ಪಂಜಾಬಿನಲ್ಲಿ ಸಂಯುಕ್ತ ಸಮಾಜ ಮೋರ್ಚಾ, ಸಂಯುಕ್ತ ಸಂಘರ್ಷ ಪಾರ್ಟಿ ನಡುವೆ ಮೈತ್ರಿ

0
291

ಸನ್ಮಾರ್ಗ ವಾರ್ತೆ

ಚಂಡಿಗಡ: ಪಂಜಾಬಿನ ವಿಧಾನಸಭಾ ಚುನಾವಣೆಯಲ್ಲಿ ಬಲ್‍ಬೀರ್ ಸಿಂಗ್ ರಜ್‍ವಾಲ್‍ರ ಸಂಯುಕ್ತ ಸಮಾಜ ಮೋರ್ಚಾ ಮತ್ತು ಗುರ್ನಾಂ ಸಿಂಗ್ ಚಡೂನಿಯವರ ಸಂಯುಕ್ತ ಸಂಘರ್ಷ ಪಾರ್ಟಿ ನಡುವೆ ಮೈತ್ರಿ ಮಾಡಿಕೊಂಡಿದ್ದು, ಚುನಾವಣೆಯನ್ನು ಜತೆಯಾಗಿ ಸ್ಪರ್ಧಿಸಲಿದ್ದಾರೆ. ಮೋರ್ಚಾ 17 ಮತ್ತು ಪಾರ್ಟಿ ಹತ್ತು ಸೀಟುಗಳಲ್ಲಿ ಉಮೇದುವಾರರನ್ನು ಘೋಷಿಸಿದೆ.

ಮೋರ್ಚಾ 57 ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ಇತರ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಪ್ರೇಮ್ ಸಿಂಗ್ ತಿಳಿಸಿದರು. ಹರಿಯಾಣ ಕೇಂದ್ರವಾಗಿ ಕಾರ್ಯ ನಿರ್ವಹಿಸುವ ರೈತ ನಾಯಕ ಗುರ್ನಾಂ ಸಿಂಗ್ ಚಡೂನಿ, ರೈತ ಸಂಘಟನೆಯ ರಾಜಕೀಯ ಮುಖ ಸಂಯುಕ್ತ ಸಮಾಜ್ ಮೋರ್ಚಾ ಎನ್ನಲಾಗುತ್ತಿದೆ.

117 ಶಾಸಕರ ಪಂಜಾಬ್ ವಿಧಾನಸಭೆಗೆ ಫೆಬ್ರುವರಿ 20ಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆಯ ಅಯೋಗ ನಿರ್ಧರಿಸಿದಂತೆ ಎಲ್ಲವೂ ನಡೆದರೆ ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ.