ಕೇರಳ ಸರಕಾರದಿಂದ 1 ರಿಂದ 9ನೇ ತರಗತಿ ವರೆಗೆ ಶಾಲೆ ಮುಚ್ಚಲು ನಿರ್ಧಾರ

0
12

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಕೊರೋನ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಶಾಲೆಗಳನ್ನು ಮುಚ್ಚುವ ಕುರಿತು ಚಿಂತನೆ ನಡೆಯುತ್ತಿದೆ. ಕೊರೋನ ಅವಲೋಕನ ಸಭೆಯಲ್ಲಿ ಈ ಕುರಿತು ತೀರ್ಮಾನವಾಗಲಿದ್ದು ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ಮುಚ್ಚಲಾಗುವುದು ಎಂದು ವರದಿ ತಿಳಿಸಿದೆ.

ಈ ತಿಂಗಳ 21ನೇ ತಾರೀಕಿನಿಂದ ನಿಯಂತ್ರಣಗಳು ಜಾರಿಗೆ ಬರಲಿದೆ. 10, 11, 12ನೇ ತರಗತಿಗಳು ಮಾತ್ರ ಇರುತ್ತವೆ. ಆನ್ ಲೈನ್ ತರಗತಿಗಳು ಮುಂದುವರಿಯಲಿದೆ. ವಿದ್ಯಾರ್ಥಿಗಳ ವಿಷಯದಲ್ಲಿ ಹೆತ್ತವರ ಆತಂಕವನ್ನು ಪರಿಗಣಿಸಿ ಶಾಲೆ ಬಂದ್ ಮಾಡಿ ಆನ್‍ಲೈನ್ ತರಗತಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಇತರ ಕ್ಷೇತ್ರದಲ್ಲಿಯೂ ಈ ನಿಯಂತ್ರಣ ಇರಲಿದ್ದು ರಾತ್ರೆ ಕರ್ಫ್ಯೂ, ವಾರಾಂತ್ಯ ನಿಯಂತ್ರಣಗಳು ಇರುವುದಿಲ್ಲ.

LEAVE A REPLY

Please enter your comment!
Please enter your name here