ಜನರಿಗೆ ಸಂಬಂಧವಿಲ್ಲದ ಲೋಕದಲ್ಲಿ ಮೋದಿ, ಅಮಿತ್ ಶಾ ಬದುಕುತ್ತಿದ್ದಾರೆ; ರಾಹುಲ್ ಗಾಂಧಿ

0
1638

ಸನ್ಮಾರ್ಗ ವಾರ್ತೆ-

ಕಲ್ಲಿಕೋಟೆ, ಡಿ. 5: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುವುದಾಗಿ ಕಾಂಗ್ರೆಸ್ ನಾಯಕ ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದರು. ಎಲ್ಲ ರೀತಿಯ ತಾರತಮ್ಯಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ಮೋದಿ ಸರಕಾರ ಜನರನ್ನು ಭೀತಿಗೊಳಪಡಿಸುತ್ತಿದೆ ಎಂದು ರಾಹುಲ್ ಹೇಳಿದರು. ರಾಹುಲ್ ಕೇರಳಕ್ಕೆ ಮೂರು ದಿನಗಳ ಸಂದರ್ಶನಕ್ಕೆ ಬಂದಿದ್ದು ಮಾಧ್ಯಮಗಳೊಂದಿಗೆ ಅವರು ಮಾತಾಡುತ್ತಿದ್ದರು.

ಭಾರತ ಎಲ್ಲ ವಿಭಾಗಗಳಿಗೂ ಎಲ್ಲ ಸಂಸ್ಕಾರಗಳಿಗೂ ಎಲ್ಲ ಧರ್ಮಗಳಿಗೂ ಇರುವುದಾಗಿದೆ. ಜನರಿಗೆ ಸಂಬಂಧವಿಲ್ಲದ ಲೋಕದಲ್ಲಿ ಮೋದಿ, ಅಮಿತ್ ಶಾ ಬದುಕುತ್ತಿದ್ದಾರೆ. ಅದು ದೇಶದ ಸಮಸ್ಯೆಗೆ ಕಾರಣವಾಗಿದೆ. ಜನರನ್ನು ಗಮನಿಸಿದ್ದರೆ ಸಮಸ್ಯೆಗಳು ಇರುತ್ತಿರಲಿಲ್ಲ ಎಂದು ರಾಹುಲ್ ಹೇಳಿದರು.