ಸನ್ಮಾರ್ಗ ವಾರ್ತೆ
ಬೆಂಗಳೂರು,ಸೆ.10: ಕೊರೋನ ಸೋಂಕಿನಿಂದ ಜನಸಾಮಾನ್ಯರು ಯಾತನೆ ಪಡುತ್ತಿರುವಾಗ ವಿವಾದಗಳ ಹಿಂದೆ ಹೋಗುತ್ತಿರುವ ಕೇಂದ್ರ ಸರಕಾರವನ್ನು ನಟ ಪ್ರಕಾಶ್ ರಾಜ್ ಕಟುವಾಗಿ ಟೀಕಿಸಿದ್ದಾರೆ.
ಕೊರೋನ ಕಾಲದಲ್ಲಿ ನಡೆದ ಪಲಾಯನಗಳು ಮತ್ತು ಬಾಲಿವುಡ್ ತಾರೆ ಕಂಗನಾ ರಾಣಾವತ್ರ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ಹಲವು ಸುರಕ್ಷಾ ಅಧಿಕಾರಿಗಳನ್ನು ಜೊತೆಯಲ್ಲಿಟ್ಟು ನಡೆಯುವ, ಮಾರ್ಗದಲ್ಲಿ ಕುಟುಂಬದೊಂದಿಗೆ ಪಲಾಯನ ಮಾಡುತ್ತಿರುವ ಜನಸಾಮಾನ್ಯರ ಚಿತ್ರವನ್ನು ಅವರು ಪೋಸ್ಟ್ ಮಾಡಿ’ಇದು ಹೊಸ ಭಾರತ’ ಎಂದು ಟೀಕಿಸಿದ್ದಾರೆ.
ಬಿಜೆಪಿಯನ್ನು ಬೆಂಬಲಿಸುವ ನಟಿ ಕಂಗನಾರಿಗೆ ಕೇಂದ್ರ ಸರಕಾರ ವೈಪ್ಲಸ್ ಸುರಕ್ಷೆ ಒದಗಿತ್ತು. ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರಕಾರದೊಂದಿಗೆ ಬಹಿರಂಗ ಘರ್ಷಣೆಯನ್ನು ಘೋಷಿಸಿದ ಕಂಗನಾರನ್ನು ಬಿಜೆಪಿ ಬೆಂಬಲಿಸುತ್ತಿದೆ. ಸಂಘ ಪರಿವಾರ ವಿರೋಧಿ ರಾಜಕೀಯದ ವಕ್ತಾರರಾದ ಪ್ರಕಾಶ್ ರಾಜ್ ಈ ಹಿಂದೆ ಕೂಡ ಹಲವು ಬಾರಿ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಪ್ರಕಾಶ್ ರಾಜ್ಗೆ ದೇಶ ಪ್ರೇಮವಿಲ್ಲ ಮುಂಬರುವ ಬಿಗ್ ಬಜೆಟ್ ಸಿನೆಮಾ ಕೆಜಿಎಫ್-2ರಿಂದ ಅವರನ್ನು ಹೊರಗಿಡಬೇಕೆಂದು ಆಗ್ರಹಿಸಿ ಸಂಘ ಪರಿವಾರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ನಡೆಸಿದ್ದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












