ಕೊಲ್ಕತ್ತಾ, ಜೂ. 11: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಕೊಲೆ ಮಾಡುವವರಿಗೆ ಒಂದು ಕೋಟಿ ರೂಪಾಯಿ ವಾಗ್ದಾನ ನೀಡಿ ಪತ್ರವೊಂದು ಕಾಣಿಸಿಕೊಂಡಿದೆ. ರಾಂಬಾಗ್ನ ತೃಣಮೂಲ ಕಾಂಗ್ರೆಸ್ ಸಂಸದ ಅಪರೂಪ ಬೋಡರ್ ಗೆ ಬೆದರಿಕೆ ಪತ್ರ ಲಭಿಸಿದ್ದು ಅವರು ಶ್ರೀರಾಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪತ್ರದಲ್ಲಿ ಮಮತಾರನ್ನು ಕೆಟ್ಟ ಮಂತ್ರವಾದಿನಿ ಎಂದು ಹೇಳಲಾಗಿದೆ. ಜೊತೆ ತಿರುಚಿದ ಫೋಟೊ ಕೂಡ ಇದೆ. ಮಮತಾ ಸತ್ತು ಮಲಗಿದ್ದನ್ನು ತೋರಿಸಿ ಕೊಡುವಾತನಿಗೆ ಒಂದು ಕೋಟಿ ರೂಪಾಯಿ ನೀಡುವ ಭರವಸೆ ನೀಡಲಾಗಿದೆ. ರಜ್ವೀರ್ ಕಲ್ಲ ಎನ್ನುವ ಹೆಸರನಲ್ಲಿ ಪತ್ರ ಬರೆಯಲಾಗಿದೆ. ಫೋನ್ ನಂಬರ್ ಪತ್ರದಲ್ಲಿದೆ. ಆದರೆ ಈ ನಂಬರ್ ರಾಜವೀರ್ ಕಲ್ಲ ಎನ್ನುವ ಬಿಂಧನಗರದ ವ್ಯಕ್ತಿಯದ್ದಾಗಿದೆ. ತನ್ನ ಹೆಸರು ಮತ್ತು ನಂಬರನ್ನು ಪತ್ರ ಬರೆದವನು ಉಪಯೋಗಿಸಿದ್ದಾನೆ ಎಂದು ಈತನೂ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಹಿಂದೆ ಮಮತಾರ ಚಿತ್ರವನ್ನು ತಿರುಚಿ ಪ್ರಚಾರ ಮಾಡಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತೆಯ ವಿರುದ್ಧ ಕ್ರಮ ಜರಗಿಸಲಾಗಿತ್ತು.












