ಕೃಷಿ ಕಾನೂನು ವಿರುದ್ಧ ನ. 8ಕ್ಕೆ ವಿಶೇಷ ವಿಧಾನಸಭಾ ಅಧಿವೇಶನ ಕರೆದ ಪಂಜಾಬ್ ಸರಕಾರ

0
320

ಸನ್ಮಾರ್ಗ ವಾರ್ತೆ

ಚಂಡೀಗಡ: ವಿವಾದಾತ್ಮಕ ಕೃಷಿ ಕಾನೂನು ರದ್ದುಗೊಳಿಸುವ ಕುರಿತು ನವೆಂಬರ್ 8ಕ್ಕೆ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಪಂಜಾಬ್ ಸರಕಾರ ಕರೆದಿದೆ. ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ನವೆಂಬರ್ ಎಂಟಕ್ಕೆ ಮೊದಲು ಕೃಷಿ ಕಾನೂನುಗಳನ್ನು ರದ್ದುಪಡಿಸದಿದ್ದರೆ ರಾಜ್ಯದಲ್ಲಿ ಈ ಕಾನೂನು ಜಾರಿಗೆ ತರುವುದನ್ನು ತಡೆಯಲು ಅಧಿವೇಶನದಲ್ಲಿ ಪ್ರಸ್ತಾವ ಪಾಸು ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದ ಗಡಿಯಲ್ಲಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದ್ದಕ್ಕೆ ಸಂಬಂಧಿಸಿ ಕೇಂದ್ರ ಹೊರಡಿಸಿದ ಪ್ರಕಟಣೆಯನ್ನು ಹಿಂಪಡೆಯಬೇಕೆಂದು ವಿಶೇಷ ಅಧಿವೇಶನದಲ್ಲಿ ಬೇಡಿಕೆ ವ್ಯಕ್ತಪಡಿಸಲಾಗುವುದು. ಅಂತಾರಾಷ್ಟ್ರೀಯ ಗಡಿಯ 15 ಕಿಲೊಮೀಟರ್ ವ್ಯಾಪ್ತಿಯಿಂದ ಅಧಿಕಾರವನ್ನು 50 ಕಿಲೊಮೀಟರ್ ಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಪ್ರಕಟಣೆ ನೀಡಿದೆ.