ಅಯೋಧ್ಯೆಯ ರಾಮಮಂದಿರಕ್ಕೆ ರಾಹುಲ್ ಗಾಂಧಿಗೆ ಪ್ರವೇಶ ನೀಡಬಾರದು: ಸ್ವಾಮೀಜಿಗಳು

0
858

ಸನ್ಮಾರ್ಗ ವಾರ್ತೆ

ಅಯೋಧ್ಯೆಯ ರಾಮಮಂದಿರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ಪ್ರವೇಶ ನೀಡಬಾರದು ಎಂದು ಸ್ವಾಮೀಜಿಗಳ ಒಂದು ಗುಂಪು ಆಗ್ರಹಿಸಿದೆ. ರಾಮ ಮಂದಿರದ ಪ್ರತಿಷ್ಠಾ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮ ಎಂದು ರಾಹುಲ್ ಗಾಂಧಿ ಹೇಳಿರುವುದರಿಂದ ಅವರನ್ನು ರಾಮ ಮಂದಿರ ಒಳಗೆ ಬರಲು ಬಿಡಬಾರದು ಎಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ.

ಜ್ಯೋತಿರ್ ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ರಾಹುಲ್ ಗಾಂಧಿಯ ವಿರುದ್ಧ ನಿಂತಿದ್ದಾರೆ.ರಾಹುಲ್ ಗಾಂಧಿ ಹಿಂದೂ ಅಲ್ಲ ಮತ್ತು ಅವರಿಗೆ ಮಂದಿರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಹಿಂದುಗಳಿಗೆ ದ್ರೋಹ ವೆಸಗಿದ ವ್ಯಕ್ತಿ ರಾಮಮಂದಿರಕ್ಕೆ ಪ್ರವೇಶಿಸಲು ಅಯೋಗ್ಯ ರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಮನುಷ್ಮೃತಿಯ ವಿರುದ್ಧ ಮಾತಾಡಿರುವುದಕ್ಕಾಗಿ ಅವರನ್ನು ಹಿಂದೂ ಧರ್ಮದಿಂದ ಹೊರಹಾಕಲಾಗಿದೆ ಎಂದು ಅವಿಮುಕ್ತೇಶ್ವರಾನಂದ ಕಳೆದ ವರ್ಷ ಘೋಷಿಸಿದ್ದರು.

ಇದೇ ವೇಳೆ ರಾಹುಲ್ ಗಾಂಧಿಯವರು ರಾಮಮಂದಿರಕ್ಕೆ ಭೇಟಿ ನೀಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ರಾಹುಲ್ ಗಾಂಧಿಯಾಗಲಿ ಕಾಂಗ್ರೆಸ್ ಆಗಲಿ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ.