ಕ್ರೈಸ್ತ ನಾಡಾರ್ ವಿಭಾಗವನ್ನು ಒಬಿಸಿಗೆ ಸೇರಿಸಿದರೆ ಪ್ರತಿಭಟನೆ ನಡೆಸಲಾಗುವುದು: ಕುಟ್ಟಪ್ಪನ್

0
355

ಸನ್ಮಾರ್ಗ ವಾರ್ತೆ

ಕೇರಳ,ಫೆ.4: ಕ್ರೈಸ್ತ ನಾಡಾರ್ ವಿಭಾಗವನ್ನು ಒಬಿಸಿ ಮೀಸಲಾತಿಗೆ ಸೇರಿಸಿದರೆ ಪ್ರತಿಭಟನೆ ನಡೆಸುವುದಾಗಿ ಮೋಸ್ಟ್ ಬ್ಯಾಕ್ವರ್ಡ್ ಕಮ್ಯುನಿಟಿ ಫೆಡರೇಶನ್(ಎಂಬಿಸಿಎಫ್) ಪ್ರಧಾನ ಕಾರ್ಯದರ್ಶಿ ಎಸ್. ಕುಟ್ಟಪ್ಪನ್ ಚೆಟ್ಟಿಯಾರ್ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆಯನ್ನು ಮುಂದಿಟ್ಟು ರಾಜಕೀಯ ಮಾಡಬೇಡಿ. 2,700 ಜನರನ್ನು ನೇಮಿಸುವಾಗ ರೊಟೇಶನ್ ಪ್ರಕಾರ ಒಬ್ಬರಿಗೆ ಕೆಲಸ ಸಿಗುತ್ತದೆ. ಸರಕಾರ ತೀರ್ಮಾನ ಕಾಡಿನ ನ್ಯಾಯವಾಗಿದೆ ಎಂದು ಎಂಬಿಸಿಎಫ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.

ಕೇರಳ ಸರಕಾರದ ಹಿಂದುಳಿದ ಸಮುದಾಯ ಪಟ್ಟಿಯಲ್ಲಿ ಈಗ 87 ಸಮುದಾಯಗಳಿವೆ. ಇವರಿಗೆಲ್ಲ ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಶೇ.40ರಷ್ಟು ಮೀಸಲಾತಿ ನೀಡಲಾಗಿದೆ. (ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗದವರಿಗೆ ಶೇ.10. ಒಟ್ಟು ಶೇ. 50ಮೀಸಲಾತಿ. ಇದರಲ್ಲಿ ಏಳು ಹಿಂದುಳಿದ ಸಮುದಾಯಗಳಿವೆ.

ಈಯವ, ಮುಸ್ಲಿಂ ,ಲ್ಯಾಟಿನ್ ಕ್ಯಾಥೊಲಿಕ್, ವಿಶ್ವಕರ್ಮ, ಧೀವರ, ನಾಡಾರ್ ಕನ್ವರ್ಟೆಡ್ ಕ್ರೈಸ್ತರು) ಶೇ.37 ಆಗಿದೆ. ಉಳಿದ ಎಂಬತ್ತು ಸಮುದಾಯಗಳಿಗೆ ಶೇ.3 ರಷ್ಟು ಮಾತ್ರ ಸಿಗುತ್ತದೆ. 1979ರವರೆಗೆ ಇದು ಶೇ.10ರಷ್ಟಿತ್ತು. ಅದರಲ್ಲಿ 1979ರಲ್ಲಿ ವಿಶ್ವಕರ್ಮ ಸಮುದಾಯ ಮತ್ತು 1980ರಲ್ಲಿ ಧಿವರ ಸಮುದಾಯ, 1982ರಲ್ಲಿ ನಾಡಾರ್ ಸಮುದಾಯಕ್ಕಾಗಿ ಶೇ 7ರಷ್ಟು ಕಡಿತ ಮಾಡಲಾಯಿತು. 1982ರಿಂದ ಶೇ.3ರಷ್ಟು ಮೀಸಲಾತಿ ಸಿಗುತ್ತಿದೆ. 1982ರಲ್ಲಿ ಶೇ. 3ರಕ್ಕೆ ಮೀಸಲಾತಿ ಇಳಿಸಿದಾಗ 63 ಸಮುದಾಯಗಳು ಮಾತ್ರ ಇದ್ದವು.

ಅದರ ಬಳಿಕ ಬೇರೆ ಬೇರೆ ಸರಕಾರಗಳು ಮುಂದುವರಿದ ಸಮುದಾಯವನ್ನು ಈ ಪಟ್ಟಿಗೆ ಸೇರಿಸುತ್ತಿರುವುದು ಮುಂದುವರಿದಿದೆ. ಈ ಗುಂಪಿನಲ್ಲಿ ಈಗ 80 ಸಮುದಾಯಗಳಿವೆ. ಇನ್ನು 12 ಸಮುದಾಯಗಳನ್ನು ಸೇರಿಸಿದಾಗ ಈ ಗುಂಪಿನ ಸಮುದಾಯಗಳ ‌ಸಂಖ್ಯೆ 92 ಆಗುತ್ತದೆ. ಉದ್ಯೋಗ-ಶಿಕ್ಷಣ ರಂಗದಲ್ಲಿ ಈ 92 ಸಮುದಾಯಗಳಿಗೆ ಶೇ3 ಮೀಸಲಾತಿ ಎಂದು ಹೇಳಿದರೆ ಯಾವುದೇ ಸಮುದಾಯಕ್ಕೆ ಯಾವುದೇ ರೀತಿಯ ಪ್ರಯೋಜನ ಇರುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.