ಸನ್ಮಾರ್ಗ ವಾರ್ತೆ
ವಕ್ಫ್ ತಿದ್ದುಪಡಿ ಮಸೂದೆಯ ಪರ ಮತ ಚಲಾಯಿಸುವುದರೊಂದಿಗೆ ತೆಲುಗು ದೇಶಂ ಪಾರ್ಟಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಮುಸ್ಲಿಂ ಸಮುದಾಯದ ಬೆನ್ನಿಗೆ ಇರಿದಿದೆ ಅನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ಎರಡು ಪಕ್ಷಗಳು ಮುಸ್ಲಿಂ ಸಮುದಾಯದಿಂದ ಭಾರಿ ಪ್ರಮಾಣದಲ್ಲಿ ವೋಟನ್ನು ಪಡೆದಿವೆ. ಬಿಹಾರದಲ್ಲಿ ಮೂವತ್ತು ಶೇಕಡ ಮುಸ್ಲಿಂ ಮತವಿದ್ದು ಆಂಧ್ರಪ್ರದೇಶದಲ್ಲಿ ಸುಮಾರು 18 ಶೇಕಡಾ ಮುಸ್ಲಿಂ ಓಟುಗಳಿವೆ.
ಆದರೆ ಮುಸ್ಲಿಮರ ಮೂಲಭೂತ ಹಕ್ಕುಗಳ ಮೇಲೆ ದಾಳಿಯಾಗುತ್ತಿರುವ ಸಂದರ್ಭದಲ್ಲಿ ಈ ಎರಡು ಪಕ್ಷಗಳು ಮುಸ್ಲಿಮರ ಜೊತೆ ನಿಲ್ಲದೆ ಬಿಜೆಪಿಯ ಜೊತೆ ಕೈಜೋಡಿಸಿವೆ.
ಹಾಗಂತ ಮುಸ್ಲಿಮರ ಬೆನ್ನಿಗಿರಿಯುವ ಈ ಎರಡು ಪಕ್ಷಗಳ ಚಾಳಿ ಇದು ಮೊದಲಲ್ಲ. 2019ರಲ್ಲಿ ಸಿಎಎ ವಿಷಯದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿ ಸರಕಾರವನ್ನು ಬೆಂಬಲಿಸಿತ್ತು. ಹಾಗೆಯೇ 2014ರಲ್ಲಿ ಚಂದ್ರಬಾಬು ನಾಯ್ಡು ಅವರ ಪಕ್ಷವು ಎನ್.ಡಿ.ಎ.ಯನ್ನು ಬೆಂಬಲಿಸಿತ್ತು.
ಮುಸ್ಲಿಮರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಸ್ಟ್ರಾಟಜೀಯನ್ನು ತಯಾರಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದಾರೆ, ಅವರು ಸ್ಪಷ್ಟ ಯೋಜನೆಯನ್ನು ಹಾಕಿಕೊಂಡರೆ ರಾಜಕೀಯವಾಗಿ ಆಗುವ ಈ ಹಿನ್ನಡೆಯನ್ನ ತಡೆಯಬಹುದು ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.












