ರಾಹುಲ್ ಇಂದು ಅಮೇಠಿಗೆ: ಸೋಲಿನ ಅವಲೋಕ ನಿರೀಕ್ಷೆ

0
349

ಅಮೇಠಿ, ಜು. 9: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಅಮೇಠಿಗೆ ಭೇಟಿ ನೀಡಲಿದ್ದಾರೆ. ಈ ವರ್ಷ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿಯನ್ನು ಅಮೇಠಿ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಸೋಲಿನ ನಂತರ ರಾಹುಲ್ ಗಾಂಧಿ ಪ್ರಥಮ ಬಾರಿ ಅಮೇಠಿಗೆ ಭೇಟಿ ನೀಡುತ್ತಿದ್ದಾರೆ. ಸೋಲಿನ ಕಾರಣಗಳ ಅವಲೋಕನಕ್ಕೆ ರಾಹುಲ್ ಭೇಟಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐದು ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರು ಸಹಿತ ಪಾರ್ಟಿ ಪ್ರತಿನಿಧಿಗಳೊಂದಿಗೆ ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಜೊತೆಗೆ ಕೆಲವು ಗ್ರಾಮಗಳನ್ನು ಕೂಡ ಸಂದರ್ಶಿಸಲಿದ್ದಾರೆ. 52,000 ಮತಗಳ ಬಹುಮತದಲ್ಲಿ ರಾಹುಲ್ ಗಾಂಧಿಯನ್ನು ಸ್ಮೃತಿ ಇರಾನಿ ಸೋಲಿಸಿದ್ದಾರೆ.

1999ರಿಂದ ರಾಹುಲ್ ಅಮೇಠಿಯನ್ನು ಪ್ರತಿನಿಧಿಸುತ್ತಾ ಬಂದಿದ್ದರು. ಕೇರಳದ ವಯನಾಡಿನಿಂದ ಈ ಸಲ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ರಾಹುಲ್ ಗಾಂಧಿ ಲೋಕಸಭೆ ಪ್ರವೇಶಿಸಿದ್ದಾರೆ.