ಜೋ ಬೈಡನ್‍ಗೆ ಮತ ನೀಡುವಂತೆ ಒಬಾಮ ಕರೆ- ವಿಡಿಯೋ

0
593

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.2: ಮಂಗಳವಾರ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿ ಜೊ ಬೈಡನರಿಗೆ ಮತಹಾಕಬೇಕೆಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಫೋನ್ ಕರೆ ಮಾಡಿದ್ದಾರೆ.

ಮನೆಯವರೆಲ್ಲರೂ ಸುಖಕಷ್ಟಗಳನ್ನು ವಿಚಾರಿಸಿದ ಬಳಿಕ ಬೈಡನ್‍ಗೆ ಮತಹಾಕಬೇಕಾದ ಅಗತ್ಯವನ್ನು ಒಬಾಮ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಬಾಮ ಮತ ನೀಡುವಂತೆ ಕೇಳುತ್ತಿರುವ ವೀಡಿಯೊವನ್ನು ಜೊ ಬೈಡನ್ ಪ್ರಚಾರ ವಿಭಾಗ ಹೊರಬಿಟ್ಟಿದೆ. ಅಮೆರಿಕದ 44ನೇ ಅಧ್ಯಕ್ಷರಾಗಿ ಒಬಾಮ 2009ರಿಂದ 2017ರವರೆಗೆ ಅಧಿಕಾರದಲ್ಲಿದ್ದರು.

ಈ ಸಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೆಮಕ್ರಾಟಿಕ್ ಅಭ್ಯರ್ಥಿ ಜೊಬೈಡನ್‍ರಿಂದ ಪ್ರತಿಸ್ಪರ್ಧೆ ಎದುರಿಸುತ್ತಿದ್ದಾರೆ. ಟ್ರಂಪ್ ರಿಪಬ್ಲಿಕನ್ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಜೊ ಬೈಡನ್ ಜಯಗಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.