ಹಾಫಿಝ್ ಸಈದ್ ಕುಟುಂಬಕ್ಕೆ ಮನೆ ಖರ್ಚು ನೀಡಲು ವಿಶ್ವಸಂಸ್ಥೆ ಅನುಮತಿ  ಕೇಳಿದ ಪಾಕ್!

0
1290

ನ್ಯೂಯಾರ್ಕ್,ಸೆ.26: ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ಹಾಫಿಝ್ ಸಈದ್ ಕುಟುಂಬಕ್ಕೆ ಮನೆ ಖರ್ಚು ಭರಿಸಲು ಬ್ಯಾಂಕ್ ಖಾತೆ ಉಪಯೋಗಿಸಲು ಅನುಮತಿ ಕೋರಿ ಪಾಕಿಸ್ತಾನ ವಿಶ್ವಸಂಸ್ಥೆಯ ರಕ್ಷಣಾ ಸಮಿತಿಯ ಮುಂದೆ ಮನವಿ ಮಾಡಿದೆ. ರಕ್ಷಣಾ ಸಮಿತಿಯ ನಿಷೇಧ ಇದುದ್ದರಿಂದ ಪಾಕಿಸ್ತಾನ ವಿನಾಯತಿ ಕೋರಿ ವಿಶ್ವಸಂಸ್ಥೆಯ ಮೊರೆ ಹೋಗಿದೆ.

ಆಹಾರ, ಕುಡಿಯುವ ನೀರು, ಬಟ್ಟೆ ಇತ್ಯಾದಿ ಅಗತ್ಯಕ್ಕಾಗಿ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಮನೆ ಖರ್ಚಿನ ಬಾಬ್ತು ನೀಡುವುದಕ್ಕೆ ಪಾಕಿಸ್ತಾನ ಅನುಮತಿ ಕೋರಿದೆ. ಕಳೆದ ಆಗಸ್ಟ್ ಹದಿನೈದರನ್ನು ಪಾಕಿಸ್ತಾನದ ಅಧಿಕಾರಿಗಳು ಸುರಕ್ಷಾ ಸಮಿತಿಗೆ ಪತ್ರ ಹಸ್ತಾಂತರಿಸಿದ್ದರು. ವಿರೋಧ ವ್ಯಕ್ತವಾಗದ್ದರಿಂದ ಪಾಕಿಸ್ತಾನದ ಅಪೇಕ್ಷೆಯಂತೆ ಹಣ ನೀಡಲು ರಕ್ಷಣಾ ಸಮಿತಿ ಅನುಮತಿ ನೀಡಿದೆ.

ಹಾಫಿಝ್ ಸಈದ್, ಹಾಜಿ ಮುಹಮ್ಮದ್ ಅಶ್ರಫ್, ಝಫರ್ ಇಕ್ಬಾಲ್‍ರ ಕುಟುಂಬಕ್ಕೂ ಮನೆ ಖರ್ಚು ನೀಡಲು ಪಾಕಿಸ್ತಾನ ಅನುಮತಿ ಕೇಳಿತ್ತು. ಭಯೋತ್ಪಾದಕರ ಪಟ್ಟಿಯಲ್ಲಿರುವ ಹಾಫಿಝ್ ಸಈದ್ ಬ್ಯಾಂಕ್ ಖಾತೆ ಮೂಲಕ ಹಣ ವ್ಯವಹಾರ ನಡೆಸುವುದಕ್ಕೆ ವಿಶ್ವಸಂಸ್ಥೆ ರಕ್ಷಣಾ ಸಮಿತಿ ನಿಷೇಧ ಹೇರಿತ್ತು.