ಸೆಪ್ಟೆಂಬರ್ 18: ಪಾಣೆಮಂಗಳೂರಿಗೆ ಅಬ್ದುಲ್ ಹಕೀಮ್ ನದ್ವಿ

0
337

ಸನ್ಮಾರ್ಗ ವಾರ್ತೆ

ಪಾಣೆಮಂಗಳೂರು: ಕೇರಳದ ಸುಪ್ರಸಿದ್ಧ ವಾಗ್ಮಿ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಕೀಮ್ ನದ್ವಿ ಸೆಪ್ಟೆಂಬರ್ 18ರಂದು ಪಾಣೆಮಂಗಳೂರಿಗೆ ಆಗಮಿಸಲಿದ್ದಾರೆ.

ಅವರು ಇಲ್ಲಿನ ಸಾಗರ್ ಆಡಿಟೋರಿಯಂನಲ್ಲಿ ಅಂದು ಸಂಜೆ ಗಂಟೆ 7ಕ್ಕೆ ಸರಿಯಾಗಿ ಕ್ರಾಂತಿಯ ಜ್ಯೋತಿ ಪ್ರವಾದಿ ಮೊಹಮ್ಮದ್ ಎಂಬ ಅಭಿಯಾನದ ಪ್ರಯುಕ್ತ ನಡೆಯುವ ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ತಾಲೂಕು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಲ್ಲದೆ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಭಾಗವಹಿಸಲಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಬಂಟ್ವಾಳ ತಾಲೂಕು ಸಮಾವೇಶದ ಸಂಚಾಲಕ ಅಬ್ದುಲ್ಲಾ ಚೆಂಡಾಡಿ ತಿಳಿಸಿದ್ದಾರೆ.