ಆನ್‍ಲೈನ್ ಗೇಮ್‍ನಲ್ಲಿ ಹಣ ಕಳಕೊಂಡ ವಿದ್ಯಾರ್ಥಿ ಆತ್ಮಹತ್ಯೆ

0
393

ಸನ್ಮಾರ್ಗ ‌ವಾರ್ತೆ

ಚೆನ್ನೈ,ಜು. 28: ಆನ್‍ಲೈನ್ ಗೇಮ್‍ನಲ್ಲಿ ಹಣ ಕಳಕೊಂಡ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈಯ ಖಾಸಗಿ ಕಾಲೇಜೊಂದರ ಮೂರನೆ ವರ್ಷದ ಪದವಿ ವಿದ್ಯಾರ್ಥಿ ಡಿಬಿ ಸತ್ರಂ ನಿತೀಶ್‍ ಕುಮಾರ್(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೋನಾದ ಹಿನ್ನೆಲೆಯಲ್ಲಿ ಕಾಲೇಜು ಇಲ್ಲದ್ದರಿಂದ ಚೆನ್ನೈ ಅಮೈಂದಕ್ಕರದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಈತ, ಮನೆಗೆ ಮರಳದ್ದರಿಂದ ಕುಟುಂಬದವರು ಹುಡುಕಿದಾಗ ಅಂಗಡಿಯೊಳಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಆತ್ಮಹತ್ಯೆ ಕುರಿತು ಬರೆದ ಚೀಟಿಯಲ್ಲಿ ಆನ್‍ಲೈನ್‍ನಲ್ಲಿ ಹಣ ಕಳಕೊಂಡಿದ್ದೇನೆ ಎಂದು ಬರೆದಿಟ್ಟಿದ್ದಾನೆ. ಹಣ ಪುನಃ ಗಳಿಸಬಹುದು ಎಂದು ಕೆಲಸ ಮಾಡುವ ಅಂಗಡಿಯ ಹಣ ತೆಗೆದು ಆನ್‍ಲೈನ್ ಆಟ ಆಡಿದ್ದಾನೆ. ಆದರೆ ಅದು ಕೂಡ ನಷ್ಟವಾಗಿತ್ತು. ಅಮೈಂದಕ್ಕರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹ ಕಲ್ಪಕಂ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.