ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.4: ಕೇಂದ್ರ ಸರಕಾರದ ಸಂಪೂರ್ಣ ಲಾಕ್ಡೌನ್ನಿಂದ ಕೊರೋನ ತಡೆಯುವುದು ಸಾಧ್ಯವಾಗಿಲ್ಲ. ಬದಲಾಗಿ ದೇಶದ ಅರ್ಥವ್ಯವಸ್ಥೆಯನ್ನು ನಾಶಕ್ಕೆ ದೂಡಿತು ಎಂದು ಪ್ರಮುಖ ಉದ್ಯಮಿ ರಾಜೀವ್ ಬಜಾಜ್ ಆರೋಪಿಸಿದ್ದಾರೆ.
ಇಂತಹದ್ದೊಂದು ಲಾಕ್ಡೌನ್ ಜಗತ್ತಿನಲ್ಲೆಲ್ಲೂ ನಡೆದಿಲ್ಲ. ಇಂತಹದ್ದನ್ನು ನೋಡಿಲ್ಲ ಎಂದು ಬಜಾಜ್ ಬೆಟ್ಟು ಮಾಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ರಾಜೀವ ಬಜಾಜ್ ಈ ಮಾತು ಹೇಳಿದರು. ಕೊರೋನ ವೈರಸ್ ಜೊತೆ ಬದುಕುವುದೇ ಕೇಂದ್ರ ಸರಕಾರದ ಹೊಸ ನೀತಿ ಎಂದು ಅವರು ಬೆಟ್ಟು ಮಾಡಿದರು.
ಲಾಕ್ಡೌನ್ನಲ್ಲಿ ಅಧಿಕಾರ ಕೇಂದ್ರೀಕರಣ ಮಾಡಲಾಗಿದೆ ಎಂದು ಬಜಾಜ್ ಆಟೋ ಎಂ.ಡಿ ಆಗಿರುವ ರಾಜೀವ್ ಬಜಾಜ್ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












