ಲಕ್ನೊ, ಜೂ.13: ಕಾಂಗ್ರೆಸ್ ಕಾರ್ಯಕರ್ತರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಾರ್ಟಿಗಾಗಿ ಕೆಲಸ ಮಾಡದ ಕಾರ್ಯಕರ್ತರನ್ನು ಪತ್ತೆಹಚ್ಚಬೇಕೆಂದು ಸೂಚಿಸಿದ್ದು ಸೋನಿಯಾ ಗಾಂಧಿಯವರ ಸ್ವಕ್ಷೇತ್ರವಾದ ರಾಯ್‍ಬರೇಲಿಯಲ್ಲಿ ಚುನಾವಣಾ ವಿಜಯಕ್ಕೆ ಕೃತಜ್ಞತೆ ಸಲ್ಲಿಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತಾಡುತ್ತಿದ್ದರು. ಸೋನಿಯಾ ಗಾಂಧಿ ಪ್ರಿಯಾಂಕಾ ಗಾಂಧಿಯವರ ಜೊತೆಗಿದ್ದರು.
ರಾಯ್‍ಬರೇಲಿಯದ್ದು ಸೋನಿಯಾ ಗಾಂಧಿಯವರ ಗೆಲುವು ಆಗಿದೆ. ರಾಯ್‍ಬರೇಲಿಯ ಜನರ ಬೆಂಬಲದಿಂದ ಅವರು ಗೆದ್ದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಹಾಯದಿಂದಲ್ಲ ಎನ್ನುವ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಪೂರ್ವ ಉತ್ತರಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಹಿಸಿಕೊಂಡಿದ್ದರು. ರಾಯ್‍ಬರೇಲಿಯಲ್ಲಿ ಮಾತ್ರ ಕಾಂಗ್ರೆಸ್‍ಗೆ ಗೆಲ್ಲಲು ಸಾಧ್ಯವಾಗಿತ್ತು. ಹತ್ತಿರದ ಅಮೇಠಿಯಲ್ಲಿ ಪ್ರಿಯಾಂಕಾರ ಸಹೋದರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಲುಂಡಿದ್ದಾರೆ.












