ಪ್ಲಾಸ್ಟಿಕ್ ಮಾಲಿನ್ಯ ಕಡಿಮೆ ಮಾಡಲು ಕೋಲು ಮಿಠಾಯಿಗಳ ಮೇಲೆ ಕೇಂದ್ರ ಸರಕಾರದಿಂದ ಕ್ರಮ

0
594

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.24: ಕೇಂದ್ರ ಸರಕಾರ 2022 ಜನವರಿ ಒಂದರಿಂದ ಜಾರಿಗೆ ತರಲಿರುವ ಹೊಸ ಕಾನೂನು ಕೋಲು ಮಿಠಾಯಿಗಳನ್ನು ನಿರ್ಬಂಧಿಸುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಪ್ಲಾಸ್ಟಿಕ್ ಮಾಲಿನ್ಯ ಕಡಿಮೆ ಮಾಡುವ ಪ್ರಯುಕ್ತ ಮಿಠಾಯಿ, ಐಸ್‍ಕ್ರೀಮ್, ಬಲೂನ್‍ಗಳ ಪ್ಲಾಸ್ಟಿಕ್ ಸ್ಟಿಕ್‌ಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಹೊರಟಿದೆ.

ಮರದ ಮತ್ತು ಇತರ ಬದಲಿ ಕೋಲುಗಳನ್ನು ಕೋಲು ಮಿಠಾಯಿಯಲ್ಲಿ ಉಪಯೋಗಿಸದಿದ್ದರೆ ತಯಾರಕರು ಕ್ರಮ ಎದುರಿಸಬೇಕಾಗುತ್ತದೆ.

ಶುಕ್ರವಾರ ಪಾರ್ಲಿಮೆಂಟ್‌ನಲ್ಲಿ 2022 ಜನವರಿಯಿಂದ ನಿಷೇಧಿಸುವ ತೀರ್ಮಾನವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸುವ ಕುರಿತು ಕೇಳಿದ ಪ್ರಶ್ನೆಗೆ ಪರಿಸರ ಸಹ ಸಚಿವ ಅಶ್ವಿನ್ ಚೌಬೆ ಕೋಲು ಮಿಠಾಯಿಯ ಪ್ಲಾಸ್ಟಿಕ್ ಕೋಲುಗಳ ಬಳಕೆಯನ್ನು ತಡೆಯುವ ಬಗ್ಗೆಯೂ ಉತ್ತರಿಸಿದ್ದಾರೆ. ಬಲೂನ್‍ಗಳ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜ, ಮಿಠಾಯಿ, ಐಸ್‌‌ಕ್ರೀಮ್ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ತೋರಣಗಳು, ಇತ್ಯಾದಿ ಜನವರಿ ಒಂದರಿಂದ ನಿಷೇಧಕ್ಕೊಳಗಾಗುತ್ತಿದೆ. 120 ಮೈಕ್ರೋನ್‍ನಿಂದ ಕೆಳಗಿನ ಕ್ಯಾರಿ ಬ್ಯಾಗ್‍ಗಳು, 60 ಜಿಎಸ್‍ಎಂ, 240 ಮೈಕ್ರೋನ್‍ನ ಕೆಳಗಿನ ಬ್ಯಾಗ್‍ಗಳು ಈ ವರ್ಷ ಸೆಪ್ಟಂಬರ್ 30 ರಿಂದ ನಿಷೇಧಕ್ಕೊಳಗಾಗಲಿದೆ ಎಂದು ಸಚಿವರು ತಿಳಿಸಿದರು.

2016ರ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನ ಕಾನೂನಿನಲ್ಲಿ ಇದಕ್ಕೆ ಅಗತ್ಯವಾದ ತಿದ್ದುಪಡಿ¸ ತರುವ ಕರಡು ಪಟ್ಟಿ ಮಾರ್ಚ್ 11ಕ್ಕೆ ಕೇಂದ್ರದ ಪರಿಸರ, ಹವಾಮಾನ ಸಚಿವಾಲಯ ಪ್ರಕಟಿಸಿತ್ತು. 2022 ಜುಲೈ ಒಂದರಿಂದ ಮುಂದಿನ ಹಂತ ಜಾರಿಗೆ ಬರುತ್ತಿದೆ. ಒಂದೇ ಬಾರಿಗೆ ಉಪಯೋಗಿಸುವ ಪ್ಲಾಸ್ಟಿಕ್ ಪ್ಲೇಟ್, ಚಮಚ, ಕಪ್‍ಗಳು, ಟ್ರೇ, ಗಿಪ್ಟ್ ಸಂಚಿಗಳು ಇತ್ಯಾದಿ ಸುರಳಿ ಕಾಗದ, ಥರ್ಮಕಾಲ್ ಬ್ಯಾನರ್‌ಗಳನ್ನು ಈ ಹಂತದಲ್ಲಿ ನಿಷೇಧಿಸಲಾಗುವುದು. ಬಳಸಿ ಎಸೆದ ಪ್ಲಾಸ್ಟಿಕ್‍ಗಳು ಸಮುದ್ರ ಜಲಾಶಯಗಳಲ್ಲಿ ಮಣ್ಣಿಗೆ ಸೇರಿ ದೊಡ್ಡ ಪರಿಸರ ಸಮಸ್ಯೆ ಸೃಷ್ಟಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಹೊಸ ನಿರ್ದೇಶಗಳನ್ನು ಕೇಂದ್ರ ಸರಕಾರ ನೀಡಿದೆ. ಇದಕ್ಕೆ ಸಂಬಂಧಿಸಿದ ಕ್ಷೇತ್ರದ ಮತ್ತು ಉತ್ಪಾದಕರ ಅಭಿಪ್ರಾಯ ಪಡೆದುಕೊಂಡು ಆ ನಂತರ ಕರಡು ಪಟ್ಟಿಗೆ ಅಂತಿಮ ರೂಪ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.