ಅಮೆರಿಕದಲ್ಲಿ ಗುಂಡೇಟಿಗೀಡಾಗಿ ನಾಲ್ವರು ಭಾರತೀಯರ ದಾರುಣ ಸಾವು

0
610

ವಾಷಿಂಗ್ಟನ್, ಜೂ.17: ಇಬ್ಬರು ಗಂಡು ಮಕ್ಕಳ ಸಹಿತ ಭಾರತೀಯ ಮೂಲದ ಕುಟುಂಬದ ನಾಲ್ವರು ಅಮೆರಿಕದಲ್ಲಿ ಗುಂಡಿಗಾಹುತಿಯಾಗಿದ್ದಾರೆ. ಅಮೆರಿಕದ ರಾಜ್ಯವಾದ ಲೋವದ ವೆಸ್ಟ್ ಡೇಸ್ ಮೊಯಿನ್ಸ್ ನಲ್ಲಿ ಶನಿವಾರ ಬೆಳಗ್ಗೆ ಘಟನೆ ನಡೆದಿದ್ದು ನಾಲ್ವರ ಮೃತದೇಹ ಮನೆಯೊಳಗೆ ಕಂಡು ಬಂದಿದೆ.

ಚಂದ್ರಶೇಖರ್ ಸಂಕಾರ (44), ಲಾವಣ್ಯ ಸಂಕಾರ (41), ಹತ್ತು ಮತ್ತು ಹದಿನೈದು ವರ್ಷದ ಮಕ್ಕಳಿಬ್ಬರು ಸಹಿತ ನಾಲ್ಕು ಮಂದಿ ಗುಂಡಿಗೆ ಬಲಿಯಾಗಿದ್ದಾರೆ. ಇವರ ಮನೆಯಲ್ಲಿ ಅತಿಥಿಗಳಿದ್ದರು. ಅವರು ಹೊರಗೆ ಹೋಗಿ ಬರುವಷ್ಟರಲ್ಲಿ ಕೊಲೆಪಾತಕ ನಡೆದು ಹೋಗಿತ್ತು. ಹಲವು ಬಾರಿ ಗುಂಡು ಹಾರಿಸಿದ ಗುರುತುಗಳು ಮೃತದೇಹದಲ್ಲಿದೆ. ಘಟನೆಯನ್ನು ಪೊಲೀಸರು ತನಿಖೆ ಆರಂಭಿಸಿದ್ದಾರೆ.