ಮದುವೆಯಾಗದೆ ಸಹಜೀವನ ನಡೆಸುವ ದಂಪತಿಯ ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕಿದೆ: ಸುಪ್ರೀಂ ಕೋರ್ಟ್

0
228

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಿವಾಹವಾಗದೇ ಸಹಜೀವನ ನಡೆಸುವ ದಂಪತಿಗಳನ್ನು ಕಾನೂನಾತ್ಮಕವಾಗಿ ವಿವಾಹವಾಗಿದ್ದಾರೆಂದೇ ಪರಿಗಣಿಸಲಾಗುವುದು. ಹಾಗೂ ಇಂತಹ ಸಂಬಂಧದಲ್ಲಿ ಹುಟ್ಟುವ ಮಕ್ಕಳಿಗೆ ವಾರೀಸು ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣವೊಂದರಲ್ಲಿ 2009ರ ಕೇರಳ ಹೈಕೋರ್ಟಿನ ತೀರ್ಪನ್ನು ತಿರಸ್ಕರಿಸಿ ಜಸ್ಟಿಸ್ ಎಸ್. ಅಬ್ದುಲ್ ನಝೀರ್ ಹಾಗೂ ವಿಕ್ರಂ ನಾಥ್‍ರ ಪೀಠ ತೀರ್ಪು ನೀಡಿದೆ.

ಈ ಹಿಂದೆ ಸಹಜೀವನ ಸಂಬಂಧದಲ್ಲಿ ಜನಿಸಿದ ಮಗುವಿಗೆ ಆಸ್ತಿ ಹಕ್ಕು ಇದೆ ಎಂದು ವಿಚಾರಣೆ ಕೋರ್ಟು ತೀರ್ಪು ನೀಡಿತ್ತು. ಆದರೆ, ಒಗ್ಗೂಡಿ ಜೀವಿಸಿದರೂ ಮದುವೆಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಆದುದರಿಂದ ಅವರ ಮಕ್ಕಳಿಗೆ ಪರಂಪರಾಗತ ಆಸ್ತಿಯಲ್ಲಿ ಹಕ್ಕಿಲ್ಲ ಎಂದು ಹೈಕೋರ್ಟು ತೀರ್ಪು ನೀಡಿತ್ತು.