ಸನ್ಮಾರ್ಗ ವಾರ್ತೆ
ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಾರದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿರುವುದಾಗಿ ವರದಿಯಾಗಿದೆ. ಸಂಪ್ರದಾಯವನ್ನು ರಕ್ಷಿಸುವುದು ತನ್ನ ಉದ್ದೇಶ ಎಂದು ಮಂಡಳಿ ಹೇಳಿದ್ದು, ಈ ನಿಲುವನ್ನು ಸುಪ್ರೀಂ ಕೋರ್ಟ್ಗೆ ತಿಳಿಸಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ನ ಪ್ರಸ್ತುತ ತೀರ್ಪನ್ನು ವಿರೋಧಿಸಿ ಮಾರ್ಚ್ 14ರ ಒಳಗಾಗಿ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸುವುದಾಗಿ ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಹೇಳಿದ್ದಾರೆ ಎಂದು ‘ಮೀಡಿಯಾ ಒನ್’ ವರದಿ ಮಾಡಿದೆ.












