ನ್ಯೂಝಿಲೆಂಡ್ ಮಸೀದಿಯಲ್ಲಿ ಭಯೋತ್ಪಾದನಾ ದಾಳಿ; ಆರೋಪಿಯಿಂದ ಆರೋಪ ನಿರಾಕರಣೆ

0
886

ವೆಲ್ಲಿಂಗ್ಟನ್, ಜೂ. 14: ನ್ಯೂಝಿಲೆಂಡಿನ ಕ್ರೈಸ್ಟ್ ಚರ್ಚ್ ಮಸೀದಿಗಳಲ್ಲಿ ಭಯೋತ್ಪಾದನಾ ದಾಳಿ ನಡೆಸಿರುವ ಆರೋಪಿ ಕೋರ್ಟಿನಲ್ಲಿ ಆರೋಪ ನಿರಾಕರಿಸಿದ್ದಾನೆ. ಕ್ರೈಸ್ಟ್ ಚರ್ಚ್ ಹೈಕೋರ್ಟಿನಲ್ಲಿ ಹಾಜರುಪಡಿಸಿದಾಗ ಆರೋಪಿ ಬ್ರಂಡನ್ ಹಾರಿಸನ್ ಟಾಂಟ್ ಭಯೋತ್ಪಾದನಾ ಆರೋಪ ಮತ್ತು ಕೊಲೆ ಕೃತ್ಯ ಆರೋಪವನ್ನು ನಿರಾಕರಿಸಿದನು.

ಪ್ರಕರಣದ ಮುಂದಿನ ವಿಚಾರಣೆ ಮುಂದಿನ ವರ್ಷ ಮೇ ನಾಲ್ಕರಂದು ಆರಂಭವಾಗಲಿದೆ. ವಿಚಾರಣೆಯ ವೇಳೆ ತನ್ನ ವಂಶೀಯ ನಿಲುವುಗಳನ್ನು ಮುಂದಿರಿಸಿ ವಾದಿಸುವುದು ಆರೋಪಿಯ ಯತ್ನವಾಗಿದೆ. ನ್ಯೂಝಿಲೆಂಡಿನಲ್ಲಿ ಇದೇ ಮೊದಲ ಬಾರಿ ಒಂದು ಪ್ರಕರಣದಲ್ಲಿ ಭಯೋತ್ಪಾದನಾ ಆರೋಪ ಹೊರಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಕೂಡಲೇ ಮಾನಸಿಕ ಸ್ಥಿತಿ ಪರಿಶೀಲನೆಗೆ ಕೋರ್ಟು ಆದೇಶ ಹೊರಡಿಸಿತ್ತು. ಆರೋಪಿಗೆ ಮರಣದಂಡನೆ ನೀಡಬೇಕೆಂದು ದಾಳಿಯಲ್ಲಿ ಬಲಿಯಾದವರ ಕುಟುಂಬ ವಾದಿಸಿದೆ. ಈತನ ವಿರುದ್ಧ 89 ಆರೋಪಗಳನ್ನು ಹೊರಿಸಲಾಗಿದೆ. ನ್ಯೂಝಿಲೆಂಡಿನಲ್ಲಿ ನಡೆದ ಅತೀದೊಡ್ಡ ಭಯೋತ್ಪಾದನಾ ದಾಳಿ ಈತನಿಂದಾಗಿದೆ. ಮಾರ್ಚ್ ಹದಿನೈದರಂದು ನ್ಯೂಝಿಲೆಂಡ್‍ನ ಎರಡು ಮಸೀದಿಗಳಲ್ಲಿ ಈತ ಗುಂಡು ಹಾರಿಸಿ 50 ಮಂದಿ ನಮಾಝ್ ನಿರತ ಮುಸ್ಲಿಮರನ್ನು ಹತ್ಯೆಮಾಡಿದ್ದನು.