ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಬಿಲ್ಲವ ಕುಟುಂಬಕ್ಕೆ ಮನೆ ಹಸ್ತಾಂತರ

0
1234

ಸನ್ಮಾರ್ಗ ವಾರ್ತೆ

ಹೂಡೆ: ಪಡುತೋನ್ಸೆಯ ಬೆಂಗ್ರೆಯ ಬಡ ಬಿಲ್ಲವ ಕುಟುಂಬವೊಂದಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಮನೆ ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕದ ಮಾಜಿ ರಾಜ್ಯಾಧ್ಯಕ್ಷರಾದ ಅತರುಲ್ಲಾಹ್ ಷರೀಫ್ ರವರು ಫಲನುಭವಿಯಾದ ಶಕುಂತಲಾ ಅವರಿಗೆ ಮನೆ ಹಸ್ತಾಂತರಿಸಿ ಶುಭ ಹಾರೈಸಿದರು.

ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಐ.ಎಚ್ ಹೂಡೆ ಶಾಖೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮಾತನಾಡಿ, ಇಸ್ಲಾಮಿನ ಪವಿತ್ರ ಗ್ರಂಥ ಅನಾಥರಿಗೆ, ದೀನ ದಲಿತರಿಗೆ ನೆರವಾಗಲು ಬೋಧಿಸುತ್ತದೆ. ಅದು ನಮ್ಮ ಕೆಲಸಕ್ಕೆ ಪ್ರೇರಣೆ ಎಂದರು.

ನೆರೆ ಮನೆಯವರು ಹಸಿದಿರುವಾಗ ಉಂಡು ಮಲಗುವವನು ಮುಸ್ಲಿಮನಾಗಲು ಸಾಧ್ಯವಿಲ್ಲ ಎಂಬ ಆದರ್ಶೀಯ ಮೌಲ್ಯವನ್ನು ಪ್ರವಾದಿಯವರು ನಮಗೆ ಬೋಧಿಸಿದ್ದಾರೆ. ಅವರ ಬೋಧನೆಯ ಸಾರದಂತೆ ನಾವು ಜಾತಿ ಮತ ಬೇಧವೆನ್ನದೆ ನಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದೇವೆ ಎಂದರು.

ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯರಾದ ಸುಲೋಚನಾ, ಮಾಜಿ ಪಂಚಾಯತ್ ಸದಸ್ಯರಾದ ಗಂಗಾಧರ, ಪಂಚಾಯತ್ ಸದಸ್ಯರಾದ ಹೈದರ್ ಹೂಡೆ, ಬಿಲ್ಲವ ಸಂಘ ಹೂಡೆಯ ಅಧ್ಯಕ್ಷ ಶಂಕರ್ ಅಂಚನ್, ಅನ್ವರ್ ಅಲಿ ಕಾಪು, ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ವಿಜಯ್, ಡಾ.ಫಹೀಮ್, ಧಿರೇಂದ್ರ, ಪ್ರತಿಭಾ, ರವೂಫ್ ಹೂಡೆ, ಅಸ್ಲಮ್ ಹೈಕಾಡಿ ಉಪಸ್ಥಿತರಿದ್ದರು.