ಬರಾಕ್ ಒಬಾಮರ ಆತ್ಮಕತೆ: ಮೊದಲ ದಿನವೇ ದಾಖಲೆಯ ಮಾರಾಟ

0
690

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.20: ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ಪುಸ್ತಕದ ಮೊದಲ ಭಾಗವಾದ ‘ಎ ಪ್ರಾಮಿಸ್ಡ್ ಲ್ಯಾಂಡ್’ ಮೊದಲ ದಿನವೇ ಮಾರಾಟದಲ್ಲಿ ದಾಖಲೆ ಸ್ಥಾಪಿಸಿದೆ. ಅಮೆರಿಕ ಮತ್ತು ಕೆನಡದಲ್ಲಿ 8,89,00 ಪ್ರತಿಗಳು ಮಾರಾಟವಾಗಿದೆ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಂ ಹೌಸ್ ತಿಳಿಸಿದೆ. ಇ-ಬುಕ್, ಆಡಿಯೊ ಬುಕ್ ಕೆಟಗರಿ ಸಹಿತ ಲೆಕ್ಕವಿದು.

ಪ್ರಾಮಿಸ್ಡ್ ಲ್ಯಾಂಡ್ ಮಾರಾಟಕ್ಕೆ ಹತ್ತಿರದಲ್ಲಿರುವ ಇನ್ನೊಂದು ಪುಸ್ತಕ ಮಿಶೆಲ್ ಒಬಾಮರ ಬಿಕಮಿಂಗ್ ಆಗಿದ್ದು ಮೊದಲ ದಿವಸ 7,25,000 ಪ್ರತಿಗಳು ಮಾರಾಟವಾಗಿದ್ದವು.

2018ರಲ್ಲಿ ಬಿಕಮಿಂಗ್ ಹೊರಬಂದಿತ್ತು. ಅಂದಿನಿಂದ ಈವರಗೆ ಮಾರಾಟದಲ್ಲಿ ಅದು ಮುಂಚೂಣಿಯ ಪುಸ್ತಕಗಳಲ್ಲಿ ಬಿಕಮಿಂಗ್ ಒಂದು. ಇದುವರೆಗೆ ಮಾರಾಟವಾದ ಪುಸ್ತಕಗಳಲ್ಲಿ ಮೊದಲ ದಿನ ದಾಖಲೆ ಮಾರಾಟವಾದುದಕ್ಕೆ ಮತ್ತು ಓದುಗರ ಪ್ರತಿಕ್ರಿಯೆಯಿಂದ ಪೆಂಗ್ವಿನ್ ಪ್ರಕಾಶಕರಾದ ಡೆವಿಡ್ ಡ್ರೋಕ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‍ರ ಮೈ ಲೈಫ್ ಮೊದಲ ದಿನವೇ ನಾಲ್ಕು ಲಕ್ಷ ಪ್ರತಿಗಳು ಖರ್ಚಾಗಿದ್ದವು. ಜಾರ್ಜ್ ಡಬ್ಲ್ಯೂ ಬುಶ್‍ರ ಡಿಸಿಶನ್ ಪೊಯಿಂಟ್ಸ್ ಮೊದಲ ದಿನ 2,20,000 ಪ್ರತಿಗಳು ಮಾರಾಟವಾಗಿತ್ತು.