇರಾನ್ ಮತ್ತು ಅದರಂತಿರುವ ದೇಶಗಳು ಗೆಲ್ಲಬೇಕೆಂದು ಅವರು ಬಯಸುತ್ತಾರೆ…” ಇದು ಮೆನೊಹಂ ಮೆಂಟೋಲ್ರ ಅಭಿಪ್ರಾಯವಾಗಿತ್ತು.
ಅನಧಿಕೃತ ವಲಸೆ:
1989ರಲ್ಲಿ ವೆಸ್ಟ್ಬ್ಯಾಂಕಿನ ಅನಧಿಕೃತ ವಲಸೆ ಕೇಂದ್ರವಾದ ಏರಿಯಲ್ನ ಮೇಯರ ಮೆನೊಹಂ ಮೆಂಟೋಲ್ರನ್ನು ಭೇಟಿಯಾಗಲು ಬಂದರು. ಜಗತ್ತಿಗೆ ಸವಾಲೊಡ್ಡಿ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇಸ್ರೇಲ್ ಸೆಟಲ್ಮೆಂಟ್ ವ್ಯಾಪಕಗೊಳಿಸುವುದನ್ನು ತ್ವರಿತಗೊಳಿಸುತ್ತಿದ್ದ ಕಾಲ ಅದಾಗಿತ್ತು. ಏರಿಯಲ್ ಅನ್ನು 1967ರ ಯುದ್ಧದಲ್ಲಿ ವಶಪಡಿಸಿ ಕೊಂಡ ಮೇಲೆ 1978ರಲ್ಲಿ ಸೆಟ್ಲ್ಮೆಂಟ್ ಅನಧಿಕೃತ ವಲಸೆ ಕೇಂದ್ರ ನಿರ್ಮಾಣವನ್ನು ಶುರು ಮಾಡಿಡಲಾಗಿತ್ತು. ಸೋವಿಯತ್ ಯೂನಿಯನ್ನಿಂದ ನೂರಾರು ಯಹೂದಿಗಳು ಅಲ್ಲಿಗೆ ಬರುತ್ತಿದ್ದಂತೆ ಮೇಯರ್ ದೊಡ್ಡ ಒಂದು ಬ್ರೋಷರ್ನೊಂದಿಗೆ ಮೆನೊಹಂ ಮೆಂಟಾಲ್ರ ಮುಂದೆ ಬಂದು ನಿಂತರು.
ಅದು ಫೆಲಸ್ತೀನಿನ ಭೂಮಿಯಲ್ಲಿ ನಿರ್ಮಿಸಿರುವುದು ಮತ್ತು ನಿರ್ಮಿಸಲಿಕ್ಕಿರುವ ಸುಂದರವಾದ ವಿಲ್ಲಾಗಳ ಬ್ರೋಷರ್ ಆಗಿತ್ತು. ಅದನ್ನು ತೋರಿಸಿ ಮೇಯರ್ ವಿವರಿಸಿದರು. ಹೆಚ್ಚು ಹೊಸ ಬ್ರೋಷರ್ ಮುದ್ರಿಸಬೇಕು. ಹೆಚ್ಚು ಜನರನ್ನು ಅಲ್ಲಿಗೆ ಆಕರ್ಷಿಸಬೇಕು ಎಂದು ಮೆನೊಹಂ ಮೆಂಟೋಲ್ ಸಲಹೆ ನೀಡಿದರು. ಎಂದಾದರೂ ವೆಸ್ಟ್ ಬ್ಯಾಂಕಿನ ಸೆಟಲ್ಮೆಂಟ್ಗಳನ್ನು ಇಸ್ರೇಲ್ ಶಾಂತಿ ಒಪ್ಪಂದದ ಹಿನ್ನೆಲೆಯಲ್ಲಿ ಕೈಬಿಟ್ಟೀತಾ ಎಂಬ ಚಿಂತೆ ಅಲ್ಲಿ ಅಕ್ರಮವಾಗಿ ನೆಲೆಸಿದವರಿಗೆ ಇದೆ ಎಂದು ಮೇಯರ್ ಹೇಳಿದರು. ಅವೆಲ್ಲ ಕೇವಲ ವದಂತಿ ಮಾತ್ರ ಆಗಿದೆ. ಮಿಶಿಹ ಅವತರಿಸುವುದರೊಂದಿಗೆ ಈಗ ಇರುವುದಕ್ಕಿಂತಲೂ ವಿಶಾಲವಾದ ಗಡಿಗಳಿಗೆ ದೇಶ ವಿಸ್ತಾರಗೊಳ್ಳಲಿದೆ ಎಂದು ಮೇಯರ್ರನ್ನು ಮೆನೊಹಂ ಮೆಂಟೋಲ್ ಸಂತೈಸಿ ಕಳುಹಿಸಿಕೊಟ್ಟರು.
1994ರಲ್ಲಿ ತನ್ನ 92ನೇ ವರ್ಷ ವಯಸ್ಸಿನಲ್ಲಿ ಈ ಮನುಷ್ಯ ಕೊನೆಯು ಸಿರೆಳೆಯುವ ವರೆಗೆ ಅವರು ಹಬಾದ್ ಆಂದೋಲನದ ಏಳನೇ ರಬ್ಬಿಯಾಗಿ ಇದ್ದರು. ಆದರೆ ಅದರ ನಂತರ ಮೆನೊಹಂ ಮೆಂಟೋಲ್ರ ಉತ್ತರಾಧಿಕಾರಿ ಹಬಾದ್ಗೆ ಆಯ್ಕೆ ಆಗಿಲ್ಲ. ಮೂವತ್ತು ವರ್ಷವೇ ಆದರೂ ಭಕ್ತರು ಅವರನ್ನೆ ಗುರುಗಳಾಗಿ ಕಾಣುತ್ತಿದ್ದಾರೆ.
ನೆತನ್ಯಾಹುರ ಪರಿಣಾಮ:
ಮೆನೊಹಂ ಮೆಂಟೋಲ್ರ ಸಾಯುವುದಕ್ಕೆ ಹತ್ತು ವರ್ಷ ಮೊದಲು ನೆತನ್ಯಾಹು ಮೊದಲ ಬಾರಿ ಅವರನ್ನು ಭೇಟಿಯಾದರು. 1984ರಲ್ಲಿ. ನೆತನ್ಯಾಹುರ ಜೀವನವನ್ನೇ ಆ ಭೇಟಿಯು ಬದಲಿಸಿತು. ಆ ಭೇಟಿಯ ವಿಷದಾಂಶಗಳನ್ನು ಹಲವು ದಶಕಗಳು ಕಳೆದರೂ ನೆತನ್ಯಾಹು ಮರೆತಿಲ್ಲ. ಮೆನೊಹಂ ಮೆಂಟೋಲ್ರೊಂದಿಗೆ ಸಾಮೀಪ್ಯ ಅವರ ಮಧ್ಯಸ್ಥಿಕೆಗಳು ಇಸ್ರೇಲನ್ನು ಕಾಯುವ ದೇವನಿಂದ ನಿಯೋಜಿತನಾದ ಆರನೇ ಆತ್ಮ ತಾನೆಂದು ಸ್ವತಃ ನೆತನ್ಯಾಹು ನಂಬಲು ಪ್ರೇರೇಪಣೆಯಾಗಿದೆ. ಮಿಲಿಟರಿ ಕೆರಿಯರ್ ನಂತರ ರಾಜತಾಂತ್ರಿಕ ಕ್ಷೇತ್ರದಲ್ಲಿ ನಂತರ ರಾಜಕೀಯಕ್ಕೆ ನೆತನ್ಯಾಹುರನ್ನು ಮುಂದೊಯ್ಯುತ್ತಿದ್ದು ಈ ನಂಬಿಕೆಯೇ ಆಗಿತ್ತು.
ನಮ್ಮ ಬಿಬಿಗೆ ಇಂತಹ ಒಂದು ದೌತ್ಯವಿದೆ ಎಂದು ನೆತನ್ಯಾಹುರ ನಿಕಟ ಅನುಯಾಯಿಗಳು ನಂಬುತ್ತಾರೆ. ಬಿಬಿ ಎಂದೂ ಸೋಲುವುದಿಲ್ಲ. ಅವರ ಕೆಲಸಗಳಿಗೆ ಅತೀಂದ್ರಿಯವಾದ ಸಮರ್ಥನೆಯಿದೆ ಎಂದು ಅವರು ನಂಬುತ್ತಾರೆ. ಕೆರಿಯರ್ನ ಸಂಜೆಯಲ್ಲಿ ಇಸ್ರೇಲಿನ ಇತಿಹಾಸದ ಅತ್ಯಂತ ದ್ವೇಷಿಸಲ್ಪಡುವ ಪ್ರಧಾನಿಯೆಂದು ಹೇಳಲ್ಪಡುವುದಕ್ಕಿಂತ ಮೊದಲು ಬಿಬಿ ಅವತಾರ ಎಂದು ಈಗ ನಡೆಯುವ ಗಾಝ ಯುದ್ಧ ಅದಕ್ಕಿರುವ ದಾರಿ ಮಾತ್ರವಾಗಿದೆ ಎಂದು ಕೂಡ ನಂಬುವವರಿದ್ದಾರೆ. ಈ ಯುದ್ಧ ಕಾಲದಲ್ಲಿ ನೆತನ್ಯಾಹು ನೀಡಿದ ಹೇಳಿಕೆಗಳು ಕೆಲಸಗಳು ಈ ನಂಬಿಕೆ ಆಧಾರದಲ್ಲಿದೆಯಷ್ಟೇ. ಎಲ್ಲದ್ದರ ಹಿಂದೆ ರಬ್ಬಿ ಮೆನೊಹಂ ಮೆಂಟೋಲ್ರೊಂದಿಗೆ ನೆತನ್ಯಾಹುರಿಗಿದ್ದ ಸಂಬಂಧ ಮತ್ತು ಅವರು ನೀಡಿದ ಒಂದು ಪ್ರವಚನವು ಕಾರಣವಾಗಿದೆ. ಹಬಾದ್ ಆಂದೋಲಿಗರು ಮಾತ್ರ ಅಲ್ಲ ವಿವಿಧ ಮೆಸಿಯಾನಿಕ್ ಜ್ಯೂಷ್ ಸೆಕ್ಟ್ಗಳವರು ಅಷ್ಟೇ ಅಲ್ಲ ಇವಾಂಜಲಿಕಲ್ ಕ್ರೈಸ್ತರಲ್ಲಿಯೂ ನೆತನ್ಯಾಹುರ ಬಗ್ಗೆ ಇದೇ ನಂಬಿಕೆ ಇದೆ.
1984ರಲ್ಲಿ ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿಯಾಗಿ ನೇಮಕಗೊಂಡ ನಂತರ ಮೆನೊಹಂ ಮೆಂಟೋಲ್ರನ್ನು ಮೊದಲ ಸಲ ನೆತನ್ಯಾಹು ಭೇಟಿಯಾಗಿದ್ದರು. ಆ ವರ್ಷ ಸಿಂಹಾತ್ ತೋರ ದಿನದಲ್ಲಿ ಅವರು ಇಬ್ಬರು ಪರಸ್ಪರ ಭೇಟಿಯಾಗಿದ್ದರು. ಪವಿತ್ರ ಗ್ರಂಥ ತೋರಾದ ವಾರ್ಷಿಕ ಪಾರಾಯಣ ಚಕ್ರ ಪೂರ್ತಿಗೊಳಿಸುವ ದಿವಸವನ್ನು ಸಿಂಹಾತ್ ತೋರ ಎಂದು ಕರೆಯುತ್ತಾರೆ. 39 ವರ್ಷದ ನಂತರ ಇಸ್ರೇಲಿಗೆ ಹಮಾಸ್ ದಾಳಿ ನಡೆದಿರುವುದು ಕೂಡ ಒಂದು ಸಿಂಹಾತ್ ತೋರ ದಿನದಲ್ಲಾಗಿತ್ತು.
'ಅಲ್ಲಿ ನಿನಗೆ 119 ಜನರೊಂದಿಗೆ ಹೋರಾಡಬೇಕಾಗುವುದು':
ಬಿಬಿ: ಮೈ ಸ್ಟೋರಿ’ ಎಂಬ ಆತ್ಮಕತೆಯಲ್ಲಿ ರಬ್ಬಿಯೊಂದಿಗಿನ ಪ್ರಥಮ ಭೇಟಿಯನ್ನು ನೆತನ್ಯಾಹು ವಿವರಿಸಿದ್ದಾರೆ. ವಿಶ್ವಸಂಸ್ಥೆಯ ತನ್ನ ಮೊದಲ ತಿಂಗಳ ಅತ್ಯಂತ ಅವಿಸ್ಮರಣೀಯವಾದ ಭೇಟಿ ಡಿಪ್ಲೋಮೆಟಿಕ್ ಆಗಿರಲಿಲ್ಲ, ಬದಲಾಗಿ ಓರ್ವ ರಬಿಯೊಂದಿಗಿನ ಭೇಟಿಯಾಗಿತ್ತು. ಅಂದು ಸಿಂಹಾತ್ ತೋರ ದಿನ ಆಗಿತ್ತು. ಸೈನ್ಯದ ಸಂಗಡಿಗನಾದ ಶ್ಮರ್ಯ ಹಾರೆಲ್ರು ಬ್ರೂಕ್ಲಿನ್ನ ಹಬಾದ್ನ ಕೇಂದ್ರಕ್ಕೆ ನನ್ನೊಂದಿಗೆ ಬಂದಿದ್ದರು. ನಾವು ಅಲ್ಲಿಗೆ ಹೋದಾಗ ಸಾವಿರಾರು ಹಸೀದಿ ವಿಶ್ವಾಸಿಗಳು ಅಲ್ಲಿ ನೆರೆದಿದ್ದರು. ಅವರು ಹಾಡಿ ಕುಣಿಯುತ್ತಿದ್ದರು. ಆ ಹಾಲ್ನಲ್ಲಿ ಸಣ್ಣ ಸ್ಟೇಜಿನಲ್ಲಿ ರಬ್ಬಿ ಇದ್ದರು. ತೋರ ಪಾರಾಯಣ ಮಾಡುತ್ತಿದ್ದರು. ರಬ್ಬಿಯವರ ಹತ್ತಿರಕ್ಕೆ ಹೋಗಲು ಶ್ಮೊರ್ಯ ಹೇಳಿದರು. ಆದರೆ, ಅವರು ತೋರ ಓದುತ್ತಿರುವುದರಿಂದ ಹಿಂಜ ರಿದೆ. ಹೋಗು' ಎಂದು ಶ್ಮೊರ್ಯ ಒತ್ತಾಯಿಸಿದರು. ಅಲ್ಲಿನ ಆಚಾರಗಳು ಏನು ಎಂದು ಗೊತ್ತಿರಲಿಲ್ಲವಲ್ಲ. ಅವನು ಹೇಳಿದಂತೆ ನಾನು ಸ್ಟೇಜ್ ಹತ್ತಿದೆ. ಅವರು ಹಿಂದಕ್ಕೆ ತಿರುಗಿ ನಿಂತಿದ್ದರು. ಮೆಲ್ಲನೆ ಅವರ ತೋಳನ್ನು ಮುಟ್ಟಿದೆ.ರಬ್ಬಿ ನಾನು ನಿಮ್ಮನ್ನು ಕಾಣಲು ಬಂದಿರುವೆ’ ಎಂದೆ.
ಭೇಟಿಯಾಗಲು ಮಾತ್ರ ಬಂದದ್ದಾ. ಮಾತಾಡುವುದು ಬೇಡ್ವಾ?' ಎಂದು ಅವರು ನನ್ನತ್ತ ತಿರುಗಿ ಕೇಳಿದರು. ಹಿಬ್ರುವಿನಲ್ಲಿ ನಾವು ಮಾತಾಡಿದೆವು. ನಂತರ ಹಾಡು ಮತ್ತು ನೃತ್ಯದ ಕಿವಿಗಡಚುವ ಶಬ್ದ ಕೇಳುತ್ತಿತ್ತು. ಅದರ ನಡುವೆಯೂ ರಬ್ಬಿಯ ಸಂದೇಶ ಸ್ಪಷ್ಟ ಮತ್ತು ಸೂಕ್ಷ್ಮವಾಗಿತ್ತು.ಸುಳ್ಳಿನ ಅರ ಮನೆಗೆ ನೀ ಹೋಗುತ್ತಿರುವೆ’ ವಿಶ್ವಸಂಸ್ಥೆ ಯನ್ನು ಸೂಚಿಸಿ ರಬ್ಬಿ ಹೇಳಿದರು. ನೆನೆಪಿಡು ಅಂಧಕಾರದ ತಳದಲ್ಲಿಯೂ ನಿನಗೊಂದು ಸಣ್ಣದೀಪ ಉರಿಸಲು ಸಾಧ್ಯವಿದೆ. ಆ ಬೆಳಕು ದೂರದೂರಕ್ಕೆ ವ್ಯಾಪಿಸುವುದು. ಇಸ್ರೇಲಿನ ಜನತೆಗಾಗಿ ನೀನು ಸತ್ಯದ ಬೆಳಕು ತೋರಿಸಬೇಕು.
' ನಂತರ, 1984ರ ವಿಶ್ವಸಂಸ್ಥೆಯ ತನ್ನ ಮೊದಲ ಭಾಷಣದ ನಂತರ ಅವರಿಂದ ಒಂದು ಸಂದೇಶ ಸಿಕ್ಕಿತು. ನಿನ್ನ ಮೊದಲ ಭಾಷಣವೇ ನನ್ನಲ್ಲಿ ಸಂತೃಪ್ತಿ ಮೂಡಿಸಿದೆ. ಈ ದಾರಿಯಲ್ಲಿ ಮುಂದುವರಿಯಲು ನಿನಗೆ ದೇವನ ಅನುಗ್ರಹ ಉಂಟಾಗಲಿ.' ವಿಶ್ವಸಂಸ್ಥೆಯಲ್ಲಿ ನಾನಿದ್ದ ನಂತರ ವರ್ಷಗಳಲ್ಲಿ ರಬ್ಬಿ ಉತ್ತೇಜಿಸುವ ಸಂದೇಶಗಳನ್ನು ಕಾಯಂ ಆಗಿ ಕಳುಹಿಸುತ್ತಿದ್ದರು.
1988ರಲ್ಲಿ ವಿಶ್ವಸಂಸ್ಥೆಯ ಕೆರಿಯರ್ ಕೊನೆಗೊಳಿಸಿ ನೆತನ್ಯಾಹು ರಾಜಕೀಯಕ್ಕಿಳಿದರು. ಲಿಕುಡ್ ಪಾರ್ಟಿಗೆ ಸೇರಿದರು. 120 ಸದಸ್ಯರಿರುವ ನೆಸೆಟ್ಗೆ ಆಯ್ಕೆ ಆದ ಬಳಿಕ ನ್ಯೂಯಾರ್ಕ್ ತೊರೆಯುವ ಮೊದಲು ರಬ್ಬಿಯನ್ನು ಭೇಟಿಯಾಗಿ ಬರಲು ಪುನಃ ನೆತನ್ಯಾಹು ಹೋದರು. ನಂತರ ವ್ಯಾಪಕವಾಗಿ ಪ್ರಚಾರವಾಗುತ್ತಿರುವ ಆ ಭೇಟಿಯ ವೀಡಿಯೊ ಭವಿಷ್ಯದ ಕೆಲವು ಪ್ರಧಾನ ನಿರ್ದೇಶಗಳು, ಸಲಹೆಗಳನ್ನು ನೆತನ್ಯಾಹುಗೆ ರಬ್ಬಿ ನೀಡಿದರು. “ಇಸ್ರೇಲಿನಿಂದ ಒಳ್ಳೆಯ ವಾರ್ತೆಗಳು ಯಾವುದೂ ಇಲ್ಲ. ಕರ್ಮ ಎಲ್ಲದರ ಮರ್ಮ ಆಗಿದೆ. ಆದರೆ, ಅದು ಆಗುವುದಿಲ್ಲ. ಒಂದು ವೇಳೆ ಅಲ್ಲಿನ ನಾಯಕರ ಮೇಲೆ ಪ್ರಭಾವ ಬೀರಲು ನಿನಗೆ ಸಾಧ್ಯವಾಗಬಹುದು” ಎಂದು ರಬ್ಬಿ ಹೇಳಿದರು.
“ನಾನು ಮರಳಿ ಹೋಗಲು ಸಿದ್ಧ ನಾಗುತ್ತಿರುವೆನು. ಅಲ್ಲಿನ ವಿಷಯಗಳಲ್ಲಿ ಪ್ರಭಾವ ಬೀರಲು ಪ್ರಯತ್ನಿಸುವೆನು” ಹೀಗೆ ನೆತನ್ಯಾಹು ರಬ್ಬಿಗೆ ಹೇಳಿದರು. “ಇಲ್ಲಿ ವಿಶ್ವಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ಇವೆ. ಅವಿಶ್ವಾಸಿಗಳ ಮೇಲೆ ಪ್ರಭಾವ ಬೀರುವುದರಲ್ಲಿ ಕೆಲವು ಯಹೂದಿ ಆದೇಶಗಳಿರುವ ವಿಷಯ ನಿನಗೆ ಗೊತ್ತಿದೆಯಷ್ಟೇ. ಅದುವೇ ನಿನ್ನ ದೌತ್ಯವಾಗಿದೆ.” ಅದರಿಂದ ಮೆಲ್ಲನೆ ಹಿಂದೆ ಸರಿದೆ ಎಂದು ನೆತನ್ಯಾಹು ತನ್ನ ಆತ್ಮಕತೆ ಬಿಬಿ: ಮೈ ಸ್ಟೋರಿಯಲ್ಲಿ ಸ್ಮರಿಸಿಕೊಂಡಿದ್ದಾರೆ.
ನೇರವಾಗಿ ಉತ್ತರಿಸುವ ಬದಲು ಬೇರೆ ಕೆಲವು ಚರ್ಚೆಯೆಡೆಗೆ ಅವರು ಸಾಗಿದರು. “ಹಾಗಿರುವ ಮೊದಲ ಭೇಟಿಯನ್ನು ನಾನು ಮರತೇ ಇಲ್ಲ. ಅವರು ಹೇಳಿದಂತೆ ಕೆಲಸ ಮಾಡಿರುವೆನು. ಸ್ವಾಭಿಮಾನದೊಂದಿಗೆ ಧೈರ್ಯದಿಂದ ದೃಢವಾಗಿ ನಿಂತೆನು. ಆದರೂ ನಾನು ಇಲ್ಲಿ ವರ್ಷಗಳಿಂದ ಇದ್ದೇನೆ.” ಆದರೆ, ವಿಶ್ವಸಂಸ್ಥೆಯ ನೆತನ್ಯಾಹುರ ವರ್ಷಗಳು ದೀರ್ಘಗೊಂಡದ್ದಕ್ಕೆ ರಬ್ಬಿಗೆ ನಿರಾಸೆ ಇತ್ತು. ಅದಕ್ಕೆ ಉತ್ತರವಾಗಿ’ ಮಿಸಿಹಾರ ಆಗಮನದವರೆಗೆ ಬೇಕಿದ್ದರೆ ಅಲ್ಲಿಯೇ ನಿನಗೆ ಮುಂದುವರಿಯಬಹುದಾಗಿದೆ” ಎಂದರು. ರಬ್ಬಿಯ ಪ್ರೋತ್ಸಾಹಕ್ಕೆ ರಬ್ಬಿಗೆ ನೆತನ್ಯಾಹು ಕೃತಜ್ಞತೆ ಸಲ್ಲಿಸಿ ಇನ್ನೂ ಕೂಡ ಭೇಟಿಯಾಗಲು ಬರುವೆ ಎಂದು ತಿಳಿಸಿದರು.
“ನನ್ನ ಯಾತ್ರೆಯ ಆರಂಭದಲ್ಲೇ ನಾನೂ ಈಗಲೂ ಇದ್ದೇನೆ. ನೀನು ಮತ್ತು ನಿನ್ನ ಯಾತ್ರೆಯನ್ನು ಆರಂಭಿಸುತ್ತಿರುವೆ”… ಇದರ ನಂತರ ರಬ್ಬಿ ಹೇಳಿದ ಮಾತುಗಳು ಮತ್ತೆಂದೂ ನಾನು ಮರೆತಿಲ್ಲ ಎಂದು ನೆತನ್ಯಾಹು ಬರೆಯುತ್ತಾರೆ,
ಅಲ್ಲಿನ 119 ಸದಸ್ಯರೊಂದಿಗೆ ನಿನಗೆ ಹೋರಾಡಬೇಕಾಗಿ ಬರುವುದು. (ಪಾರ್ಲಿಮೆಂಟಲ್ಲಿ 120 ಸದಸ್ಯರಿರುವುದು) ಆದರೆ, ಅದು ಯಾವುದೂ ನಿನಗೆ ಬಾಧಕ ಆಗುವುದಿಲ್ಲ. ಕಾರಣವೇನೆಂದರೆ ದೇವನು ನಿನ್ನ ಕಡೆಯಲ್ಲಿದ್ದಾನೆ.
ಹೆಚ್ಚು ವಿಳಂಬಿಸದೆ 1990 ನವೆಂಬರ್ನಲ್ಲಿ ನೆತನ್ಯಾಹು ಪುನಃ ರಬ್ಬಿಯ ಮುಂದೆ ತಲುಪಿದರು. ಆಗಲೇ ನೆತನ್ಯಾಹುಗೆ ಪಾರ್ಲಿಮೆಂಟು ಸದಸ್ಯನಾಗಿ ಎರಡು ವರ್ಷ ಆಗಿತ್ತು. ಮೆಲ್ಲಗೆ ಇಸ್ರೇಲಿನ ರಾಜಕೀಯ ಭೂಮಿಯಲ್ಲಿ ಜಾಗ ಮಾಡಿಕೊಂಡಿದ್ದರು. ರಬ್ಬಿಗೆ ನೆತನ್ಯಾಹು ಮೇಲೆ ಯಥಾರ್ಥ ಯೋಚನೆಗಳು ಮತ್ತು ನಿರೀಕ್ಷೆಗಳು ಏನೆಂದು ಪೂರ್ಣವಾಗಿ ಪ್ರಕಟಗೊಳ್ಳುವ ಭೇಟಿ ಕೂಡ ಅದು ಆಗಿತ್ತು.
ವಿಜಯವನ್ನು ಹಾರೈಸಿ ಕೈಹಿಡಿದು ಕೂಡಲೇ ರಬ್ಬಿ ನೆತನ್ಯಾಹುರನ್ನು ಕೇಳಿದರು,ನೋಡಿ ತುಂಬ ದಿನ ಆಯಿತಲ್ವೇ’. ಹೀಗೆ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಅನುಗ್ರಹ ಕೇಳಿ ಬಂದಿರುವೆ ಎಂದು ನೆತನ್ಯಾಹು ಹೇಳುತ್ತಾರೆ. ರಬ್ಬಿಯ ಮಾತುಗಳು ಬೇರೆ ಬೇರೆ ದಾರಿಗಳಿಗೆ ವ್ಯಾಪಿಸಿತು. “ನಾವು ಕೊನೆಯಲ್ಲಿ ಭೇಟಿಯ ನಂತರ ಬಹಳಷ್ಟು ವಿಷಯಗಳಲ್ಲಿ ಬದಲಾವಣೆ ಬಂತು. ಬದಲಾಗದಿರುವುದು ಏನೆಂದರೆ ಮಿಶಿಹ ಇದುವರೆಗೆ ಬಂದಿಲ್ಲ. ಅವರು ಬೇಗನೆ ಬರುವಂತಾಗಲು ಬೇಗ ಬೇಗ ಏನಾದರೂ ಮಾಡು.”
ನಾವು ಮಾಡುತ್ತಿದ್ದೇವೆ' ನೆತನ್ಯಾಹು ಪುನರುಚ್ಚರಿಸಿದರು. ಅದು ಯಾವುದೂ ಸಾಕಾಗಲ್ಲ. ಈ ದಿನದಲ್ಲಿ ಎಷ್ಟು ಗಂಟೆಗಳು ಕಳೆದು ಹೋಗಿದೆ. ಅದರೂ ಅವರು ಬಂದಿಲ್ಲ. ಇನ್ನು ಕೆಲವು ದಿನಗಳು ಬಾಕಿ ಇರುವುದು. ಆದುದರಿಂದ ಇಂದೇ ಶ್ರಮಿಸಬೇಕಾಗಿದೆ.’
ಯಹೂದಿ ಜನರ ನೇತೃಸ್ಥಾನಕ್ಕೆ ಮಿಶಿಹ ಅವತರಿಸುವುದಕ್ಕಿಂತ ಸ್ವಲ್ಪ ಮುಂಚೆ ಕೊನೆಯ ನಾಯಕನಾಗಿ ನೆತನ್ಯಾಹುರನ್ನು ರಬ್ಬಿ ನೋಡಿದ್ದರು. ಇಸ್ರೇಲಿನ ಕೊನೆಯ ಪ್ರಧಾನಿ ನೆತನ್ಯಾಹು ಆಗಿದ್ದಾರೆ. ಅಧಿಕಾರದ ಕಡಿವಾಣ ಮಿಶಿಹರಿಗೆ ಹಸ್ತಾಂತರಿಸುವುದು ನೆತನ್ಯಾಹು ಆಗಿರುವರು ಎಂದು ರಬ್ಬಿ ಹೇಳಿದ್ದರು.
(ಮುಂದುವರಿಯುವುದು)












