ಮಾತುಕತೆ ಕೇವಲ ವ್ಯಾಕ್ಸಿನ್ ಬಗ್ಗೆ ಮಾತ್ರ ಆಗಿರಲಿಲ್ಲ: ಮೋದಿ ಟ್ವೀಟ್ ನಲ್ಲಿ ತಿಳಿಸದ್ದನ್ನು ಬಹಿರಂಗಪಡಿಸಿದ ಕೆನಡಾ ಪ್ರಧಾನಿ

0
553

ಸನ್ಮಾರ್ಗ ವಾರ್ತೆ

ಕೆನಡ: ಕೊರೋನಾ ವ್ಯಾಕ್ಸಿನ್ ಗಾಗಿ ಕೆನಡಾ ಪ್ರಧಾನಿ ಕರೆ ಮಾಡಿ ಮಾತುಕತೆ ನಡೆಸಿದ್ದರು ಎಂದು ತಿಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ ನ ಬಳಿಕ ಮಾಹಿತಿ ಹಂಚಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಮಾತುಕತೆ ಕೇವಲ ವ್ಯಾಕ್ಸಿನ್ ಬಗ್ಗೆ ಮಾತ್ರ ಅಲ್ಲ. ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಾಗೂ ಪ್ರಜಾಪ್ರಭುತ್ವ ಮೌಲ್ಯದೊಂದಿಗಿನ ಬದ್ಧತೆ ಬಗ್ಗೆ ಕೂಡ ಮಾತನಾಡಿರುವುದಾಗಿ ಬಹಿರಂಗಪಡಿಸಿದ್ದಾರೆ.

ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೊದೊಂದಿಗಿನ ಪ್ರಧಾನಿ ಮೋದಿಯವರ ಸಮಾಲೋಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಕೆನಡಕ್ಕೆ ಕೊರೊನ ವ್ಯಾಕ್ಸಿನ್ ನೀಡುವ ಕುರಿತು ಭರವಸೆ ನೀಡಿದ್ದೇನೆ ಎಂದು ಮೋದಿ ಟ್ವೀಟ್‍ನಲ್ಲಿ ಹೇಳಿದ್ದರು. ಅಲ್ಲದೇ, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಬಿಕ್ಕಟ್ಟು ವಿಷಯಗಳಲ್ಲಿ ಸಹಕಾರ ಮುಂದುವರಿಯಲಿದೆ ಎಂದು ಟ್ವೀಟ್‍ನಲ್ಲಿ ವಿವರಿಸಿದ್ದರಲ್ಲದೇ, ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಈ ಮಧ್ಯೆ, ಮೋದಿಯ ಟ್ವೀಟ್ ಅನ್ನು ಬೆಂಬಲಿಗರು ವ್ಯಾಕ್ಸಿನ್ ನಿರ್ಮಾಣದಲ್ಲಿ ಭಾರತದ ಸಾಧನೆಯನ್ನು ಹೊಗಳ ತೊಡಗಿದ್ದರು. ಆದರೆ, ಕೆನಡದ ಪ್ರಧಾನ ಮಂತ್ರಿಯ ಹೇಳಿಕೆ ಹೊರಬಂದಾಗ ಉಳಿದ ವಿಷಯ ಏನು ಎಂದು ಸ್ಪಷ್ಟವಾಯಿತು.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೆನಪಿಸಲು ಕೆನಡದ ಪ್ರಧಾನಿ ಕರೆ ಮಾಡಿದ್ದರು. ಇದನ್ನು ಕೊರೊನ ವ್ಯಾಕ್ಸಿನ್ ಕೇಳುವುದಕ್ಕೆ ಫೋನ್ ಮಾಡಿದ್ದೆಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ಹೇಳಿದ್ದರು. ಇತ್ತೀಚೆಗಿನ ಪ್ರತಿಭಟನೆಗಳು, ಪ್ರಜಾಪ್ರಭುತ್ವ ಮೌಲ್ಯದೊಂದಿಗಿನ ಬದ್ಧತೆ, ಚರ್ಚೆಯ ಮೂಲಕ ಸಮಸ್ಯೆ ಪರಿಹರಿಸಬೇಕಾದ ಪ್ರಾಮುಖ್ಯತೆ ಇಬ್ಬರು ಪ್ರಧಾನಿಗಳ ನಡುವೆ ಚರ್ಚೆ ನಡೆದಿದೆ ಎಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.