ಸನ್ಮಾರ್ಗ ವಾರ್ತೆ
ನವದೆಹಲಿ:ಭಾರತದ ಹಲವಾರು ಪ್ರಮುಖ ಬ್ರಾಂಡ್ಗಳು ಮಾರಾಟ ಮಾಡುತ್ತಿರುವ ಜೇನುತುಪ್ಪವು ಸಕ್ಕರೆ ಪಾಕದೊಂದಿಗೆ ಕಲಬೆರಕೆಯಾಗಿದೆ ಎಂದು ಸಂಶೋಧನೆ ಮತ್ತು ವಕಾಲತ್ತು ಸಂಸ್ಥೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಬುಧವಾರ ತಿಳಿಸಿದೆ.
ಸಕ್ಕರೆ ಪಾಕದೊಂದಿಗೆ ಕಲಬೆರಕೆ ಮಾಡಿದ 77% ಮಾದರಿಗಳನ್ನು ಅವರು ಪತ್ತೆ ಹಚ್ಚಲಾಗಿದ್ದು. “ಡಾಬರ್, ಪತಂಜಲಿ, ಬೈದ್ಯನಾಥ್, ಝಂಡು, ಹಿತ್ಕಾರಿ ಮತ್ತು ಆಪಿಸ್ ಹಿಮಾಲಯ ಮುಂತಾದ ಬ್ರಾಂಡ್ಗಳ ಜೇನು ಮಾದರಿಗಳು ಎನ್ಎಂಆರ್ (ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್) ಪರೀಕ್ಷೆಯಲ್ಲಿ ವಿಫಲವಾಗಿವೆ” ಎಂದು ಸಿಎಸ್ಇ ತಿಳಿಸಿದೆ.












