ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ- ಮೇನಕಾ ಗಾಂಧಿ

0
664

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ತೆಗೆದು ಹಾಕಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಬಿಜೆಪಿಯೊಂದಿಗೆ ದಶಕಗಲ ಸಂಬಂಧದಲ್ಲಿ ತಾನು ಸಂತೃಪ್ತಳು. ರಾಷ್ಟ್ರೀಯ ಕಾರ್ಯಕಾರಿಣಿಗೆ ಸೇರಿಸದ್ದರಿಂದ ತನ್ನ ಮೌಲ್ಯ ಕುಸಿತವಾಗಿಲ್ಲ ಎಂದಿದ್ದಾರೆ.

ಬಿಜೆಪಿಯೊಂದಿಗಿನ 20 ವರ್ಷಗಳ ಸಂಬಂಧದಲ್ಲಿ ತಾನು ಸಂತೃಪ್ತಳು. ಕಾರ್ಯಕಾರಿಣಿಯಲ್ಲಿ ಇರದಿದ್ದರೂ ತನಗೆ ಯಾವುದೇ ರೀತಿಯಲ್ಲಿ ಘನತೆಗೆ ಧಕ್ಕಡಯಾಗಿಲ್ಲ. ಸೇವೆ ಮಾಡುವುದು ಮೊದಲ ಧರ್ಮ, ಜನರ ಹೃದಯದಲ್ಲಿ ಸ್ಥಾನ ಲಭಿಸುವುದಕ್ಕೆ ಆದ್ಯತೆ ಇದೆ ಎಂದು ಮೇನಕಾ ಹೇಳಿದರು.

ಬೇರೆ ಕೆಲವು ಹಿರಿಯ ನಾಯಕರಿಗೂ ಅದರಲ್ಲಿ ಸ್ಥಾನ ಸಿಕ್ಕಿಲ್ಲ. ಹೊಸತಲೆಮಾರಿಗೆ ಅವಕಾಶ ಸಿಗಬೇಕು. ನನಗೆ ನನ್ನ ಕರ್ತವ್ಯದ ಬಗ್ಗೆ ಅರಿವಿದೆ. ನನ್ನ ಕ್ಷೇತ್ರದ ಜನರ ಸೇವೆ ಮಾಡುವುದು ಮೊದಲ ಹೊಣೆ ಎಂದು ಸ್ವಕ್ಷೇತ್ರ ಸುಲ್ತಾನ್‌ಪುರಕ್ಕೆ ಭೇಟಿ ಕೊಟ್ಟ ನಂತರ ಮೇನಕ ಗಾಂಧಿ ಹೇಳಿದರು.

ಮೇನಕಾ ಮತ್ತು ಪುತ್ರ ವರುಣ್ ಗಾಂಧಿಗೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ಸ್ಥಾನ ನೀಡಿಲ್ಲ. ಉತ್ತರಪ್ರದೇಶ ಲಖೀಂಪುರದ ರೈತ ಕೊಲೆಯ ವಿರುದ್ಧ ಕಠಿಣ ಸವಾಲು ಒಡ್ಡಿದ ನಂತರ ಇಬ್ಬರನ್ನೂ ಕಾರ್ಯಕಾರಿಣಿಯಿಂದ ಹೊರಗಿಡಲಾಗಿದೆ.