ಸೌದಿಅರೇಬಿಯ: ವಿದೇಶಿ ಕಾರ್ಮಿಕರು ವಾಟ್ಸಪ್‍ನಲ್ಲಿ ದೂರು ನೀಡಬಹುದು

0
945

ಜುಬೈಲ್,ಮೇ10: ವಿದೇಶಿ ಕಾರ್ಮಿಕರ ಕೆಲಸಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ವಾಟ್ಸಪ್ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಿಸಿದ ಕೊನೆಯ ಘಟ್ಟದ ಕೆಲಸಗಳು ನಡೆಯುತ್ತಿವೆ ಎಂದು ಜುಬೈಲ್ ಲೇಬರ್ ಚೀಪ್ ಆಫಿಸರ್ ಮುತತಾಕ್ ದಹಂ ಅಲ್ ಕಹ್ತಾನಿ ಹೇಳಿದರು. ಜುಬೈಲ್ ಲೇಬರ್ ಆಫೀಸಿನ ಭಾರತದ ದೂತವಾಸದ ಅಧಿಕಾರಿಗಳು, ಸಮಾಜ ಸೇವಕರ ಸತತ ಪ್ರಯತ್ನದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈಗ ಕೆಲಸದಲ್ಲಿನ ಸಮಸ್ಯೆ ಇದ್ದರೆ ಲೇಬರ್ ಕಚೇರಿಗೆ ನೇರವಾಗಿ ಹೋಗಿ ದೂರು ನೀಡಬೇಕಾದ ಪರಿಸ್ಥಿತಿಯಿದೆ. ಇನ್ನು ಮುಂದೆ ಇದರಲ್ಲಿ ಬದಲಾವಣೆಯಾಗಲಿದೆ.