ಏರ್ ಇಂಡಿಯಾದ ನಿರ್ದೇಶಕರಾಗಿ ನೇಮಕಗೊಂಡ ಟರ್ಕಿಶ್ ಏರ್ ಲೈನ್ಸ್ ನ‌ ಮಾಜಿ ನಿರ್ದೇಶಕ ಇಲ್ಕರ್ ಅಯ್ಸಿ

0
365

ಸನ್ಮಾರ್ಗ ವಾರ್ತೆ

ನವದೆಹಲಿ: ಏರ್ ಇಂಡಿಯಾದ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಟರ್ಕಿಶ್ ಏರ್ ಲೈನ್ಸ್ ನ‌ ಮಾಜಿ ನಿರ್ದೇಶಕ ಇಲ್ಕರ್ ಅಯ್ಸಿಯವರನ್ನು ಟಾಟಾ ಸನ್ಸ್ ಸಂಸ್ಥೆ ನೇಮಕಗೊಳಿಸಿದೆ‌.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಟಾಟಾ ಸನ್ಸ್ ಸಂಸ್ಥೆಯ ಚೇಯರ್ ಮೆನ್ ಎನ್.‌ಚಂದ್ರಶೇಖರನ್, ವಾಯು ಯಾನ ಉದ್ಯಮದಲ್ಲಿ ಟರ್ಕಿಶ್ ಏರ್ ಲೈನ್ಸ್ ನ ಅಭಿವೃದ್ಧಿಗೆ ಶ್ರಮಿಸಿ ಈಗ ಹೆಸರು ಗಳಿಸಲು ಕಾರಣೀಕರ್ತರಾದ ಇಲ್ಕರ್ ಅವರನ್ನು ನಾವು ನಮ್ಮ ಟಾಟಾ ಸಂಸ್ಥೆಯಿಂದ ನಡೆಸಲ್ಪಡುವ ಏರ್ ಇಂಡಿಯಾ ಕಂಪನಿಯ ಹೊಸ ಯುಗಕ್ಕೆ ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.

ಏರ್ ಇಂಡಿಯಾ ಕಂಪನಿಯ ಬೋರ್ಡ್ ಮೀಟಿಂಗ್ ನಲ್ಲಿ ಅಯ್ಸಿಯವರ ಆಯ್ಕೆ ಮಾಡಲಾಯಿತು. ಇದರಲ್ಲಿ ಚಂದ್ರಶೇಖರನ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

2022 ರ ಎಪ್ರಿಲ್ 1 ರಂದು ಇಲ್ಕರ್ ಅಯ್ಸಿಯವರು ತಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಟಾಟಾ ಸನ್ಸ್ ತಮ್ಮ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.