ಸನ್ಮಾರ್ಗ ವಾರ್ತೆ
ಕುವೈಟ್: ಇಂದು ಮುಂಜಾನೆ ಹಲವಾರು ಯಸ್.ಎಸ್ ಸೇನಾ ವಿಮಾನಗಳು ಪತನಗೊಂಡಿರುವುದಾಗಿ ಕುವೈಟ್ ರಕ್ಷಣ ಸಚಿವಾಲಯ ತಿಳಿಸಿದೆ. ವಿಮಾನ ಸಿಬ್ಬಂದಿಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಮತ್ತು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದಾದ ಹಾನಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












