ಸೌದಿ: ಚಳಿಯನ್ನು ತಡೆಯಲು ಬಳಸಿದ ಹೀಟರ್ ಗೆ ನಾಲ್ಕು ಬಲಿ

0
390

ಸನ್ಮಾರ್ಗ ವಾರ್ತೆ

ಸೌದಿಯಲ್ಲಿ ಚಳಿ ತೀವ್ರವಾಗಿದೆ. ಚಳಿಯನ್ನು ಓಡಿಸಲು ಅನುಕೂಲ ಇದ್ದವರು ಹೀಟರ್ ಬಳಸುತ್ತಾರೆ. ಹಿಟರ್ ಬಳಸುವಾಗ ಜಾಗ್ರತೆ ವಹಿಸದಿದ್ದರೆ ಮಾರಣಾಂತಿಕವಾಗಿ ಬಹುದು. ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದ ಹಫ್ರ್ ಅಲ್ ಬಾತಿನ್ ಎಂಬ ಪ್ರದೇಶದಲ್ಲಿ ಹೀಟರ್ ನಿಂದ ಉಂಟಾದ ಬೆಂಕಿಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರು ಯಮನ್ ಮೂಲದವರು ಎಂದು ಹೇಳಲಾಗಿದೆ.

ವಾಯ್ಸ್ 2ಕುಟುಂಬದ ಹಿರಿಯ ಸಹ ಸದಸ್ಯ ಮುಹಸಿನ್ ಅಲ್ ಹಾದಿ, ಅವರ ಮಗಳು ಅಳಿಯ ಮತ್ತು ಮೊಮ್ಮಕ್ಕಳು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನ ಚಿಕ್ಕಚಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಮುಂಜಾನೆ ನಾಲ್ಕು ಮೂವತ್ತರ ಹೊತ್ತಿಗೆ ಇಲ್ಲಿಯ ನಾಗರಿಕ ರಕ್ಷಣಾ ಸಿಬ್ಬಂದಿಗೆ ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕಿತು. ರಕ್ಷಣಾ ಕಾರ್ಯಕರ್ತರು ಕೂಡಲೇ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಅಷ್ಟೊತ್ತಿಗಾಗಲೇ ನಾಲ್ಕು ಜನರು ಮೃತಪಟ್ಟಿದ್ದರು.