ಹೊಂಡುರಾಸ್ ರಾಷ್ಟ್ರದ ಅಧ್ಯಕ್ಷರಾಗಿ ಫೆಲಸ್ತೀನಿ ಮೂಲದ ಅಸ್ಫುರಾ ಆಯ್ಕೆ

0
426

ಸನ್ಮಾರ್ಗ ವಾರ್ತೆ

ಫೆಲೆಸ್ತೀನಿ ವಂಶಜರಾಗಿರುವ ನಸ್ರಿ ಅಸ್ಪುರಾ ಅವರು ಹೋಂಡುರಾಸ್ ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನ್ಯಾಷನಲ್ ಪಾರ್ಟಿಯ ಮುಖಂಡರಾಗಿರುವ ಇವರು ಈ ಹಿಂದೆ ಮೇಯರ್ ಆಗಿಯೂ ಹೊಣೆಗಾರಿಕೆ ನಿಭಾಯಿಸಿದ್ದರು 40.27% ಮತವನ್ನು ಪಡೆದು ಇವರು ಆಯ್ಕೆಯಾಗಿದ್ದಾರೆ.

ತನ್ನ ಎದುರಾಳಿಗಿಂತ 28,000ಕ್ಕೂ ಹೆಚ್ಚು ಮತಗಳನ್ನು ಇವರು ಪಡೆದು ಆಯ್ಕೆಯಾಗಿದ್ದಾರೆ. ನವೆಂಬರ್ 24ರಂದು ಚುನಾವಣೆ ನಡೆದಿತ್ತು. 24 ದಿನಗಳ ಬಳಿಕ ಇದೀಗ ಫಲಿತಾಂಶ ಬಿಡುಗಡೆಗೊಂಡಿದೆ. ಮತ ಎಣಿಕೆಯ ಬಗ್ಗೆ ಉಂಟಾದ ವಿವಾದದಿಂದಾಗಿ ಫಲಿತಾಂಶ ಪ್ರಕಟ ವಿಳಂಬವಾಗಿದೆ.

ಹೋಂಡು ರಾಸ್ ಅಧ್ಯಕ್ಷನಾಗಿ ಹೊಣೆಗಾರಿಕೆ ನಿಭಾಯಿಸಲು ನಾನು ಸಿದ್ಧನಿದ್ದೇನೆ. ನಾನು ನಿಮ್ಮನ್ನು ನಿರಾಶೆ ಪಡಿಸಲಾರೆ. ದೇವನು ನಮ್ಮ ದೇಶವನ್ನು ಅನುಗ್ರಹಿಸಲಿ ಎಂದವರು ಹೇಳಿದ್ದಾರೆ.

ಈ ಚುನಾವಣೆಗಿಂತ ಮೊದಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಸ್ಪುರಾ ಅವರನ್ನು ಬೆಂಬಲಿಸಿ ಬಹಿರಂಗವಾಗಿ ಮಾತಾಡಿದ್ದರು.

ಅಸ್ಪುರಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಲ್ಯಾಟಿನ್ ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಫೆಲಸ್ತೀನಿ ವಂಶಜರ ಪೈಕಿ ಎರಡನೆಯವರಾಗಿ ಇವರು ಗುರುತಿಸಿಕೊಂಡಿದ್ದಾರೆ. ಈ ಮೊದಲು 2019ರಲ್ಲಿ ಎಲ್ ಸಾಲ್ವೆ ಡೋರ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆಯಾ ನಾಯಿಬ್ ಬುಕಾಲೇ ಅವರು ಫೆಲೆಸ್ತೀನ್ ವಂಶಜರಾಗಿದ್ದಾರೆ.