ಶೇ 40ರಷ್ಟು ಮುಸ್ಲಿಮರಿದ್ದುದರಿಂದ ರಾಹುಲ್ ವಯನಾಡಿನಲ್ಲಿ ಗೆದ್ದರು- ಅಸದುದ್ದೀನ್ ಉವೈಸಿ

0
650

ಹೈದರಾಬಾದ್,ಜೂ.10: ವಯನಾಡ್ ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶೇ.40ರಷ್ಟು ಮುಸ್ಲಿಮರಿದ್ದುದರಿಂದ ಗೆದ್ದರು ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಹೇಳಿದರು. ಅವರು ಹೈದರಾಬಾದಿನ ಒಂದು ಸಮ್ಮೇಳನದಲ್ಲಿ ಮಾತಾಡುತ್ತಿದ್ದರು. 1947 ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ಸಿಕ್ಕ ನಮ್ಮ ಪೂರ್ವಜರು ಇದೊಂದು ಹೊಸ ಭಾರತ ಆಗಲಿದೆ ಎಂದು ಭಾವಿಸಿದ್ದರು. ಮೌಲಾನಾ ಆಝಾದ್, ನೆಹರೂ, ಅಂಬೇಡ್ಕರ್ ಕೋಟ್ಯಂತರ ಅನುಯಾಯಿಗಳ ಭಾರತ ಆಗಲಿದೆ ಎಂದು ಭಾವಿಸಲಾಗಿತ್ತು. ನನ್ನಲ್ಲಿ ಈಗಲೂ ಈ ಭಾರತದಲ್ಲಿ ಮುಸ್ಲಿಮರಿಗೆ ಸರಿಯಾದ ಸ್ಥಾನಮಾನ ಸಿಗಲಿದೆ ಎನ್ನುವ ನಿರೀಕ್ಷೆ ಉಳಿದುಕೊಂಡಿದೆ. ನಮಗೆ ಯಾರ ಔದಾರ್ಯ ಬೇಕಾಗಿಲ್ಲ. ನಮಗೆ ನಿಮ್ಮ ಔದಾರ್ಯದಲ್ಲಿ ಬದುಕುವ ಅನಿವಾರ್ಯತೆಗಳಿಲ್ಲ ಎಂದು ಉವೈಸಿ ಹೇಳಿದರು.

ನೀವು ಕಾಂಗ್ರೆಸ್ ಅಥವಾ ಇತರ ಜಾತ್ಯತೀತ ಪಾರ್ಟಿಗಳನ್ನು ತೊರೆಯಬೇಕೆಂದು ನಾನು ಹೇಳುವುದಿಲ್ಲ. ಆದರೆ ಅವರಿಗೆ ಶಕ್ತಿಯಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಅವರು ಕಠಿಣ ಪರಿಶ್ರಮ ಮಾಡುವುದಿಲ್ಲ. ಯಾಕೆ ಪಂಜಾಬಿನಲ್ಲಿ ಬಿಜೆಪಿಗೆ ನಷ್ಟವಾಯಿತು. ಅಲ್ಲಿ ಯಾರಿರುವುದು?ಸಿಕ್ಖರಲ್ಲವೇ. ಭಾರತದಲ್ಲಿ ಇತರ ಕಡೆ ಬಿಜೆಪಿ ಸೋಲಿಗೆ ಪ್ರಾದೇಶಿಕ ಪಾರ್ಟಿಗಳೇ ಕಾರಣ. ಅದಕ್ಕೆ ಕಾಂಗ್ರೆಸ್ ಕಾರಣವಲ್ಲ ಎಂದು ಉವೈಸಿ ಹೇಳಿದರು. ವಯನಾಡಿನಲ್ಲಿ 7,05,034 ಮತಗಳು ರಾಹುಲ್‍ಗೆ ಸಿಕ್ಕಿದೆ. ಸಮೀಪ ಸ್ಪರ್ಧಿ ಸಿಪಿಐಯ ಸುನೀರ್‌ಗಿಂತ 4, 31,063 ಮತಗಳ ಅಂತರದ ವಿಜಯವನ್ನು ರಾಹುಲ್ ಇಲ್ಲಿ ದಾಖಲಿಸಿದ್ದಾರೆ.