ಫೆಲೆಸ್ತೀನ್: ಮಾಧ್ಯಮಗಳ ಸುಳ್ಳಿಗೆ ಸತ್ಯದ ಮೂಲಕ ತಿರುಗೇಟು ನೀಡೋಣ: ಸೈಯದ್ ಸಾದತುಲ್ಲಾ ಹುಸೈನಿ

0
7967

ಸನ್ಮಾರ್ಗ ವಾರ್ತೆ

ಫೆಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಾವು ಮಾಡಬೇಕಾದ ಪ್ರಮುಖ ಕೆಲಸ ಎಂದು  ನಾನು ಭಾವಿಸುತ್ತೇನೆ. ಸರ್ಕಾರಗಳು ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ತಡೆಯಬಹುದು. ಅವರು ಇಂತಹ ಎಲ್ಲಾ ಘಟನೆಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನೈಜ ಮಾಹಿತಿಯನ್ನು (ಫೆಲೆಸ್ತೀನ್ ಸಮಸ್ಯೆಯ ಬಗ್ಗೆ) ತಲುಪಿಸಬಹುದು.

ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಧ್ಯಮಗಳು ಹರಡಲು ಪ್ರಯತ್ನಿಸುವ ಮೂಲಕ ಇಡೀ ದೇಶದಲ್ಲಿ ಫೆಲೆಸ್ತೀನ್ ಸಮಸ್ಯೆಯ ಬಗ್ಗೆ ವಿಶೇಷವಾದ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಈ ದೇಶದ ಜನರ ಮುಂದೆ ನೈಜ ಸಂಗತಿಗಳನ್ನು ತಿಳಿಸುವ ಜವಾಬ್ದಾರಿ  ಹೊತ್ತುಕೊಳ್ಳಬೇಕು.

“ಪ್ರಸ್ತುತ ಫೆಲೆಸ್ತೀನ್ ವಿಶ್ವದ ಅತ್ಯಂತ ತುಳಿತಕ್ಕೊಳಗಾದ ರಾಷ್ಟ್ರವಾಗಿದೆ ಮತ್ತು ಪ್ರಸಕ್ತ ಇಸ್ರೇಲ್ ನಮ್ಮ ಆಧುನಿಕ ಇತಿಹಾಸದಲ್ಲಿ ಅತ್ಯಂತ  ಕ್ರೂರ ಮತ್ತು ಅತ್ಯಂತ ಅನಾಗರಿಕ ದೇಶವಾಗಿದೆ. ಫೆಲೆಸ್ತೀನಿಯರ ಮೇಲೆ ಅದು ನಡೆಸುತ್ತಿರುವ ದೌರ್ಜನ್ಯಕ್ಕೆ ಸರಿಸಾಟಿ ಇಲ್ಲ. ಇಸ್ರೇಲ್ ಎಂಬುದು ನಾಗರಿಕ ಜಗತ್ತು ದ್ವೇಷಿಸುವ ಎಲ್ಲಾ ಅನಿಷ್ಟಗಳ ಒಟ್ಟು ಸಂಗ್ರಹವಾಗಿದೆ. ಆಧುನಿಕ ಜಗತ್ತು ಸ್ಥಾಪಿಸಲ್ಪಟ್ಟ ಮತ್ತು ಬೆಳೆದು ಬಂದ ಎಲ್ಲಾ ಮೂಲಭೂತ ತತ್ವಗಳು ಮತ್ತು ಮೌಲ್ಯಗಳು ಫೆಲೆಸ್ತೀನ್‌ನಲ್ಲಿ ಉಲ್ಲಂಘಿಸಲ್ಪಡುತ್ತಿವೆ. ಅದು ಪ್ರಜಾಪ್ರಭುತ್ವ, ಸ್ವಾತಂತ್ರ‍್ಯ, ಮಾನವ ಹಕ್ಕುಗಳು ಅಥವಾ ಜನಾಂಗೀಯ ಸಮಾನತೆಯೇ ಆಗಿರಲಿ, ಫೆಲೆಸ್ತೀನ್‌ನಲ್ಲಿ ಇಸ್ರೇಲ್‌ನ ಕೈಯಲ್ಲಿ ಈ ಎಲ್ಲಾ ಮೌಲ್ಯಗಳೂ  ತುಳಿಯಲ್ಪಡುತ್ತಿವೆ.

ಆದ್ದರಿಂದ ಫೆಲೆಸ್ತೀನ್ ಸಮಸ್ಯೆ ಕೇವಲ ಒಂದು ದೇಶ, ರಾಷ್ಟ್ರದ ಸಮಸ್ಯೆಯಲ್ಲ. ಅದು ಇಡೀ ಮಾನವೀಯತೆಯ ಸಮಸ್ಯೆಯಾಗಿದೆ. ನಮ್ಮ ಮೌಲ್ಯಗಳನ್ನು ಈ ರೀತಿ ತುಳಿಯಲು ಬಿಟ್ಟರೆ, ಕಳೆದ ಇನ್ನೂರು ವರ್ಷಗಳಲ್ಲಿ ನಾವು ಸಾಧಿಸಿದ್ದನ್ನು ನಾವು ಗಾಝಾದ ಜೊತೆಗೆ ಹೂತು ನಾಶಪಡಿಸಿದಂತೆಯೇ ಸರಿ.

“6 ಮಿಲಿಯನ್ ಜನರು ಫೆಲೆಸ್ತೀನ್‌ನಲ್ಲಿ ವಾಸಿಸುತ್ತಿದ್ದರೆ, ಬಹುತೇಕ ಅಷ್ಟೇ ಸಂಖ್ಯೆಯ ಜನರು ವಿಶ್ವದ ವಿವಿಧ ಭಾಗಗಳಲ್ಲಿ ನಿರಾಶ್ರಿತರಾಗಿ  ದುಃಖದ ಜೀವನವನ್ನು ನಡೆಸುತ್ತಿದ್ದಾರೆ. ಕಳೆದ 75 ವರ್ಷಗಳಿಂದ ಯಾವುದೇ ಯುದ್ಧವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರನ್ನು ಹುಟ್ಟುಹಾಕಿಲ್ಲ ಮತ್ತು ಫೆಲೆಸ್ತೀನ್‌ನ ಒಳಗೆ ಆರು-ಏಳು ಮಿಲಿಯನ್ ಫೆಲೆಸ್ತೀನಿಯರೂ, ತೆರೆದ ಜೈಲುಗಳಂತಿರುವ ಸಣ್ಣ ಘೆಟ್ಟೋಗಳಲ್ಲಿ  ವಾಸಿಸುತ್ತಿದ್ದಾರೆ ಮತ್ತು ಈ ಜೈಲುಗಳಲ್ಲಿಯೂ ಅವರು ಸುರಕ್ಷಿತವಾಗಿಲ್ಲ.

ಪ್ರತಿ ವರ್ಷ ಫೆಲೆಸ್ತೀನಿಯರ ಮನೆಗಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತದೆ, ಮಕ್ಕಳು ಸಾಯುತ್ತಾರೆ, ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತದೆ. ಪ್ರತಿ ವರ್ಷ ಸಾವಿರಾರು ಮಹಿಳೆಯರು ಮತ್ತು ಮಕ್ಕಳನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗುತ್ತಿದೆ. ಇದು ವರ್ಷಗಳಿಂದ ನಿರಂತರವಾಗಿ ನಾಗರಿಕ ಜಗತ್ತಿನ ಕಣ್ಣ ಮುಂದೆ ನಡೆಯುತ್ತಿದ್ದು, ಇದಕ್ಕೆ ಮೂಕಪ್ರೇಕ್ಷಕ ಮತ್ತು ಮೌನವಾಗಿರುವುದು ನಮ್ಮ ಇಡೀ ನಾಗರಿಕತೆಯ ಮರಣದ ಕರೆ  ಗಂಟೆಯಂತಿದೆ.

ಫೆಲೆಸ್ತೀನ್ ಅನ್ನು ಬೆಂಬಲಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿ. ವಿಷಯವು ಕೇವಲ ಮಾನವ ಹಕ್ಕುಗಳ ವಿಷಯವಲ್ಲ, ನಮ್ಮ ರಾಷ್ಟ್ರೀಯ  ಹಿತಾಸಕ್ತಿಯೂ ಆಗಿದೆ. ನಮ್ಮ ರಾಷ್ಟ ಸ್ಥಾಪಿಸಲ್ಪಟ್ಟಿರುವ ಮತ್ತು ನಮ್ಮ ಸ್ವಾತಂತ್ರ‍್ಯ ಹೋರಾಟದ ಮೌಲ್ಯಗಳು ಸಮಾನವಾಗಿದ್ದು ಫೆಲೆಸ್ತೀನಿಯನ್ ಕಾರಣವನ್ನು ಬೆಂಬಲಿಸಬೇಕಾದುದು ಆ ಮೌಲ್ಯಗಳ ಬೇಡಿಕೆಯಾಗಿದೆ. ನಾವು ತುಳಿತಕ್ಕೊಳಗಾದ ಫೆಲಸ್ತೀನಿಯರನ್ನು ಬೆಂಬಲಿಸದಿದ್ದರೆ ನಾವು ನಮ್ಮ ದೇಶದ ವಿರುದ್ಧ, ನಮ್ಮ ಮೌಲ್ಯಗಳ ವಿರುದ್ಧ, ನಮ್ಮ ಇತಿಹಾಸದ ವಿರುದ್ಧ, ನಮ್ಮ ರಾಷ್ಟ್ರದ ಶ್ಲಾಘನೀಯ ಪರಂಪರೆಯ ವಿರುದ್ಧ ನಾವು ಬಂಡಾಯವೆದ್ದಂತೆಯೇ ಸರಿ. ಇವೆಲ್ಲವುಗಳ ಬಗ್ಗೆ ದೇಶದ ಜನರಿಗೆ ಬಹಳ ಮನವರಿಕೆಯಾಗುವ ರೀತಿಯಲ್ಲಿ ಬಲವಾಗಿ ತಿಳಿಸಬೇಕು.

“ಅಭಿವೃದ್ಧಿ ಹೊಂದಿದ ಜಗತ್ತು ನಮ್ಮ ದೇಶವನ್ನು ತನ್ನ ನಾಯಕನನ್ನಾಗಿ ಮಾಡುವುದಿಲ್ಲ, ಅಮೇರಿಕಾ ನಮ್ಮನ್ನು ತನ್ನ ನಾಯಕನನ್ನಾಗಿ ಮಾಡುವುದಿಲ್ಲ, ಹಲವು ವರ್ಷಗಳಿಂದ ಈ ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪಾಗಿರುವ ದಕ್ಷಿಣದ ಜಗತ್ತನ್ನು ನಾವು ಮುನ್ನಡೆಸಿದ್ದೇವೆ.  ಫೆಲೆಸ್ತೀನ್ ಸಮಸ್ಯೆಯು ನೀಡಿದ ಈ ಒಂದು ಸುವರ್ಣ ಅವಕಾಶವನ್ನು ಬಳಸಿ ನಮ್ಮ ದೇಶವು ದಕ್ಷಿಣ ಜಗತ್ತನ್ನು ಮುನ್ನಡೆಸಬಹುದಿತ್ತು ಮತ್ತು ಸಾಮ್ರಾಜ್ಯಶಾಹಿ ಮತ್ತು ದಬ್ಬಾಳಿಕೆಯ ವಿರುದ್ಧ ಅತ್ಯಂತ ಶಕ್ತಿಶಾಲಿ ಧ್ವನಿಯಾಗಬಹುದಿತ್ತು. ಅದನ್ನು ಇಂದಿಗೂ ಮಾಡಬಹುದು. ಈ  ಅವಕಾಶವನ್ನು ಕಳೆದುಕೊಳ್ಳುತ್ತಿರುವವರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೆಲ್ಲ ದೇಶದ ಜನತೆಗೆ ಮನವರಿಕೆಯಾಗುವ ರೀತಿ ಯಲ್ಲಿ ತಿಳಿಸಬೇಕು. ಆಗ ನಮ್ಮ ದೇಶದಲ್ಲಿ ಫೆಲೆಸ್ತೀನ್ ಸಮಸ್ಯೆ ಬಗ್ಗೆ ಜಾಗೃತಿ ಮೂಡುತ್ತದೆ. ಫೆಲಸ್ತೀನ್ ವಿಷಯದಲ್ಲಿ ನಾವು ಸದಾ ಚಾರಿತ್ರಿಕ ಪಾತ್ರ ವಹಿಸಿದ್ದೇವೆ. ನಾವು ಮತ್ತೊಮ್ಮೆ  ಈ ಪಾತ್ರವನ್ನು ವಹಿಸಲು ಮುಂದಾದರೆ, ಈ ದೇಶದಲ್ಲಿ  ಫೆಲೆಸ್ತೀನ್ ಸಹೋದರರಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಸೇವೆಯಾಗಲಿದೆ.