ಪದ್ಮಾವತ್’ ನಾನು ಕಂಡಂತೆ

0
12101

`
ಅಶೀರುದ್ದೀನ್ ಆಲಿಯಾ
ಹಲವಾರು ವಿವಾದಗಳನ್ನು ಎಬ್ಬಿಸಿ ಜನ-ಮಾಧ್ಯಮಗಳಲ್ಲಿ ವಿಭಿನ್ನ ರೀತಿಯ ಚರ್ಚೆಗೆ ಸಿಲುಕಿ ಕುತೂಹಲವನ್ನು ಹೆಚ್ಚಿಸಿದ ಬನ್ಸಾಲಿಯ ಬಹು ನಿರೀಕ್ಷಿತ ಚಿತ್ರ `ಪದ್ಮಾವತಿ’ ಅಂದರೆ `ಪದ್ಮಾವತ್’ ವಿವಾದಗಳಿಗೆ ತೆರೆ ಎಳೆಯದೆ ಬಿಡುಗಡೆಗೊಂಡು ಅಲ್ಪಸ್ವಲ್ಪ ಹಣಗಳಿಸಿತ್ತಾದರೂ ಒಂದು ವಿಭಾಗದ ಜನರನ್ನು ದ್ವೇಶಿಸಿ ಅತೀ ಕೆಲಮಟ್ಟಕ್ಕೆ ತಲುಪಿಸುವ ಸಂಘಪರಿವಾರದ ಅಜೆಂಡಾವನ್ನು ಸಾಕ್ಷಾತ್ಕಾರಗೊಳಿಸುವಲ್ಲಿ ಬನ್ಸಾಲಿ ಮತ್ತು ಬಳಗ ಯಶಸ್ವಿಗೊಂಡಿರುವ ಪ್ರತಿ ರೂಪವೇ ಪದ್ಮಾವತ್.

1296-1316ರ ವರೆಗೆ ಸುಲ್ತಾನನಾಗಿ ಮೆರೆದ ದಷ್ಟ ಆಡಳಿತಗಾರ ಅಲ್ಲಾಹುದ್ದೀನ್ ಖಿಲ್ಜಿಗೆ ಹೊಸ ರೂಪಕೊಟ್ಟು ಜನರ ಕೋಪಕ್ಕೆ ಪಾತ್ರನಾಗುವಂತೆ ಮಾಡಿದ ಚಿತ್ರ. ನಿಜವಾಗಿಯೂ ಅಲ್ಲಾಹುದ್ದೀನ್ ಖಿಲ್ಜಿ ಸರಿ ಸುಮಾರು 20 ವರ್ಷ ದೆಹಲಿಯಲ್ಲಿ ಆಡಳಿತ ನಡೆಸಿ ಮಂಗೂಳಿಯನ್ನರ ನಿರಂತರ ಆಕ್ರಮಣವನ್ನು ತನ್ನ ಸೈನಿಕಾ ಬಲದಿಂದ ಮಂಗೋಳಿಯರನ್ನು ಸೋಲಿಸಿ ಭಾರತವನ್ನು ರಕ್ಷಿಸಿದ ಒಬ್ಬ ಆಡಳಿತಗಾರ.

ಕೋಮು ಶಕ್ತಿಗಳ ಇತಿಹಾಸ ಧ್ರುವೀಕರಣ ಫಲವಾಗಿ ಖಲ್ಜಿಯು ಒಬ್ಬ ವಂಚಕ ಮುಸ್ಲಿಮ್ ರಾಜನಾಗಿ ಬದಲಾಗುತ್ತಾನೆ. ಸುಮಾರು 300 ವರ್ಷಗಳ ನಂತರ. ಅಂದರೆ 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಅಸಿ ಬರೆದ ಕವನದಿಂದ ಚಿತ್ರಕತೆಯನ್ನು ಹೆಣೆದು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಖಿಲ್ಜಿಯನ್ನು ಕೆಲಮಟ್ಟಕ್ಕೆ ನೂಕಿ ಒಬ್ಬ ಕ್ರೂರಿ, ಕಾಮಿ, ವಂಚಕ, ಹುಚ್ಚನಂತೆ ಚಿತ್ರೀಕರಿಸಿ ಜೊತೆಗೆ ಚಿತ್ರ ಸಂಭಾಷಣೆಯಲ್ಲಿ ಖಿಲ್ಜಿ ಪ್ರತಿಪಾದಿಸುವ ದರ್ಮವನ್ನು, ಧರ್ಮದ ಜನರನ್ನು ನಿಂದಿಸುವ ಈ ಚಿತ್ರ. ರಜಪೂತರನ್ನು ಹಾಡಿ, ಹೊಗಳಿ, ಗಗನಕ್ಕೇರಿಸಿದಲ್ಲದೆ ರಜಪೂತರು ಈ ದೇಶದ ರಕ್ಷಕರು ಮತ್ತು ಪ್ರತಿಷ್ಠೆಯ ಸಂಕೇತವೆನ್ನುವಷ್ಟರ ಮಟ್ಟಿಗೆ ಬಿಂಬಿಸಿದ್ದಾನೆ.
ಮೇವಾಡದ ರಾಜ ರಾಜ ರತ್ನ ಸೇನ (ಶಾಹಿದ್ ಕಪೂರ್) ಸಿಂಹಳದೂರಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಅಲ್ಲಿನ ರಾಣಿ ಪದ್ಮಾವತಿಯ (ದೀಪಿಕಾ ಪಡಕೋಣೆ) ಮೊಹಕ್ಕೊಳಗಾಗಿ ವಿವಾಹವಾಗುತ್ತಾನೆ. ಪದ್ಮಾವತಿಯ ಸೌಂದರ್ಯ ಕಂಡು ಆಸ್ಥಾನದ ಆಚಾರ್ಯ ರಾಘವನ್ನು ನಿದ್ದೆಗೆಡಿಸುತ್ತದೆ. ಆಚಾರ್ಯವು ರಾಣಿ ಪದ್ಮಿನಿಗಾಗಿ ಹೊಂಚು ಹಾಕುತ್ತಿದ್ದಾನೆಂಬ ಸುದ್ದಿ ಸಿಕ್ಕಿದಾಗ ಆಚಾರ್ಯನನ್ನು ಗಡಿಪಾರುಗೊಳಿಸಲಾಗುತ್ತದೆ. ಗಡಿಪಾರುಗೊಂಡ ಆಚಾರ್ಯ ಹಗೆಯೊಂದಿಗೆ ಅಲ್ಲಾಹುದ್ದೀನ್ ಖಿಲ್ಜಿಯ ಆಸ್ಥಾನಕ್ಕೆ ತಲುಪಿ ಪದ್ಮಿನಿಯ ಸೌಂದರ್ಯವನ್ನು ವರ್ಣಿಸಿ ಅಲ್ಲಾಹುದ್ದೀನ್ ಖಿಲ್ಜಿಯಲ್ಲಿ ಮೋಹವುಂಟು ಮಾಡುತ್ತಾನೆ. ಈ ವಿಷಯವನ್ನರಿತ ಖಿಲ್ಜಿಯ ರತ್ನ ಸೇನನಿಗೆ ಪತ್ರ ಬರೆಯುತ್ತಾನೆ. ರಜಪೂತ ರಾಜನು ತನ್ನ ಪತ್ರವನ್ನು ನಿರಾಕರಿಸಿದ ಕಾರಣಕ್ಕೆ ಅಲ್ಲಾಹುದ್ದೀನ್ ಸೈನ್ಯದೊಂದಿಗೆ ಮೇವಾಡಕ್ಕೆ ಹೊರಡುತ್ತಾನೆ. ಕೋಟೆಯ ಮುಂದೆ ಠಿಕಾಣಿ ಹೊಡೆದ ಅಲ್ಲಾಹುದ್ದೀನ್ ರಜಪೂತ ರಾಜನಿಗೆ ಬೆದರಿಕೆ ನೀಡುತ್ತಿರುತ್ತಾನೆ. ಕೊನೆಗೆ ದೆಹಲಿ ಸುಲ್ತಾನನು ರಜಪೂತರ ನಡುವೆ ಸಂಬಂಧ ಬೆಳೆಸುವ ಎಂಬ ಒಳ ಸಂಚಿನ ದುರುದ್ದೇಶವಿಟ್ಟುಕೊಂಡು ಅಲ್ಲಾಹುದ್ದೀನ್ ರಾಣ ರತ್ನ ಸೇನನ ಶರತ್ತಿನ ಮೇರೆಗೆ ಆಸ್ತಾನಕ್ಕೆ ಭೇಟಿ ಕೊಟ್ಟಾಗ ಕನ್ನಡಿ ಪರದೆಯ ಮೇಲೆ ರಜಪೂತ ರಾಣಿ ಪದ್ಮಿಣಿಯನ್ನು ಕಂಡು ಇನ್ನಷ್ಟು ಮಾಹಿತನಾಗುತ್ತಾನೆ. ನಂತರ ರಾಜನನ್ನು ಮೋಸದಲ್ಲಿ ಅಪಹರಣ ಗೈದು ಕ್ರೂರವಾಗಿ ಮರ್ದಿಸಿ ಪದ್ಮಿನಿ ಬಂದರೆ ರಾಜ ರತ್ನ ಸೇನನನ್ನು ಬಿಡುಗಡೆಗೊಳಿಸುವುದೆಂದು ಪತ್ರ ಬರೆದಿರುತ್ತಾನೆ. ರಾಜರ ರತ್ನ ಸೇನನನ್ನು ದೆಹಲಿ ಆಸ್ತಾನದ ಸಹಾಯಕದಿಂದ ರಕ್ಷಿಸಿ ಸುರಂಗ ಮಾರ್ಗದಿಂದ ತಪ್ಪಿಸಿಕೊಂಡನೆಂದರಿತ ಅಲ್ಲಾಹುದ್ದೀನ್ ಮೇವಾಡವನ್ನು ಅಕ್ರಮಣ ಮಾಡಿ ರಾಜ ರತ್ನ ಸೇನೆಯನ್ನು ಕೊಲ್ಲುತ್ತಾನೆ. ರಜಪೂತರು ಸೂತರೆಂದು ತಿಳಿಯುತ್ತಿದ್ದಂತೆ ರಾಣಿ ಪದ್ಮಿನಿಯ ನೇತೃತ್ವದಲ್ಲಿ ಅಲ್ಲಿನ ರಾಣಿಯರು ಸೇರಿ `ಜೋಹರ್’ (ಪತಿ ಸಹಗಮನ) ಬೆಂಕಿಗೆ ಹಾರಿ ಪ್ರಾಣ ಬಿಡುತ್ತಾರೆ. ಇಲ್ಲಿಗೆ ಸಿನಿಮಾ ಕತೆ ಮುಗಿಯುತ್ತದೆ.

ಇತಿಹಾಸಗಳಲ್ಲಿ ಹುರುಳಿಲ್ಲದ ಹಲವರು ಕಟು ಕತೆಗಳನ್ನು ಕಟ್ಟಿ ಬಣ್ಣ ಬಳಿದು ಭಾರತದಲ್ಲಿ ಬೆಳೆದು ಬರುತ್ತಿರುವ ಕೋಮ ಪ್ರಚೋದಿತ ಅಥವಾ ಮುಸ್ಲಿಮ್ ವಿರೋಧಿ ಸಂಘಗಳಿಗೆ ಬೆಣ್ಣೆ ಸುರಿದಂತಾಗಿದೆ ಈ ಚಿತ್ರ. ಈ ಮೊದಲೇ ಬನ್ಸಾಲಿಯ ಬಾಜಿರಾವ್ ಮಸ್ತಾನಿ ಸಿನಿಮಾವು ಒಂದು ಮುಸ್ಲಿಮ್ ವಿರೋಧಿ ಸಿನಿಮವಾಗಿದ್ದವು. ಒಟ್ಟಿನಲ್ಲಿ ಹೈದರಬಾದಿನ ನಿಝಾಮ, ಮೊಗಲರು, ಬಹುಮನಿ ಸುಲ್ತಾನರು. ಈ ದೇಶದ ರಕ್ಷಕರೆಲ್ಲ ದೇಶದ ಶತ್ರುಗಳು ಮತ್ತು ಮರಾಠರು, ಪೇಶ್ವೆಗಳು, ರಜಪೂತರು ಮುಂತಾದ ಹಿಂದು ರಾಜಂದಿರು ದೇಶದ ರಕ್ಷಕರು ಎಂಬ ಹೊಸ ಇತಿಹಾಸವನ್ನು ರಚಿಸುವಲ್ಲಿ ಬನ್ಸಾಲಿ ಬಳಗ ಯಶಸ್ವಿಯಾಗಿದ್ದಾರೆ. ಬನ್ಸಾಲಿಗೆ ತನ್ನ ಹೆಸರಿಗಾಗಿ ಕೋಮು ಪ್ರಚೋದಿತ ಸಿನಿಮಾವನ್ನು ರಚಿಸಿ ಸ್ವಲ್ಪ ಮಟ್ಟಿನಲ್ಲಿ ಹಣ ಗಳಿಸಬಹುದಾದರೂ ಭಾರತದ ಇತಿಹಾಸದ ಮೇಲೆ ನಾಳೆಯ ಸಮರಸ್ಯದ ಮೇಲೆ ಪರಿಣಾಮಕಾರಿ ಹೊಡೆತ ಕೊಟ್ಟಿದ್ದಾರೆ, ನಿಜವಾಗಿಯೂ ಪದ್ಮಾವಾತಿ ಸಿನಿಮಾದ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಾದವರಾರು? ರಜಪೂತರಿಗೆ ವಿರೋಧಿಸುವ ಯಾವ ಹಕ್ಕೂ ಇಲ್ಲ. ಕಾರಣ ರಜಪೂತರನ್ನು ಯಾವ ಮಟ್ಟಕೇರಿಸಲಾಗಿದೆ ಎಂದು ಸಿನಿಮಾ ನೋಡಿದವರಿಗೆ ತಿಳಿಯಬಹುದು.

ಆದರೆ ಸಮಾನ ಮನಸ್ಕರು. ಇತಿಹಾಸ ತಜ್ಞರು ಮುಸ್ಲಿಮ್ ದುರಿಣರು ಈ ಸಿನಿಮಾದಲ್ಲಿನ ಇತಿಹಾಸದಲ್ಲಿಲ್ಲದ ಸುಳ್ಳು ಸನ್ನಿವೇಶಗಳ ಬಗ್ಗೆ ಧ್ವನಿ ಎತ್ತಬೇಕಿತ್ತು. ಯಾರು ಮಾತನಾಡಲಿಲ್ಲ. ಮಾಧ್ಯಮ ವರ್ಗ ಅತ್ತ ಸುಳಿಯಲಿಲ್ಲ. ಅಲ್ಲಾವುದ್ದೀನ್‍ನಂತಹ ಮುಸ್ಲಿಮ್ ರಾಜರಿಂದ ಈ ನಾಡಿಗೆ ಅನ್ಯಾಯವಾಗಿದೆ. ಮುಸ್ಲಿಮರು ದೇಶದ ಶತ್ರುಗಳು ಎಂಬ ಹೊಸ ಇತಿಹಾಸವನ್ನು ನಾಡಿನ ಎಲ್ಲಾ ಪ್ರಗತಿಪರರೆನಿಸಿಕೊಂಡವರು. ಇತಿಹಾಸ ತಜ್ಞರು ಕಣ್ಮುಚ್ಚಿ ಒಪ್ಪಿಕೊಂಡಂತಿದೆ.