ಅನರ್ಹರು ಮನೆ ಅಳಿಯಂದಿರು, ಅವರೇ ನಮ್ಮ ಅಭ್ಯರ್ಥಿಗಳು: ಈಶ್ವರಪ್ಪ

0
537

ಸನ್ಮಾರ್ಗ ವಾರ್ತೆ-

ಕಾರವಾರ: ಸೆ. 26- ಅನರ್ಹ ಶಾಸಕರ ಬಗ್ಗೆ ಭಾರೀ ಅಕ್ಕರೆಯ ಮಾತನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆಡಿದ್ದು, ಅನರ್ಹ ಶಾಸಕರು ನಮ್ಮ ಮನೆ ಅಳಿಯಂದಿರಿದ್ದಂತೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಅವಕಾಶ ನೀಡಿದರೆ ಅನರ್ಹರೇ ನಮ್ಮ ಅಭ್ಯರ್ಥಿಗಳು. ಇಲ್ಲವಾದರೆ ಅವರ ಜೊತೆ ಕೂತು ಚರ್ಚಿಸಿ ಅಭ್ಯರ್ಥಿಯನ್ನು ನಿರ್ಧಾರ ಮಾಡುತ್ತೇವೆ. ಮನೆ ಮಕ್ಕಳು ಕಡಿಮೆ ಇರುವುದರಿಂದ ಅಳಿಯಂದಿರು ಬಂದಿದ್ದಾರೆ ಎಂದು ಹೇಳುವ ಮೂಲಕ ಈಶ್ವರಪ್ಪ ಅವರು ಉಪಚುನಾವಣೆಯಲ್ಲಿ ಅನರ್ಹ ಶಾಸಕರ ನಿರ್ಣಯವೇ ಅಂತಿಮ ಎಂಬುದನ್ನು ಹೇಳಿದಂತಾಗಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯನವರ ಚೇಲಾರಂತೆ ವರ್ತಿಸಿದ್ದಾರೆ. ಶಾಸಕರನ್ನು ಅನರ್ಹ ಮಾಡಿದ್ದು ರಮೇಶ್ ಕುಮಾರ್ ಮಾಡಿದ ಅಕ್ಷಮ್ಯ ಅಪರಾಧ. ಸುಪ್ರೀಂ ಕೋರ್ಟ್‍ನಲ್ಲಿ ಅವರಿಗೆ ನ್ಯಾಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.