ಕುಪ್ಪೆಪದವು ಕಿಂಗ್ಸ್ ಹೊರಿಝೋನ್ ವಾಣಿಜ್ಯ ಕಟ್ಟಡದ ಜಿನಸಿ ಅಂಗಡಿಯಲ್ಲಿ ಎರಡನೇ ಬಾರಿ ಅಗ್ನಿ ದುರಂತ

0
447

ಸನ್ಮಾರ್ಗ ವಾರ್ತೆ

ಮಂಗಳೂರು ತಾಲೂಕು ಕಿಲೆಂಜಾರು ಗ್ರಾಮದ ಕುಪ್ಪೆಪದವು ಎಂಬಲ್ಲಿ ಕಿಂಗ್ಸ್ ಹೊರಿಝೋನ್ ವಾಣಿಜ್ಯ ಕಟ್ಟಡದ ಜಿನಸಿ ಅಂಗಡಿಯೊಂದಕ್ಕೆ ಸೋಮವಾರ ಮುಂಜಾನೆ ಬೆಂಕಿ ತಗುಲಿ ಭಾರೀ ನಷ್ಟ ಸಂಭವಿಸಿದೆ.

ಕಿಂಗ್ಸ್ ಹೊರಿಝೋನ್‌ನಲ್ಲಿ ನೆಲ ಅಂತಸ್ತಿನಲ್ಲಿ ಕೊಳವೂರು ರಹೀದಾ ಎಂಬವರಿಗೆ ಸೇರಿದ ಜಿನಸಿ ಅಂಗಡಿಯಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಬೆಂಕ್ ಅನಾಹುತ ಸಂಭವಿಸಿತ್ತು. ನಂತರ ರಹೀದಾ ಇದೇ ಕಟ್ಟಡದ ಇನ್ನೊಂದು ಅಂಗಡಿಗೆ ಸ್ಥಳಾಂತರಗೊಂಡಿದ್ದು, ಇದೀಗ ಇದೇ ಅಂಗಡಿಯಲ್ಲಿ ಸೋಮವಾರ ಮುಂಜಾನೆ ಮತ್ತೆ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಜಿನಸಿ ಸಾಮಾಗ್ರಿ, ರೆಫ್ರಿಜರೇಟರ್ ಹಾಗೂ ಸುಮಾರು 50 ಸಾವಿರ ನಗದು ಸೇರಿದಂತೆ 3 ಲಕ್ಷಕ್ಕೂ ಮಿಕ್ಕಿದ ನಷ್ಟ ಸಂಭವಿಸಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನ ಮನೆಗಳಿಗೆ ಬೆಂಕಿ ಹರಡಿ ಆಗಬಹುದಾದ ಭಯಾನಕ ಅನಾಹುತ ತಪ್ಪಿದೆ.

ಇದೇ ಕಟ್ಟಡದಲ್ಲಿ ಪದೇ ಪದೇ ಶಾರ್ಟ್ ಸರ್ಕ್ಯೂಟ್ ಆಗುತ್ತಿರುವುದು ಇಡೀ ವಾಣಿಜ್ಯ ಕಟ್ಟಡದ ಸುರಕ್ಷತೆಯ ಬಗ್ಗೆ ಸಂಶಯ ಮೂಡುವಂತಾಗಿದೆ.